HomeLatest Newsಸಚಿವ ರಾಜಣ್ಣ ವಜಾ ಮಾಡಿದ್ರಿಂದ ನನಗೂ ನೋವಾಗ್ತಿದೆ, ಪಕ್ಷದ ನಿರ್ಧಾರಕ್ಕೆ ಏನೂ ಮಾಡೋಕಾಗಲ್ಲ: ಡಿ.ಕೆ. ಶಿವಕುಮಾರ್

ಸಚಿವ ರಾಜಣ್ಣ ವಜಾ ಮಾಡಿದ್ರಿಂದ ನನಗೂ ನೋವಾಗ್ತಿದೆ, ಪಕ್ಷದ ನಿರ್ಧಾರಕ್ಕೆ ಏನೂ ಮಾಡೋಕಾಗಲ್ಲ: ಡಿ.ಕೆ. ಶಿವಕುಮಾರ್

ಬೆಂಗಳೂರು: ಸಚಿವ ಸಂಪುಟದಿಂದ ಕೆ.ಎನ್. ರಾಜಣ್ಣ ಅವರನ್ನು ವಜಾಗೊಳಿಸಿದ್ದು ಪಕ್ಷದ ನಿರ್ಧಾರ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೆ.ಎನ್.  ರಾಜಣ್ಣ ನನ್ನ ಸ್ನೇಹಿತರು. ನನ್ನ ಆಪ್ತರಾಗಿದ್ದಾರೆ. 25 ವರ್ಷದಿಂದ ಜೊತೆಗೆ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ಅವರನ್ನು ಸಂಪುಟದಿಂದ ವಜಾಗೊಳಿಸಿದ್ದು ಪಕ್ಷದ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ.

ಸಚಿವ ಕೆ.ನ್. ರಾಜಣ್ಣ ರಾಜೀನಾಮೆಯ ಬಗ್ಗೆ ನನಗೇನೂ ಗೊತ್ತಿಲ್ಲ. ಪಕ್ಷದ ನಿರ್ಧಾರದಿಂದ ನನಗೂ ಕೂಡ ನೋವಾಗುತ್ತಿದೆ. ಆದರೆ, ಪಕ್ಷದ ನಿರ್ಧಾರವಾಗಿರುವುದರಿಂದ ನಾವು ಏನೂ ಮಾಡೋಕಾಗಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಚಿವರು, ಶಾಸಕರು, ಸಿಎಲ್ಪಿ ನಾಯಕರ ವ್ಯಾಪ್ತಿಗೆ ಬರುತ್ತಾರೆ. ನಮ್ಮ ವ್ಯಾಪ್ತಿಗೆ ಬರಲ್ಲ, ಅಶಿಸ್ತು ತೋರಿಸಿದರೆ ಸಣ್ಣಪುಟ್ಟ ನೋಟಿಸ್ ಕೊಡಬಹುದು. ಆದರೆ, ಕೆ.ಎನ್. ರಾಜಣ್ಣ ಅವರ ವಜಾಕ್ಕೆ ನಿರ್ದಿಷ್ಟ ಕಾರಣ ಗೊತ್ತಿಲ್ಲ. ಸಂಪುಟದಿಂದ ವಜಾಗೊಳಿಸಿರುವುದು ಪಕ್ಷದ ನಿರ್ಧಾರ. ಯಾವ ಕಾರಣಕ್ಕೆ ರಾಜಣ್ಣ ಅವರನ್ನು ವಜಾಗೊಳಿಸಿದ್ದಾರೆ ಎನ್ನುವುದು ಗೊತ್ತಿಲ್ಲ. ನಾನು ಕೂಡ ಮುಖ್ಯಮಂತ್ರಿಯವರಿಗೆ ಕೇಳಿದೆ. ಅವರು ಮಾಹಿತಿ ತಿಳಿಸಿದರು. ಇಷ್ಟು ಮಾತ್ರ ನನಗೆ ಗೊತ್ತು ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular