HomeLatest Newsನಗ್ನವಾಗಿ ನಟಿಸಲು ಸಾಧ್ಯವಿಲ್ಲವೆಂದು ಹಿಟ್ ಸಿನಿಮಾ ಆಫರ್ ತಿರಸ್ಕರಿಸಿದ್ದೆ: ಅನುರಾಗ್ ಕಶ್ಯಪ್ ಚಿತ್ರದ ರಹಸ್ಯ ಬಿಚ್ಚಿಟ್ಟ...

ನಗ್ನವಾಗಿ ನಟಿಸಲು ಸಾಧ್ಯವಿಲ್ಲವೆಂದು ಹಿಟ್ ಸಿನಿಮಾ ಆಫರ್ ತಿರಸ್ಕರಿಸಿದ್ದೆ: ಅನುರಾಗ್ ಕಶ್ಯಪ್ ಚಿತ್ರದ ರಹಸ್ಯ ಬಿಚ್ಚಿಟ್ಟ ತೇಜಸ್ವಿನಿ!

ಬಾಲಿವುಡ್ ನಟಿ ಹಾಗೂ ಮಾಡೆಲ್ ತೇಜಸ್ವಿನಿ ಕೊಲ್ಹಾಪುರೆ, ಪ್ರಸಿದ್ಧ ನಿರ್ದೇಶಕ ಅನುರಾಗ್ ಕಶ್ಯಪ್ ಅವರ 2009ರ ರಾಜಕೀಯ ಡ್ರಾಮಾ ಸಿನಿಮಾ ‘ಗುಲಾಲ್’ ಚಿತ್ರದಲ್ಲಿ ನಟಿಸುವ ಆಫರ್ ಅನ್ನು ಏಕೆ ತಿರಸ್ಕರಿಸಿದ್ದರು ಎಂಬುದರ ಕುರಿತು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ನಟಿ ಶ್ರದ್ಧಾ ಕಪೂರ್ ಅವರ ಚಿಕ್ಕಮ್ಮ ಹಾಗೂ ಪದ್ಮಿನಿ ಕೊಲ್ಹಾಪುರೆ ಅವರ ತಂಗಿಯಾಗಿರುವ ತೇಜಸ್ವಿನಿ, ಸಿನಿಮಾದಲ್ಲಿ ನಗ್ನವಾಗಿ ನಟಿಸಬೇಕಿದ್ದ ಕಾರಣಕ್ಕಾಗಿ ಆ ಪಾತ್ರವನ್ನು ಬೇಡ ಎಂದಿದ್ದಾಗಿ ತಿಳಿಸಿದ್ದಾರೆ.

ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ ತೇಜಸ್ವಿನಿ, ಅನುರಾಗ್ ಕಶ್ಯಪ್ ನನಗೆ ‘ಗುಲಾಲ್’ ಚಿತ್ರದ ಸ್ಕ್ರಿಪ್ಟ್ ನೀಡಿ ಈ ಸಿನಿಮಾದಲ್ಲಿ ನಟಿಸುವಂತೆ ಕೇಳಿಕೊಂಡಿದ್ದರು. ಆದರೆ ಆ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರಲಿಲ್ಲ ಮತ್ತು ಕಥೆಯ ಪ್ರಕಾರ ನಗ್ನವಾಗಿ ನಟಿಸಬೇಕಾದ ಅನಿವಾರ್ಯತೆ ಇತ್ತು. ಇದನ್ನು ಕೇಳಿ ಬೆಚ್ಚಿಬಿದ್ದ ನಾನು, ಇದು ಹಿಂದಿ ಸಿನಿಮಾ ಹೀಗೆ ನಟಿಸಿದರೆ ನನ್ನನ್ನು ಮನೆಯಿಂದಲೇ ಹೊರಹಾಕುತ್ತಾರೆ ಎಂದು ಹೇಳಿ ಆಫರ್ ನಿರಾಕರಿಸಿದ್ದಾಗಿ ಹೇಳಿದ್ದಾರೆ.

ನಂತರ ಈ ಪಾತ್ರದಲ್ಲಿ ಮಾಡೆಲ್ ಜೆಸ್ಸಿ ರಂಧವಾ ನಟಿಸಿದ್ದರು. ಆದರೆ ಅವರು ನಗ್ನವಾಗಿ ನಟಿಸುವ ಬದಲು ಬಾಡಿಸೂಟ್ ಧರಿಸಿ ಆ ದೃಶ್ಯದಲ್ಲಿ ಅಭಿನಯಿಸಿದ್ದರು. ಇದನ್ನು ನೋಡಿದ ನಂತರ, ಬಾಡಿಸೂಟ್ ಧರಿಸುವ ಆಯ್ಕೆ ಇದ್ದರೆ ನನಗೂ ಹೇಳಬಹುದಿತ್ತಲ್ಲವೇ ಎಂದು ಅನುರಾಗ್ ಅವರಲ್ಲಿ ಕೇಳಿದ್ದಾಗಿ ತೇಜಸ್ವಿನಿ ನೆನಪಿಸಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದಕ್ಕೂ ಮುನ್ನ 2003ರಲ್ಲಿ ಅನುರಾಗ್ ಕಶ್ಯಪ್ ನಿರ್ದೇಶನದ ‘ಪಾಂಚ್’ ಸಿನಿಮಾ ಮೂಲಕ ತೇಜಸ್ವಿನಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಬೇಕಿತ್ತು. ಆದರೆ ಕೆಲವು ಕಾರಣಗಳಿಂದ ಆ ಸಿನಿಮಾ ಬಿಡುಗಡೆಯಾಗಲಿಲ್ಲ. ತದನಂತರ 2013ರಲ್ಲಿ ಬಂದ ಸೈಕೋಲಾಜಿಕಲ್ ಥ್ರಿಲ್ಲರ್ ‘ಅಗ್ಲಿ’ ಚಿತ್ರದಲ್ಲಿ ಇವರಿಬ್ಬರು ಮತ್ತೆ ಜೊತೆಯಾಗಿ ಕೆಲಸ ಮಾಡಿದರು. ‘ಅಗ್ಲಿ’ ಚಿತ್ರದಲ್ಲಿನ ಅಭಿನಯಕ್ಕಾಗಿ ತೇಜಸ್ವಿನಿ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯ ನಾಮನಿರ್ದೇಶನವೂ ಲಭಿಸಿತ್ತು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular