HomeLatest Newsನಾನು ಆ ಕಡೆ ತಲೆ ಹಾಕಿಯೂ ಮಲಗಲ್ಲ: ಬಿಜೆಪಿಗೆ ಬನ್ನಿ ಎಂದ ವಿಧಾನ ಪರಿಷತ್ ಸದಸ್ಯರಿಗೆ...

ನಾನು ಆ ಕಡೆ ತಲೆ ಹಾಕಿಯೂ ಮಲಗಲ್ಲ: ಬಿಜೆಪಿಗೆ ಬನ್ನಿ ಎಂದ ವಿಧಾನ ಪರಿಷತ್ ಸದಸ್ಯರಿಗೆ ಸಿಎಂ ಸಿದ್ಧರಾಮಯ್ಯ ಪ್ರತಿಕ್ರಿಯೆ

ಬೆಂಗಳೂರು(ವಿಧಾನ ಪರಿಷತ್): ನಾನು ಬಿಜೆಪಿಯವರ ಕಡೆ ನೋಡಿ ಮಾತನಾಡುವುದಿಲ್ಲ. ಸಭಾಪತಿಗಳ ಪೀಠದ ಕಡೆ ನೋಡಿ ಮಾತನಾಡುತ್ತೇನೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ವಿಧಾನ ಪರಿಷತ್ ನಲ್ಲಿ ಮಾತನಾಡಿದ ಸಿಎಂ, ಬಿಜೆಪಿಯವರ ಕಡೆ ನೋಡಿದರೆ ಎಲ್ಲರೂ ಎದ್ದು ನಿಂತುಬಿಡುತ್ತಾರೆ. ನಾರಾಯಣಸ್ವಾಮಿ ನಾನು ಚೆನ್ನಾಗಿದ್ದೇನೆ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ನಾರಾಯಣಸ್ವಾಮಿ ನಿಮ್ಮ ಜೊತೆ ಬರಲ್ಲ ಎಂದಿದ್ದಾರೆ. ನಾರಾಯಣಸ್ವಾಮಿ ಇರುವ ಕಡೆಗೆ ನಾನೇ ಹೋಗುತ್ತೇನೆ ಎಂದು ಸಿಎಂ ಹೇಳಿದ್ದಾರೆ. ಹಾಗಾದ್ರೆ ನೀವು ಬಿಜೆಪಿಗೆ ಬರುತ್ತೀರಾ ಎಂದು ಎನ್. ರವಿಕುಮಾರ್ ಪ್ರಶ್ನಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೆಸಿ ಆಗಿದೆ, ಬಿ ಆಗಿ ಬಿಡಲಿ ಪೂರ್ಣವಾಗಲಿದೆ ಎಂದು ಸಿ.ಟಿ. ರವಿ ಹೇಳಿದ್ದಾರೆ. ನಾನು ಬಿಜೆಪಿ ಮತ್ತು ಆರ್.ಎಸ್.ಎಸ್. ವಿರೋಧಿ ರಾಜಕಾರಣ ಮಾಡಿದವನು. ಹಾಗಾಗಿ ಬಿಜೆಪಿಗೆ ಬರಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನೀವು ನಮ್ಮ ಕಡೆಗೆ ಬರುತ್ತೀರಾ ಎಂದು ಎನ್. ರವಿಕುಮಾರ್ ಪ್ರಶ್ನಿಸಿದ್ದಾರೆ. ನಿಮಗೆ ಅಲ್ಲಿ ತೊಂದರೆ ಕೊಡುತ್ತಿದ್ದಾರೆ ಬಿಜೆಪಿಗೆ ಬರುತ್ತೀರಾ ಎಂಬ ಬಿಜೆಪಿ ನಾಯಕರ ಮಾತಿಗೆ ಸಿಎಂ ಪ್ರತಿಕ್ರಿಯೆ ನೀಡಿ, ನಾನು ಯಾವುದಾದರೂ ಸಿದ್ದಾಂತ ವಿರೋಧಿಸಿದ್ದರೆ ಅದು ಬಿಜೆಪಿ, ಆರ್.ಎಸ್.ಎಸ್. ಸಿದ್ದಾಂತ. ಆ ಕಡೆಗೆ ನಾನು ತಲೆ ಹಾಕಿಯೂ ಮಲಗುವುದಿಲ್ಲ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular