HomeKarnatakaಸೆಲ್ಫಿ ವಿಡಿಯೋ ಮಾಡಿಟ್ಟು ಬ್ಯಾಂಕ್ ಸಿಬ್ಬಂದಿ ಆತ್ಮಹತ್ಯೆ

ಸೆಲ್ಫಿ ವಿಡಿಯೋ ಮಾಡಿಟ್ಟು ಬ್ಯಾಂಕ್ ಸಿಬ್ಬಂದಿ ಆತ್ಮಹತ್ಯೆ

ದಾವಣಗೆರೆ: ಮೇಲಧಿಕಾರಿಗಳ ಮೋಸಕ್ಕೆ ಮನನೊಂದ ಬ್ಯಾಂಕ್ ಸಿಬ್ಬಂದಿಯೊಬ್ಬರು, ಸೆಲ್ಫಿ ವೀಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾದನಬಾವಿ ಗ್ರಾಮದಲ್ಲಿ ನಡೆದಿದೆ.

ಮೋಹನ್ ಕುಮಾರ್ ಆತ್ಮಹತ್ಯೆಗೆ ಶರಣಾದ ಬ್ಯಾಂಕ್ ಸಿಬ್ಬಂದಿ. ಮೋಹನ್ ಐಡಿಎಫ್‌ಸಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಪ್ರಮೋಷನ್ ನೀಡುವುದಾಗಿ ಹೇಳಿ ಅಧಿಕಾರಿಗಳು ಮೋಹನ್ ಬಳಿ ನಕಲಿ ಅಂಕಪಟ್ಟಿಗೆ 50 ಸಾವಿರ ಲಂಚ ಪಡೆದಿದ್ದರು. ಮೋಹನ್ ಸಾಲ ಮಾಡಿ ನಕಲಿ ಅಂಕಪಟ್ಟಿಗೆ ಹಣ ಕೊಟ್ಟಿದ್ದರಂತೆ. ಹಣ ಪಡೆದ ಬಳಿಕವೂ ಅಧಿಕಾರಿಗಳು ಯಾವುದೇ ಪ್ರಮೋಷನ್ ನೀಡಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತ್ತ ಸಾಲ ಬಾಧೆ ಹೆಚ್ಚಾಗಿ ಮೋಹನ್ ಮನನೊಂದಿದ್ದರು. ಇದೀಗ ನನ್ನ ಸಾವಿಗೆ ಬ್ಯಾಂಕ್ ಸಿಬ್ಬಂದಿ ತಿಪ್ಪೇಸ್ವಾಮಿ, ನಕಲಿ ಅಂಕಪಟ್ಟಿ ಮಾಡಿಕೊಟ್ಟ ಕೊಟ್ರೇಶ್ ಕಾರಣ ಎಂದು ಸೆಲ್ಫಿ ವೀಡಿಯೋ ಮಾಡಿಟ್ಟು ಮೋಹನ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ನನಗೆ ನ್ಯಾಯ ಒದಗಿಸುವಂತೆ ಸೆಲ್ಫಿ ವೀಡಿಯೋ ಮುಖಾಂತರ ಮಾಜಿ ಸಚಿವ ಎಂಪಿ ರೇಣುಕಾಚಾರ್ಯಗೆ ಮನವಿ ಕೂಡ ಮಾಡಿದ್ದಾರೆ. ಬಳಿಕ ಬೈಕ್ ಸಹಿತ ತುಂಗಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತುಂಗಾ ನಾಲೆ ಬಳಿ ಮೋಹನ್ ಕುಮಾರ್ ಬೈಕ್ ಪತ್ತೆಯಾಗಿದ್ದು, ತುಂಗಾ ನಾಲೆಯಲ್ಲಿ ಮೋಹನ್ ಮೃತದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular