HomeIndiaBIG NEWS: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಅತಿ ಹೆಚ್ಚು ದೇಣಿಗೆ ನೀಡಿದ ದಾನಿ ಯಾರು...

BIG NEWS: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಅತಿ ಹೆಚ್ಚು ದೇಣಿಗೆ ನೀಡಿದ ದಾನಿ ಯಾರು ಗೊತ್ತಾ…?

ಅಯೋಧ್ಯೆ: ಜನವರಿ 22 ರಂದು ಸೋಮವಾರ ಅಯೋಧ್ಯೆಯ ರಾಮ ಮಂದಿರದಲ್ಲಿ ಭಗವಾನ್ ರಾಮನ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ.

ರಾಮಮಂದಿರ ನಿರ್ಮಾಣಕ್ಕಾಗಿ ದೇಶದಾದ್ಯಂತ ಖ್ಯಾತನಾಮರು, ಉದ್ಯಮಿಗಳು ಸೇರಿದಂತೆ ಜನಸಾಮಾನ್ಯರು ದೇಣಿಗೆ ನೀಡಿದ್ದಾರೆ. ದೇಗುಲ ನಿರ್ಮಾಣದ ಹೊಣೆ ಹೊತ್ತಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ನ ಖಜಾಂಚಿ ಅವರ ಪ್ರಕಾರ, ದೇವಾಲಯದ ನಿರ್ಮಾಣಕ್ಕೆ ಇದುವರೆಗೆ 1,100 ಕೋಟಿ ರೂ. ದೇಣಿಗೆ ಬಂದಿದೆ.

ಆದರೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅತಿ ಹೆಚ್ಚು ದೇಣಿಗೆ ನೀಡಿದವರು ಯಾರು ಗೊತ್ತಾ? ಅವರ ಹೆಸರು ಮೊರಾರಿ ಬಾಪು, ಅವರು ಆಧ್ಯಾತ್ಮಿಕ ನಾಯಕ ಮತ್ತು ಗುಜರಾತ್‌ನ ರಾಮ ಕಥಾ ನಿರೂಪಕರಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅವರು ರಾಮಾಯಣವನ್ನು ಪ್ರಚುರಪಡಿಸಲು ಆರು ದಶಕಗಳನ್ನು ಕಳೆದಿದ್ದಾರೆ. ಬಾಪು ಅವರು 18.6 ಕೋಟಿ ರೂಪಾಯಿಗಳ ಗಮನಾರ್ಹ ದೇಣಿಗೆ ನೀಡಿದ್ದಾರೆ. ಅವರಿಂದ ಭಾರತದೊಳಗೆ 11.30 ಕೋಟಿ ರೂಪಾಯಿ, ಯುಕೆ ಮತ್ತು ಯುರೋಪ್‌ನಿಂದ 3.21 ಕೋಟಿ ರೂಪಾಯಿ ಮತ್ತು ಅಮೆರಿಕ, ಕೆನಡಾ ಮತ್ತು ಇತರ ದೇಶಗಳಿಂದ 4.10 ಕೋಟಿ ರೂಪಾಯಿ ದೇಣಿಗೆ ಬಂದಿದೆ.

ಆಗಸ್ಟ್ 2020 ರಲ್ಲಿ ಗುಜರಾತ್‌ನ ಪಿಥೋರಿಯಾದಲ್ಲಿ ಆನ್‌ಲೈನ್ ಕಥಾದಲ್ಲಿ ಮೊರಾರಿ ಬಾಪು ಅವರ ಹೃತ್ಪೂರ್ವಕ ಮನವಿಗೆ ಪ್ರತಿಕ್ರಿಯೆಯಾಗಿ ಉದಾರವಾದ ಹಣವನ್ನು ಕ್ರೋಢೀಕರಿಸಲಾಗಿದೆ.

ಮೊರಾರಿ ಬಾಪು ಹೇಳಿಕೆಯಲ್ಲಿ, ನಾವು ಈಗಾಗಲೇ 11.3 ಕೋಟಿ ರೂ.ಗಳನ್ನು ಸಂಗ್ರಹಿಸಿದ 15 ದಿನಗಳಲ್ಲಿ ರಾಮ ಜನ್ಮಭೂಮಿ ಟ್ರಸ್ಟ್‌ ಗೆ ಹಸ್ತಾಂತರಿಸಿದ್ದೇವೆ. ವಿದೇಶಗಳಿಂದ ಸಂಗ್ರಹಿಸಲಾದ ಉಳಿದ ಮೊತ್ತಕ್ಕೆ ಈಗ ಅಗತ್ಯವಾದ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ನೀಡಲಾಗಿದೆ. ನಾನು ಕಥಾ ಮಾಡುವಾಗ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್‌ ಗೆ ನೀಡಿದ್ದೇನೆ. ಹಾಗಾಗಿ ಒಟ್ಟು ದೇಣಿಗೆ 18.6 ಕೋಟಿ ರೂ. ಆಗಿದೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular