HomeLatest Newsಗರ್ಭಿಣಿಯರು ಒತ್ತಡಕ್ಕೆ ಒಳಗಾದರೆ ಮಗುವಿನ ಮೆದುಳಿನ ಬೆಳವಣಿಗೆ ಮೇಲಾಗುತ್ತೆ ನಕಾರಾತ್ಮಕ ಪರಿಣಾಮ.....!

ಗರ್ಭಿಣಿಯರು ಒತ್ತಡಕ್ಕೆ ಒಳಗಾದರೆ ಮಗುವಿನ ಮೆದುಳಿನ ಬೆಳವಣಿಗೆ ಮೇಲಾಗುತ್ತೆ ನಕಾರಾತ್ಮಕ ಪರಿಣಾಮ…..!

ಗರ್ಭಿಣಿಯರು ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಹೊಟ್ಟೆಯಲ್ಲಿ ಮಗುವನ್ನು ಜೋಪಾನ ಮಾಡುವ ತಾಯಿ, ಊಟ, ತಿಂಡಿ ಜೊತೆಗೆ ಮಾನಸಿಕವಾಗಿಯೂ ಸಂತೋಷದಿಂದಿರಬೇಕು. ಇದನ್ನು ಯಾಕಿಷ್ಟು ಒತ್ತಿ ಹೇಳುತ್ತಿದ್ದೇವೆಂದರೆ ಗರ್ಭಿಣಿ ಮಾನಸಿಕ ಒತ್ತಡಕ್ಕೆ ಒಳಗಾದರೆ ಅದು ಮಗುವಿನ ಮೆದುಳಿನ ಮೇಲೆ ಪರಿಣಾಮ ಉಂಟುಮಾಡುತ್ತದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.

ಸಂಶೋಧಕರ ಪ್ರಕಾರ, ಪ್ರಸವಪೂರ್ವದಲ್ಲಿ ಮಹಿಳೆಯಲ್ಲಿ ತೀವ್ರ ತರಹದ ಖಿನ್ನತೆ, ಮಾನಸಿಕ ಒತ್ತಡ, ಆತಂಕಗಳಿದ್ದಲ್ಲಿ ಗರ್ಭದಲ್ಲಿರುವ ಶಿಶುವಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮಗುವಿನ ಮೆದುಳಿನ ಬೆಳವಣಿಗೆ ಮೇಲೂ ಇದು ನಕಾರಾತ್ಮಕ ಪರಿಣಾಮ ಉಂಟುಮಾಡುತ್ತದೆ.

ಹೀಗಾಗಿ ತಾಯಿ ಮಾಡುವ ಆಲೋಚನೆ, ಚಿಂತನೆ ಎಲ್ಲವೂ ಮಗುವಿನ ಮೇಲೆ ಪ್ರಭಾವ ಬೀರುವುದರಿಂದ ಸಾಕಷ್ಟು ಒಳ್ಳೆಯ ಧನಾತ್ಮಕ ಆಲೋಚನೆಯೊಂದಿಗೆ ಸಂತೋಷದಿಂದಿರುವುದು ತಾಯಿ ಹಾಗೂ ಮಗುವಿನ ದೃಷ್ಟಿಯಿಂದ ಒಳ್ಳೆಯದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular