ಅಹಮದಾಬಾದ್: ಶಾರುಖ್ ಖಾನ್ ಅವರಿಗೆ ಅಭಿಮಾನಿಗಳು ಲಕ್ಷಾಂತರ ಮಂದಿ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಇವರಿಗೆ ಅಭಿಮಾನಿಗಳು ಹೆಚ್ಚು. ಆದರೆ ಪಠಾಣ್ ಚಿತ್ರದ ಬಳಿಕ ಇವರ ವರ್ಚಸ್ಸು ಇನ್ನಷ್ಟು ಹೆಚ್ಚಿದೆ. 57ನೇ ವಯಸ್ಸಿನಲ್ಲಿಯೂ 27 ವರ್ಷದ ಯುವಕರನ್ನು ನಾಚಿಸುವಂತೆ ಸಿಕ್ಸ್ ಪ್ಯಾಕ್ನಿಂದ ಪಠಾಣ್ನಲ್ಲಿ ಮಿಂಚಿರೋ ಶಾರುಖ್ ಈಗೊಂದು ರೀತಿಯಲ್ಲಿ ನ್ಯಾಷನಲ್ ಕ್ರಷ್ ಆಗುತ್ತಿದ್ದಾರೆ.
ಎಲ್ಲರಿಗೂ ಶಾರುಖ್ ಮೇಲೆ ಕ್ರಷ್ ಆಗಿರುವಾಗ ಗುಜರಾತ್ನ ವೃದ್ಧೆಯೊಬ್ಬರು ಕೂಡ ತಮ್ಮ ಕ್ರಷ್ ಶಾರುಖ್ ಖಾನ್ ಎಂದು ಹೇಳಿಕೊಂಡಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
ಸಿದ್ಧಾರ್ಥ್ ಅಮಿತ್ ಭಾವಸರ್ ಅವರು ತಮ್ಮ ಅಜ್ಜಿಯ ಕುರಿತು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಅವರ ಅಜ್ಜಿ ತಮ್ಮ ಕ್ರಷ್ ಶಾರುಖ್ ಮತ್ತು ಧರ್ಮೇಂದ್ರ ಎನ್ನುವುದನ್ನು ಕೇಳಬಹುದು. ಇದರ ವಿಡಿಯೋ ಶೇರ್ ಆಗುತ್ತಿದ್ದಂತೆಯೇ ಹಲವಾರು ಮಂದಿ ಶಾರುಖ್ ನ್ಯಾಷನಲ್ ಕ್ರಷ್ ಆಗಿದ್ದಾರೆ ಎಂದಿದ್ದಾರೆ. ಆದರೆ ಈ ವೃದ್ಧೆಯ ಮಾತಿಗೆ ಖುದ್ದು ಪ್ರತಿಕ್ರಿಯೆ ನೀಡಿರುವ ಶಾರುಖ್ ಅವರು ನಾನೂ ನಿಮ್ಮನ್ನು ಪ್ರೀತಿಸುತ್ತೇನೆ. ಐ ಲವ್ ಯು ಎಂದು ಹೇಳಿ ಅಜ್ಜಿಯನ್ನು ಖುಷಿ ಪಡಿಸಿದ್ದಾರೆ.
Huṁ paṇa tanē prēma karuṁ chuṁ Baa. https://t.co/nZLzYhafFl
— Shah Rukh Khan (@iamsrk) February 22, 2023
Turns out @iamsrk is my Baa’s forever crush ! Hope this reaches him ❤️ pic.twitter.com/Yvelmf5qBq
— Siddharth Amit Bhavsar (@musicwaalaa) February 21, 2023

