HomeKarnataka20 ಕೋಟಿ ಲಂಚ ಹಗರಣದಲ್ಲಿ ಸ್ವಂತ ತಂದೆಯನ್ನೇ ಜೈಲಿಗೆ ಕಳುಹಿಸಿದ ವಿಜಯೇಂದ್ರ ನಮಗೆ ಪಾಠ ಮಾಡುವುದು...

20 ಕೋಟಿ ಲಂಚ ಹಗರಣದಲ್ಲಿ ಸ್ವಂತ ತಂದೆಯನ್ನೇ ಜೈಲಿಗೆ ಕಳುಹಿಸಿದ ವಿಜಯೇಂದ್ರ ನಮಗೆ ಪಾಠ ಮಾಡುವುದು ಬೇಡ: ಗ್ಯಾನೇಂದ್ರ ಕುಮಾರ್‌ನನ್ನು KPSCಗೆ ನೇಮಕ ಮಾಡಿದ್ದೇ ಬಿಜೆಪಿ: ಹರಿಪ್ರಸಾದ್ ವಾಗ್ದಾಳಿ

ಬೀದರ್: ಕೆಪಿಎಸ್ ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿರುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ.

ಬೀದರ್ ನಲ್ಲಿ ಮಾತನಾಡಿದ ಅವರು, ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್‌ನನ್ನು ಕೆಪಿಎಸ್‌ಸಿಗೆ ನೇಮಕ ಮಾಡಿದ್ದು ಯಾರು? ಇಂಥವರನ್ನು ನೇಮಕ ಮಾಡಿದ್ದೆ ಬಿಜೆಪಿಯ ನಾಯಕರು ಎಂದು ವಾಗ್ದಾಳಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ 20 ಕೋಟಿ ಲಂಚ ಹಗರಣದಲ್ಲಿ ಸ್ವಂತ ತಂದೆಯನ್ನೇ ಜೈಲಿಗೆ ಕಳುಹಿಸಿದರು. ಇವರು ನಮಗೆ ಲಂಚದ ಬಗ್ಗೆ ಪಾಠದ ನೈತಿಕತೆ ಹೇಳತ್ತಾರಾ? ಸಾಮ್ರಾಟ ಅಶೋಕ್ ಸೇರಿದಂತೆ ಯರ‍್ಯಾರ ಮೇಲೆ ಯಾವ ಕೇಸ್ ಇದೆಯಂತ ನಾನು ಹೇಳುತ್ತೇನೆ ಎಂದು ಕಿಡಿಕಾರಿದರು.

ನಾವು ನೈತಿಕ ಪಾಠ ಬಿಜೆಪಿಯಿಂದ ಕಲಿಯಬೇಕಿಲ್ಲಾ, ಬಿಜೆಪಿಯವರ ಕಂಠಪೂರ್ತಿ ಲಂಚ ತುಂಬಿದ್ದು, ಕೆಎಸ್ ಈಶ್ವರಪ್ಪ ಯಾಕೆ ಅಂದು ರಾಜೀನಾಮೆ ನೀಡಿದ್ರು, ಬಿಜೆಪಿಯದ್ದು 40% ಅಲ್ಲ, ಇನ್ನೂ ಜಾಸ್ತಿ ಇದೆ ಎಂದು ಆರೋಪಿಸಿದರು.

ನಾಗೇಂದ್ರ ರಾಜೀನಾಮೆ ವಿಚಾರವಾಗಿ ಮಾಅತನಾಡಿದ ಹರಿಪ್ರಸಾದ್, ಬಿಜೆಪಿಯವರು ಏನು ನ್ಯಾಯಾಧೀಶರಾ? ನಾಗೇಂದ್ರ ಕರ್ಮ ಮಾಡಿದ್ರೆ ಚಾರ್ಜ್‌ಶೀಟ್‌ನಲ್ಲಿ ಅವರ ಹೆಸರು ಇರಬೇಕಿತ್ತು. ನಾಗೇಂದ್ರ ವಿಚಾರದಲ್ಲಿ ಬಿಜೆಪಿ ಷಡ್ಯಂತ್ರ ಮಾಡಿ ರಾಜೀನಾಮೆ ಕೊಡಿಸಿದ್ದು, ಒಬ್ಬ ದಲಿತ ನಾಯಕನನ್ನು ಮುಗಿಸಲು ಬಿಜೆಪಿಯವರು ಕುತಂತ್ರ ಮಾಡಿದ್ದಾರೆ ಎಂದ್ರು.

ಬಿಜೆಪಿಯವರ ತಲೆ ಮತ್ತು ಆರೋಗ್ಯ ಕೆಟ್ಟಿದೆ. ಪಾದಯಾತ್ರೆ ಮಾಡುವುದರಿಂದ ಸ್ವಲ್ಪ ಚುರುಕಾಗತ್ತಾರೆ. ಆರೋಗ್ಯವೂ ಸುಧಾರಿಸುತ್ತೆ. ಪ್ರಾಸಿಕ್ಯೂಷನ್‌ಗೆ ಕೊಡಲಿ, ನಾವು ಕೋರ್ಟ್‌ನಲ್ಲಿ ಹೋರಾಟ ಮಾಡುತ್ತೇವೆ. ಈ ನೆಲದ ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ಮಾಡುತ್ತೇವೆ. ಮೊದಲ ವಿಕೆಟ್ ಪತನ ಅನ್ನೋಕೆ ಇದೇನೂ ಐಪಿಎಲ್ ಅಲ್ಲ, ಬಿಜೆಪಿಯಲ್ಲಿ ಈಗಾಗಲೇ ಎಷ್ಟು ವಿಕೆಟ್‌ಗಳು ಪತನವಾಗಿವೆ. ಎಷ್ಟು ಜನರ ಮೇಲೆ ಕ್ರಿಮಿನಲ್ ಕೇಸ್‌ಗಳು ಇವೆ, ಜನಾರ್ದನ ರೆಡ್ಡಿಯಂಥ ಒಬ್ಬ ಮಹಾನ್ ನಾಯಕನನ್ನು ಈಗ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಹರಿಹಾಯ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular