HomeKarnatakaBIG NEWS: ಕಬ್ಬು ಕಟಾವ್ ಮಾಡಲು ಬಂದಿದ್ದ ದಂಪತಿ ನಡುವೆ ಜಗಳ: ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ...

BIG NEWS: ಕಬ್ಬು ಕಟಾವ್ ಮಾಡಲು ಬಂದಿದ್ದ ದಂಪತಿ ನಡುವೆ ಜಗಳ: ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿ

ಗೋಕಾಕ್: ಕಬ್ಬು ಕಟಾವ್ ಮಾಡಲೆಂದು ಮಹಾರಾಷ್ಟ್ರದಿಂದ ಬೆಳಗಾವಿ ಜಿಲ್ಲೆಯ ಗೋಕಾಕ್ ಗೆ ಬಂದಿದ್ದ ದಪತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಮೀರಾಬಾಯಿ ಜಂಗಲೆಯ (30) ಪತಿಯಿಂದಲೇ ಕೊಲೆಯಾದ ಪತ್ನಿ. ಬಾಲಾಜಿ ಜಂಗಲೆ (40) ಪತ್ನಿ ಕೊಂದ ಕೊಲೆಗಾರ. ಮಹಾರಾಷ್ಟ್ರ ಮೂಲದ ಚಂಬುರ್ದರಾ ಗ್ರಾಮದ ಬಾಲಾಜಿ ಹಾಗೂ ಮೀರಾ ದಂಪತಿ ಕಬ್ಬು ಕಟಾವ್ ಮಾಡಲೆಂದು ತಮ್ಮ ತಂಡದವರ ಜೊತೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಉಪ್ಪಾರಟ್ಟಿ ಗ್ರಾಮಕ್ಕೆ ಬಂದಿದ್ದಾರೆ. ಪತಿ ಬಾಲಾಜಿ ಕುಡಿದುಬಂದು ಕೆಲಸ ಮಾಡುತ್ತಿದ್ದ. ಇದೇ ಕಾರಣಕ್ಕೆ ಪತಿ-ಪತ್ನಿ ನಡುವೆ ಜಗಳ ಆರಂಭವಾಗಿದೆ.

ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದ್ದು, ಬಾಲಾಜಿ ಜಂಗಲೆ ಕಲ್ಲಿನಿಂದ ಪತ್ನಿಯ ತಲೆಯ ಮೇಲೆ ಜಜ್ಜಿದ್ದಾನೆ. ಸ್ಥಳದಲ್ಲೇ ಪತ್ನಿ ಸಾವನ್ನಪ್ಪಿದ್ದಾರೆ. ಗೋಗಾಕ್ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿ, ತನಿಖೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular