HomeIndiaಬೇರೆಯವರ ಜೊತೆ ಫ್ರೆಂಡ್ ಶಿಪ್ ಮಾಡಿದ್ದಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಬಲವಂತವಾಗಿ ಕೀಟನಾಶಕ ಕುಡಿಸಿ ಕೊಲೆಗೈದ ಲೆಕ್ಚರ್

ಬೇರೆಯವರ ಜೊತೆ ಫ್ರೆಂಡ್ ಶಿಪ್ ಮಾಡಿದ್ದಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಬಲವಂತವಾಗಿ ಕೀಟನಾಶಕ ಕುಡಿಸಿ ಕೊಲೆಗೈದ ಲೆಕ್ಚರ್

ಹೈದರಾಬಾದ್: ಕ್ಷುಲ್ಲಕ ಕಾರಣಕ್ಕೆ ಉಪನ್ಯಾಸಕನೇ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಕೀಟನಾಶಕ ಕುಡಿಸಿ ಕೊಲೆಗೈದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

20 ವರ್ಷದ ಥಂಡ್ರಾ ಅಕ್ಷಿತಾರಾಣಿ ಮೃತ ವಿದ್ಯಾರ್ಥಿನಿ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಉಪನ್ಯಾಸಕನನ್ನು ಬಂಧಿಸಿದ್ದಾರೆ. ಬಂಧಿತ ಉಪನ್ಯಾಸಕ ನವೀನ್ ಕುಮಾರ್ ಎಂದು ಗುರುತಿಸಲಾಗಿದೆ.

ಮೃತ ಯುವತಿ ನಸ್ಪೂರಿನ ಕಾಲೇಜುವೊಂದರಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುವಾಗ ನವೀನ್ ಕುಮಾರ್ ಎಂಬ ಉಪನ್ಯಾಸಕ ಪರಿಚಯವಾಗಿದ್ದ. ಇಬ್ಬರ ನಾಡುವೆ ಸ್ನೇಹವಿತ್ತು. ಬಳಿಕ ಅಲ್ಲಿಂದ ಯುವತಿ ಹೈದರಾಬಾದ್‌ಗೆ ಮೈನಿಂಗ್ ಎಂಜಿನಿಯರಿಂಗ್ ಮಾಡಲು ತೆರಳಿದ್ದಳು. ಅಲ್ಲಿ ಅಪ್ರೆಂಟಿಸ್‌ಶಿಪ್ ಸಮಯದಲ್ಲಿ ರವಿ ಕುಮಾರ್ ಎಂಬಾತನ ಪರಿಚಯವಾಗಿತ್ತು. ಹೈದರಾಬಾದ್ ಗೆ ಶಿಫ್ಟ್ ಆದ ಬಳಿಕ ಉಪನ್ಯಾಸಕ ನವೀನ್ ಕುಮಾರ್ ಸಂಪರ್ಕ ಕಡಿಮೆಯಾಗಿತ್ತು. ಇದರಿಂದ ನವೀನ್ ಕುಮಾರ್ ಗೆ ಕಸಿವಿಸಿ ಉಂಟಾಗಿತ್ತು. ಅಕ್ಷಿತಾರಾಣಿ ರವಿ ಕುಮಾರ್ ಜೊತೆಗೆ ಸ್ನೇಹ ಬೆಳೆಸಿರುವ ವಿಷಯ ಗೊತ್ತಾಗುತ್ತಿದ್ದಂತೆ ಆಕೆ ತನ್ನಿಂದ ದೂರಾಗುತ್ತಿದ್ದಾಳೆ ಎಂದು ನವೀನ್ ಕೋಪಗೊಂಡಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದಾದ ಬಳಿಕ ಸೆ.12ರಂದು ಅಕ್ಷಿತಾರಾಣಿ ಡೆತ್‌ನೋಟ್ ಬರೆದಿಟ್ಟು, ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಇದನ್ನು ಆತ್ಮಹತ್ಯೆ ಎಂದೇ ನಂಬಲಾಗಿತ್ತು. ಆದರೆ ಪೊಲೀಸರು ಪ್ರಕರಣವನ್ನು ಅಸಹಜ ಸಾವು ಎಂದು ಪರಿಗಣಿಸಿ, ತನಿಖೆ ನಡೆಸಲಾರಂಭಿಸಿದ್ದರು.

ಅಕ್ಷಿತಾರಾಣಿ ತನ್ನಿಂದ ದೂರಾಗುವುದನ್ನು ಮತ್ತು ರವಿ ಕುಮಾರ್ ಗೆ ಹತ್ತಿರವಾಗುತ್ತಿರುವುದನ್ನು ನವೀನ್ ಸಹಿಸಿಕೊಳ್ಳಲು ಸಾಧ್ಯವಾಗಿದೇ, ಆಕೆಯನ್ನೇ ಕೊಲೆಗೊದಿದ್ದಾನೆ ಎಂದು ಪೆದ್ದಪಲ್ಲಿ ಡಿಸಿಪಿ ಬಿ.ರಾಮ್ ರೆಡ್ಡಿ ತಿಳಿಸಿದ್ದಾರೆ.

ಅಂದು ಸೆ.12ರಂದು ಅಕ್ಷಿತಾರಾಣಿ ಮನೆಗೆ ವಾಪಸ್ ಆಗುತ್ತಿದ್ದಾಗ ನವೀನ್ ಕುಮಾರ್ ನಡುರಸ್ತೆಯಲ್ಲೇ ಆಕೆಯನ್ನು ಅಡ್ಡಗಟ್ಟಿದ್ದನಂತೆ. ಬಲವಂತವಾಗಿ ತನ್ನ ಕಾರಿನಲ್ಲಿ ಕರೆದೊಯ್ದು, ರವಿ ಕುಮಾರ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ಪತ್ರ ಬರೆಯುವಂತೆ ಒತ್ತಾಯಮಾಡಿದ್ದ. ಬಳಿಕ ಕೀಟನಾಶಕವನ್ನು ಬಲವಂತವಾಗಿ ಕುಡಿಸಿದ್ದ. ಅಕ್ಷಿತಾರಾಣಿಗೆ ಕೂಡಲೇ ಸಿಗಬೇಕಿದ್ದ ವೈದ್ಯಕೀಯ ಚಿಕಿತ್ಸೆಗೂ ನವೀನ್ ಉದ್ದೇಶಪೂರ್ವಕವಾಗಿ ವಿಳಂಬವಾಗುವಂತೆ ಮಾಡಿದ್ದ. ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಅಕ್ಷಿತಾರಾಣಿ ಸಾವನ್ನಪ್ಪಿದ್ದಳು.

ಬಳಿಕ ಯುವತಿಯ ಮೊಬೈಲ್ ಮೂಲಕ ತಂದೆಗೆ ಕರೆ ಮಾಡಿ, ತಾನಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬದವರನ್ನು ನಂಬಿಸಿದ್ದ. ಕೊಲೆಯ ರಹಸ್ಯವನ್ನು ಭೇದಿಸಲು ಸಿಸಿಟಿವಿ, ಕಾಲ್ ಲಾಗ್, ಕಾಲ್ ರೆಕಾರ್ಡಿಂಗ್ ಮತ್ತು ಇತರ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲನೆ ನಡೆಸಿದಾಗ ಪೊಲೀಸರಿಗೆ ಉಪನ್ಯಾಸಕನ ಅಸಲಿ ಮುಖದ ಬಗ್ಗೆ ಅರಿವಾಗಿದೆ. ಸದ್ಯ ಪೊಲೀಸರು ಆರೋಪಿ ನವೀನ್ ಕುಮಾರ್ ಹಾಗೂ ರವಿ ಕುಮಾರ್‌ನನ್ನು ಬಂಧಿಸಿದ್ದಾರೆ.

ಸದ್ಯ ರವಿ ಕುಮಾರ್ ವಿರುದ್ಧ ಅಕ್ಷಿತಾರಾಣಿ ಮಾಡಿರುವ ಬಲವಂತದ ಲೈಂಗಿಕ ದೌರ್ಜನ್ಯ ಆರೋಪಗಳ ಕುರಿತು ತನಿಖೆ ನಡೆಯುತ್ತಿದೆ. ಆದರೆ ರವಿ ಕುಮಾರ್ ವಿರುದ್ಧದ ಆರೋಪಗಳನ್ನು ಅವರ ಪತ್ನಿ ತಳ್ಳಿಹಾಕಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular