HomeLatest Newsಸೇಬು ಹಣ್ಣು ಸೇವಿಸಿದ ತಕ್ಷಣ ಇವುಗಳನ್ನು ಸೇವಿಸಿದ್ರೆ ತಂದೊಡ್ಡುತ್ತೆ ಅನಾರೋಗ್ಯ

ಸೇಬು ಹಣ್ಣು ಸೇವಿಸಿದ ತಕ್ಷಣ ಇವುಗಳನ್ನು ಸೇವಿಸಿದ್ರೆ ತಂದೊಡ್ಡುತ್ತೆ ಅನಾರೋಗ್ಯ

ಸೇಬುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದೆಂದು ಪರಿಗಣಿಸಲಾಗಿದೆ. ಇದು ಅನೇಕ ಜೀವಸತ್ವಗಳ ಮೂಲವಾಗಿದೆ. ಆದರೆ ಸೇಬು ತಿಂದ ತಕ್ಷಣ ಕೆಲವೊಂದು ಆಹಾರಗಳನ್ನು ಸೇವಿಸಬಾರದು. ಇದರಿಂದ ದೇಹ ಅನಾರೋಗ್ಯಕ್ಕೆ ತುತ್ತಾಗುತ್ತದೆ. ಅಂತಹ ಆಹಾರಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.

-ಸೇಬು ತಿಂದ ತಕ್ಷಣ ಮೂಲಂಗಿಯನ್ನು ಸೇವಿಸಬಾರದು. ಇದು ಚರ್ಮದ ತೊಂದರೆಗಳಿಗೆ ಕಾರಣವಾಗಬಹುದು. ಹಾಗೂ ಶೀತದ ಸಮಸ್ಯೆ ಕಾಡಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

-ಸೇಬು ತಿಂದ ಬಳಿಕ ನೀರನ್ನು ಕುಡಿಯಬಾರದು. ಇದರಿಂದ ಪಿಹೆಚ್ ಮಟ್ಟ ಹಾನಿಗೊಳಗಾಗಿ ಚರ್ಮದ ಮೇಲೆ ಸುಕ್ಕುಗಳು ಮೂಡುತ್ತವೆ. ಹಾಗೇ ಇದರಿಂದ ಅಜೀರ್ಣ, ಮಲಬದ್ಧತೆ, ಅನಿಲ ಸಮಸ್ಯೆ ಕಾಡುತ್ತದೆ.

-ಸೇಬು ತಿಂದ ಬಳಿಕ ಸಿಟ್ರಸ್ ಹಣ್ಣುಗಳನ್ನು ಸೇವಿಸಬಾರದು. ಸೇಬುವಿನಲ್ಲಿಯೂ ವಿಟಮಿನ್ ಸಿ ಇರುವುದರಿಂದ ದೇಹದಲ್ಲಿ ಸಿಟ್ರಸ್ ಆಮ್ಲ ಹೆಚ್ಚಾಗಿ ಹೊಟ್ಟೆಯಲ್ಲಿ ಕಿರಿಕಿರಿಯನ್ನುಂಟು ಮಾಡುತ್ತದೆ.

-ಸೇಬು ತಿಂದ ಕೂಡಲೆ ಉಪ್ಪಿನಕಾಯಿ ಅಥವಾ ನಿಂಬೆ ಹಣ್ಣು ಸೇವಿಸಬೇಡಿ. ಇದು ಅನಿಲ, ಆಮ್ಲೀಯತೆ ಮತ್ತು ಮಲಬದ್ಧತೆಗೆ ಕಾರಣವಾಗುತ್ತದೆ.

-ಸೇಬು ತಿಂದ ಬಳಿಕ ಹಾಲು ಕುಡಿಯಬಾರದು. ಇದರಿಂದ ಹೊಟ್ಟೆ ಹಾಳಾಗುತ್ತದೆ. ಇದು ಜೀರ್ಣಕ್ರಿಯೆ ಸಮಸ್ಯೆಯನ್ನು ಉಂಟುಮಾಡುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular