HomeLatest Newsಬೆಂಗಳೂರಿನ ನಥಿಂಗ್ ಮೊಬೈಲ್ ಸ್ಟೋರ್‌ನಲ್ಲಿ 'ಐ ಲವ್ ರೂಹ್ ಅಫ್ಜ' ಬರಹ: ಹಿಂದೂಗಳ ಅಸಮಾಧಾನ; ಏನಿದು?

ಬೆಂಗಳೂರಿನ ನಥಿಂಗ್ ಮೊಬೈಲ್ ಸ್ಟೋರ್‌ನಲ್ಲಿ ‘ಐ ಲವ್ ರೂಹ್ ಅಫ್ಜ’ ಬರಹ: ಹಿಂದೂಗಳ ಅಸಮಾಧಾನ; ಏನಿದು?

ಇತ್ತೀಚೆಗಷ್ಟೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವೇಗವಾಗಿ ಖ್ಯಾತಿ ಪಡೆಯುತ್ತಿರುವ ಮೊಬೈಲ್ ಫೋನ್ ಬ್ರಾಂಡ್ ನಥಿಂಗ್ ತನ್ನ ಚೊಚ್ಚಲ ಸ್ಟೋರ್ ತೆರೆದಿತ್ತು. ಮೊದಲ ದಿನವೇ ಸ್ಟೋರ್ ಮುಂದೆ ಸಾವಿರಾರು ಜನರು ಜಮಾಯಿಸಿದ್ದು, ಬ್ರಾಂಡ್‌ಗೆ ಇರುವ ಬೇಡಿಕೆಯನ್ನು ತೋರಿಸಿತ್ತು.

ನಥಿಂಗ್ ಕಂಪನಿಯ ಸಿಇಒ ಸ್ವತಃ ಆಟೊದಲ್ಲಿ ಬಂದಿಳಿದು ಮೊದಲ ಗ್ರಾಹಕನಿಗೆ ತಾನೇ ಬಿಲ್ಲಿಂಗ್ ಮಾಡಿಕೊಟ್ಟಿದ್ದರು. ಹೀಗೆ ಯಶಸ್ವಿಯಾಗಿ ತನ್ನ ಮೊದಲ ಸ್ಟೋರ್ ತೆರೆದು ಬೆಂಗಳೂರಿನಲ್ಲಿ ತನ್ನ ವ್ಯವಹಾರ ಆರಂಭಿಸಿದ ನಥಿಂಗ್ ಕುರಿತು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದು ವೈರಲ್ ಆಗಿದೆ.

ಹೌದು, ಇದೇ ನಥಿಂಗ್ ಸ್ಟೋರ್‌ನ ಗಾಜಿನ ಮೇಲೆ ‘ಐ ಲವ್ ರೂಹ್ ಅಫ್ಜ’ ಎಂದು ಗುಲಾಬಿ ಬಣ್ಣದಲ್ಲಿ ಬರೆಯಲಾಗಿದೆ ಎಂಬ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಹಂಚಿಕೊಂಡಿರುವ ನೆಟ್ಟಿಗರು ನಥಿಂಗ್ ಸಂಸ್ಥೆಯ ವಿರುದ್ಧ ಕಿಡಿಕಾರಿದ್ದಾರೆ. ರಂಜಾನ್ ಇರುವ ಸಲುವಾಗಿ ಈ ರೀತಿಯ ಡಿಸ್‌ಪ್ಲೇ ಹಾಕಲಾಗಿದ್ದು, ಹಿಂದೂಗಳ ಹೋಳಿ ಹಬ್ಬ ಸಹ ಸಮೀಪದಲ್ಲಿದೆ, ಅದರ ಕುರಿತು ಬರಹವೇಕಿಲ್ಲ ಎಂದು ಪ್ರಶ್ನಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಂದಹಾಗೆ ರೂಹ್ ಅಫ್ಜ ಎಂಬುದು ಒಂದು ಸಿಹಿಯಾದ ದ್ರವ. ಇದನ್ನು ಹಾಲು ಅಥವಾ ನೀರಿಗೆ ಹಾಕಿ ಕುಡಿಯುವುದು ವಾಡಿಕೆ. ಬೇಸಿಗೆ ಸಮಯದಲ್ಲಿ ಇದರ ಬಳಕೆ ಹೆಚ್ಚಿರಲಿದ್ದು, ದೇಹವನ್ನು ತಂಪು ಮಾಡಲಿದೆ ಎಂಬುದು ಬಳಕೆದಾರರ ಅಭಿಪ್ರಾಯ.

1907ರಲ್ಲಿ ಹಕೀಮ್ ಅಬ್ದುಲ್ ಮಜೀದ್ ಎಂಬಾತ ಈ ರೂಹ್ ಅಫ್ಜಾವನ್ನು ಕಂಡುಹಿಡಿದರು. ಇದು ಮೂಲಿಕೆ, ಹೂಗಳು ಹಾಗೂ ಹಣ್ಣು ಮಿಶ್ರಿತ ಸಿಹಿ ದ್ರವವಾಗಿದ್ದು, ಇದನ್ನು ಹಾಲು ಅಥವಾ ನೀರಿಗೆ ಬೆರೆಸಿ ರಂಜಾನ್ ಸಮಯದಲ್ಲಿ ಹೆಚ್ಚಾಗಿ ಸೇವನೆ ಮಾಡುತ್ತಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular