ಹೈದರಾಬಾದ್: ಮದುವೆಯಾಗಲು ನಿರಾಕರಿಸಿದ ಯುವತ್ಗೆ ಯುವಕನೊಬ್ಬ ಹೆಚ್ ಐ ವಿ ಇಂಜಕ್ಷನ್ ನೀಡಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಮನೋಹರ್ ಎಂಬ ಯುವಕನೊಂದಿಗೆ ಯುವತಿಯ ಮದುವೆ ನಿಶ್ಚಯವಾಗಿತ್ತು. ಆದರೆ ಯುವಕನಿಗೆ ಹೆಚ್ ಐ ವಿ ಪಾಅಸಿಟಿವ್ ಇರುವುದು ಗೊತ್ತಾಗಿ ಯುವತಿ ಈ ಮದುವೆ ಬೇಡ ಎಂದಿದ್ದಾಳೆ. ಮೆಡ್ಚಲ್ ಪ್ರದೇಶದ ನಿವಾಸಿಯಾಗಿರುವ ಯುವಕ ಮನೋಹರ್ ಗೆ ಹೆಚ್ ಐ ವಿ ಪಾಸಿಟಿವ್ ಇತ್ತು. ಆದರೆ ಮಾರ್ಚ್ ೧೧ರಂದು ಮನೋಹರ್, ಯುವತಿಗೆ ತನ್ನನ್ನು ಮದುವೆಯಾಗಲೇಬೇಕು ಎಂದು ಒತ್ತಾಯಿಸಿದ್ದಾನೆ. ಆದರೆ ಯುವತಿ ಸಾಧ್ಯವಿಲ್ಲ ಎಂದಿದಾಳೆ. ಇದಕ್ಕೆ ಕೋಪಗೊಂದ ಯುವಕ, ಯುವತಿಗೆ ಹೆಚ್ ಐ ವಿ ಪಾಸಿಟಿವ್ ಇಂಜಕ್ಷನ್ ಚುಚ್ಚಿದ್ದಾನೆ.
ಇಂಜಕ್ಷನ್ ಬಳಿಕ ಯುವತಿಗೆ ತೀವ್ರ ಜ್ವರ ಬಂದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾಳೆ. ನಡೆದ ಘಟನೆಯನ್ನು ಯುವತಿ ಮನೆಯವರಿಗೆ ತಿಳಿಸಿದ್ದಾಳೆ. ಯುವತಿ ದೂರಿನ ಆಧಾರದ ಮೇಲೆ ಆರೋಪಿ ಮನೋಹರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

