HomeIndiaBREAKING: ಗದ್ದೆಯಲ್ಲಿ ಬಿದ್ದ ವಿಮಾನ: ಪಶ್ಚಿಮ ಬಂಗಾಳದಲ್ಲಿ ಐಎಎಫ್ ಫೈಟರ್ ಜೆಟ್ ಪತನ

BREAKING: ಗದ್ದೆಯಲ್ಲಿ ಬಿದ್ದ ವಿಮಾನ: ಪಶ್ಚಿಮ ಬಂಗಾಳದಲ್ಲಿ ಐಎಎಫ್ ಫೈಟರ್ ಜೆಟ್ ಪತನ

ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರದ ಕಲೈಕುಂಡ ಏರ್ ಬೇಸ್ ಬಳಿ ಐಎಎಫ್ ಫೈಟರ್ ಜೆಟ್ ಪತನಗೊಂಡಿದೆ.

ಮಂಗಳವಾರ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಕಲೈಕುಂಡ ವಾಯುನೆಲೆಯಲ್ಲಿ ವಾಯುಪಡೆಯ ತರಬೇತಿಯ ವೇಳೆ ಫೈಟರ್ ಜೆಟ್ ಡಯಾಸಾ ಪ್ರದೇಶದಲ್ಲಿ ಪತನಗೊಂಡಿದೆ. ವಾಯುಪಡೆಯ ಪೈಲಟ್ ಪ್ಯಾರಾಚೂಟ್ ಮೂಲಕ ಅಪಾಯದಿಂದ ಪಾರಾಗಿದ್ದಾರೆ. ಮಧ್ಯಾಹ್ನ 3:35ರ ಸುಮಾರಿಗೆ ಯುದ್ಧವಿಮಾನ ಭತ್ತದ ಗದ್ದೆಯಲ್ಲಿ ಬಿದ್ದಿದೆ. ವಿಮಾನ ಪತನವಾದಾಗ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular