HomeLatest NewsBREAKING NEWS: ನೇಣುಬಿಗಿದ ಸ್ಥಿತಿಯಲ್ಲಿ ಅಮ್ಮ-ಮಗಳು ಶವವಾಗಿ ಪತ್ತೆ

BREAKING NEWS: ನೇಣುಬಿಗಿದ ಸ್ಥಿತಿಯಲ್ಲಿ ಅಮ್ಮ-ಮಗಳು ಶವವಾಗಿ ಪತ್ತೆ

ಮೈಸೂರು: ಅಮ್ಮ-ಮಗಳು ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಂಜನಗೂಡು ತಾಲೂಕಿನ ಕೊತ್ತನಹಳ್ಳಿಯಲ್ಲಿ ನಡೆದಿದೆ.

ಮಹದೇವಮ್ಮ (40) ಮಗಳು ಸುಪ್ರಿಯಾ (20) ಮೃತ ದುರ್ದೈವಿಗಳು. ಪತಿ ಜಯರಾಮ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ. ಜಯರಾಮ್ ಪತಿ ಹಾಗೂ ಮಗಳನ್ನು ಕೊಂದು ಆತ್ಮಹತ್ಯೆ ಎಂಬ ರೀತಿಯಲ್ಲಿ ಬಿಂಬಿಸಿದ್ದಾನೆ ಎಂದು ಮಹದೇವಮ್ಮ ಕುಟುಂಬದವರು ಆರೋಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

22 ವರ್ಷಗಳ ಹಿಂದೆ ಜಯರಾಮ್ ಹಾಗೂ ಮಹದೇವಮ್ಮ ವಿವಾಹವಾಗಿತ್ತು. ಪದೇ ಪದೇ ಪತ್ನಿಗೆ ಜಯರಾಮ್ ಕಿರುಕುಳ ನೀಡುತ್ತಿದ್ದ. ಪತಿಯ ವಿರುದ್ಧ ಹಲವು ಬಾರಿ ಮಹದೇವಮ್ಮ ಪೊಲೀಸ್ ಠಾಣೆಗೂ ದೂರು ನೀಡಿದ್ದರು. ಇದೀಗ ಮನೆಯಲ್ಲಿಯೇ ಫ್ಯಾನ್ ಗೆ ನೇಣುಬಿಗಿದುಕೊಂಡಿರುವ ರೀತಿಯಲ್ಲಿ ತಾಯಿ-ಮಗಳು ಶವವಗೈ ಪತ್ತೆಯಾಗಿದ್ದಾರೆ.

ಹುಲ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular