HomeLatest Newsಚಳಿಗಾಲದಲ್ಲಿ ಮದ್ಯ ಸೇವನೆಯಿಂದ ಉಂಟಾಗಬಹುದು ಹೃದಯಾಘಾತ.......! ಇಲ್ಲಿದೆ ಮಹತ್ವದ ಮಾಹಿತಿ

ಚಳಿಗಾಲದಲ್ಲಿ ಮದ್ಯ ಸೇವನೆಯಿಂದ ಉಂಟಾಗಬಹುದು ಹೃದಯಾಘಾತ…….! ಇಲ್ಲಿದೆ ಮಹತ್ವದ ಮಾಹಿತಿ

ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಬೇಕು ಅಂತಾ ಅತಿಯಾದ ದೈಹಿಕ ಚಟುವಟಿಕೆ ಹಾಗೂ ಮಿತಿಮೀರಿ ಮದ್ಯಪಾನವನ್ನು ಮಾಡುವುದರಿಂದ ಹೃದಯವು ದುರ್ಬಲಗೊಳ್ಳಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಹೃದಯದ ಸ್ನಾಯುವಿನ ಮೇಲೆ ಮದ್ಯಪಾನವು ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಇದರಿಂದ ರಕ್ತವನ್ನು ಪರಿಣಾಮಕಾರಿಯಾಗಿ ಪಂಪ್​ ಮಾಡಲು ಸಾಧ್ಯವಿಲ್ಲ. ಇದರಿಂದ ಹೃದಯ ವೈಫಲ್ಯ ಉಂಟಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಸಮತೋಲನಕಾರಿ ಆಹಾರ ಸೇವನೆ, ಒತ್ತಡ ಮುಕ್ತ ಜೀವನ, ಧೂಮಪಾನ, ಮದ್ಯಪಾನಗಳನ್ನು ತ್ಯಜಿಸುವುದು, ದೇಹದಲ್ಲಿ ಸಕ್ಕರೆ ಅಂಶವನ್ನು ಸಮದೂಗಿಸಿಕೊಳ್ಳುವುದು, ರಕ್ತದೊತ್ತಡ ನಿಯಂತ್ರಣ ಹಾಗೂ ಕೊಬ್ಬಿನ ಅಂಶಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಲೇ ಇರುವ ಮೂಲಕ ನೀವು ಹೃದಯದ ಕಾಳಜಿಯನ್ನು ಮಾಡಬಹುದಾಗಿದೆ ಎಂದು ತಜ್ಞ ವೈದ್ಯರು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಲ್ಕೋಹಾಲಿನ್​ ಕಾರ್ಡಿಯೋಮಿಪತಿ ದೀರ್ಘಕಾಲದ ಮದ್ಯಪಾನ ಸೇವನೆಯಿಂದ ಉಂಟಾಗುವ ಸಮಸ್ಯೆಯಾಗಿದೆ. ಈ ಸಮಸ್ಯೆ ಉಂಟಾದವರಲ್ಲಿ ಅನಿಯಮಿತ ಹೃದಯ ಬಡಿತ ಹಾಗೂ ರಕ್ತ ಹೆಪ್ಪುಗಟ್ಟುವ ಮೂಲಕ ಹೃದಯ ಸ್ಥಂಭನ ಉಂಟಾಗುವ ಸಾಧ್ಯತೆ ಇರುತ್ತದೆ.

ಅತಿಯಾದ ಮದ್ಯಪಾನ ಸೇವನೆಯು ನಿಮ್ಮ ಹೃದಯ ಸೇರಿದಂತೆ ದೇಹದ ಅನೇಕ ಅಂಗಾಂಗಗಳ ಮೇಲೆ ವಿಷಕಾರಿ ಪರಿಣಾಮವನ್ನು ಬೀರುತ್ತದೆ. ಅತಿಯಾದ ಮದ್ಯಪಾನ ಸೇವನೆಯು ಕಾಲಾಂತರದಲ್ಲಿ ಹೃದಯದ ಸ್ನಾಯುಗಳನ್ನು ಹಾನಿಗೊಳಿಸುತ್ತದೆ ಹಾಗೂ ದುರ್ಬಲಗೊಳಿಸುತ್ತದೆ. ಇದರಿಂದ ಹೃದಯಕ್ಕೆ ರಕ್ತವನ್ನು ಪಂಪ್​ ಮಾಡಲು ಸಾಧ್ಯವಾಗೋದಿಲ್ಲ ಎಂದು ತಜ್ಞ ವೈದ್ಯರು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular