HomeKarnatakaSHOCKING NEWS: ಐಸ್ ಕ್ರೀಂ ತಿಂದಿದ್ದ ಅವಳಿ ಮಕ್ಕಳು ದುರ್ಮರಣ

SHOCKING NEWS: ಐಸ್ ಕ್ರೀಂ ತಿಂದಿದ್ದ ಅವಳಿ ಮಕ್ಕಳು ದುರ್ಮರಣ

ಮಂಡ್ಯ: ಐಸ್ ಕ್ರೀಂ ಸೇವಿಸಿದ್ದ ಪುಟಾಣಿ ಅವಳಿ ಮಕ್ಕಳಿಬ್ಬರೂ ಮೃತಪಟ್ಟಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.

ಒಂದುವರೆ ವರ್ಷದ ತ್ರಿಶೂಲ್ ಹಾಗೂ ತ್ರಿಶಾ ಮೃತ ಕಂದಮ್ಮಗಳು. ನಿನ್ನೆ ಮಧ್ಯಾಹ್ನ ತಳ್ಳುವ ಗಾಡಿಯಲ್ಲಿ ಬಂದಿದ್ದ ಐಸ್ ಕ್ರೀಂ ನ್ನು ತಾಯಿ ಪೂಜಾ ಹಾಗೂ ಇಬ್ಬರು ಮಕ್ಕಳು ಸೇವಿಸಿದ್ದರು. ಐಸ್ ಕ್ರೀಂ ತಿಂದ ಬಳಿಕ ಇಬ್ಬರೂ ಮಕ್ಕಳು ತೀವ್ರ ಅಸ್ವಸ್ಥರಾಗಿದ್ದಾರೆ. ಇದೀಗ ಅವಳಿ ಮಕ್ಕಳಿಬ್ಬರೂ ಸಾವನ್ನಪ್ಪಿದ್ದಾರೆ.

ಅದೇ ತಳ್ಳುಗಾಡಿಯಲ್ಲಿ ಬಂದಿದ್ದ ಐಸ್ ಕ್ರೀಂ ನ್ನು ಮಕ್ಕಳ ತಾಯಿ ಹಾಗೂ ಗ್ರಾಮದ ಹಲವು ಮಕ್ಕಳು ತಿಂದಿದ್ದರು. ಆದರೆ ಎಲ್ಲರೂ ಆರೋಗ್ಯವಾಗಿಯೇ ಇದ್ದಾರೆ. ಅವಳಿ ಮಕ್ಕಳಿಬ್ಬರು ಮಾತ್ರ ಕೊನೆಯುಸಿರೆಳೆದಿದ್ದು, ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮರಣೋತ್ತರ ಪರೀಕ್ಷೆ ಬಳಿಕ ಮಕ್ಕಳ ಸಾವಿಗೆ ನಿಖರ ಕಾರನಣ ತಿಳಿಯಲಿದೆ. ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular