HomeLive NewsBREAKING : ನಾನು ಆತ್ಮಹತ್ಯೆ ಮಾಡಿಕೊಂಡ್ರೆ 'IT' ಅಧಿಕಾರಿಗಳೇ ಹೊಣೆ : ಉದ್ಯಮಿ KGF ಬಾಬು...

BREAKING : ನಾನು ಆತ್ಮಹತ್ಯೆ ಮಾಡಿಕೊಂಡ್ರೆ ‘IT’ ಅಧಿಕಾರಿಗಳೇ ಹೊಣೆ : ಉದ್ಯಮಿ KGF ಬಾಬು ಸ್ಫೋಟಕ ಹೇಳಿಕೆ !


ಬೆಂಗಳೂರು: ಖ್ಯಾತ ಉದ್ಯಮಿ ಸಿ.ಜೆ. ರಾಯ್ ಅವರ ಅನಿರೀಕ್ಷಿತ ಸಾವಿನ ಬೆನ್ನಲ್ಲೇ ಇದೀಗ ಮತ್ತೋರ್ವ ಪ್ರಭಾವಿ ಉದ್ಯಮಿ ಕೆಜಿಎಫ್ ಬಾಬು ಆದಾಯ ತೆರಿಗೆ (IT) ಇಲಾಖೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ನಾನು ಆತ್ಮಹತ್ಯೆ ಮಾಡಿಕೊಂಡ್ರೆ ‘IT’ ಅಧಿಕಾರಿಗಳೇ ಹೊಣೆ ಎಂದು ಉದ್ಯಮಿ KGF ಬಾಬು ಸ್ಫೋಟಕ ಹೇಳಿಕೆ ನೀಡಿದ್ದಾರೆ. ‘’ಐಟಿ ಅಧಿಕಾರಿಗಳು ನನಗೆ ನೋಟಿಸ್ ನೀಡಿ ಹಿಂಸೆ ನೀಡುತ್ತಿದ್ದಾರೆ. ಈ ಹಿಂದೆ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೆ, ಆದರೆ ಹೆಂಡತಿ, ಮಕ್ಕಳ ಮುಖ ನೋಡಿ ಸುಮ್ಮನಾಗಿದ್ದೆ’’ ಎಂದು ಕೆಜಿಎಫ್ ಬಾಬು ಹೇಳಿದ್ದಾರೆ.

ಐಟಿ ಅಧಿಕಾರಿಗಳಿಂದ ಚಿತ್ರಹಿಂಸೆ: “ನಾನು 7,000 ಕೋಟಿ ರೂಪಾಯಿ ಒಡೆಯನಾಗಿರಬಹುದು, ಆದರೆ ನನಗೂ ಈಗ ನೆಮ್ಮದಿ ಇಲ್ಲದಂತಾಗಿದೆ. ಐಟಿ ಅಧಿಕಾರಿಗಳು ನೀಡುತ್ತಿರುವ ಚಿತ್ರಹಿಂಸೆಯಿಂದ ನನಗೆ ಜೀವನವೇ ಸಾಕಾಗಿದೆ” ಎಂದು ಬಾಬು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನಿಖೆಯ ಹೆಸರಿನಲ್ಲಿ ಅಧಿಕಾರಿಗಳು ಮಾನಸಿಕವಾಗಿ ಕುಗ್ಗಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿದ್ದಾರ್ಥ್ ಮತ್ತು ಸಿ.ಜೆ. ರಾಯ್ ಸಾವು ಪ್ರಸ್ತಾಪ: ಈ ಹಿಂದೆ ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡಾಗಲೂ ಐಟಿ ಇಲಾಖೆಯ ಕಿರುಕುಳದ ಮಾತುಗಳು ಕೇಳಿಬಂದಿದ್ದವು. ಇದನ್ನು ನೆನಪಿಸಿದ ಕೆಜಿಎಫ್ ಬಾಬು, “ಸಿದ್ದಾರ್ಥ್ ಮತ್ತು ಇತ್ತೀಚಿನ ಸಿ.ಜೆ. ರಾಯ್ ಅವರ ಸಾವಿಗೆ ಐಟಿ ಅಧಿಕಾರಿಗಳೇ ನೇರ ಕಾರಣ. ಇಲಾಖೆಯ ಒತ್ತಡ ತಡೆಯಲಾರದೆ ಅವರು ಅಂತಹ ನಿರ್ಧಾರ ಕೈಗೊಂಡಿದ್ದಾರೆ. ಮುಂದೆ ನನಗೂ ಹೀಗೆ ಆಗಬಹುದು ಎಂಬ ಭಯ ಕಾಡುತ್ತಿದೆ” ಎಂದಿದ್ದಾರೆ.

ತನಿಖೆಗೆ ಆಗ್ರಹ: “ಒಂದು ವೇಳೆ ನಾನು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಐಟಿ ಅಧಿಕಾರಿಗಳೇ ಹೊಣೆ” ಎಂದು ನೇರವಾಗಿ ಹೇಳಿಕೆ ನೀಡಿರುವ ಅವರು, ಈ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಉದ್ಯಮಿಗಳ ಮೇಲೆ ನಡೆಯುತ್ತಿರುವ ಈ ರೀತಿಯ ನಿರಂತರ ದಾಳಿ ಮತ್ತು ಒತ್ತಡವು ಅವರ ಜೀವಕ್ಕೆ ಕುತ್ತು ತರುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ.

ಗಮನಿಸಿ: ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ನೀವು ಅಥವಾ ನಿಮ್ಮ ಪರಿಚಯಸ್ಥರು ಮಾನಸಿಕ ಒತ್ತಡದಲ್ಲಿದ್ದರೆ ದಯವಿಟ್ಟು ಸಹಾಯವಾಣಿಗಳನ್ನು ಸಂಪರ್ಕಿಸಿ (080-25497777)

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular