HomeKarnatakaSHOCKING NEWS: ಇನ್ ಸ್ಟಾಗ್ರಾಂ ಲೈವ್ ಮಾಡುತ್ತಲೇ ಪತ್ನಿಯನ್ನು ಇರಿದು ಕೊಂದ ಪತಿ

SHOCKING NEWS: ಇನ್ ಸ್ಟಾಗ್ರಾಂ ಲೈವ್ ಮಾಡುತ್ತಲೇ ಪತ್ನಿಯನ್ನು ಇರಿದು ಕೊಂದ ಪತಿ

ಬೆಂಗಳೂರು: ಪತಿ ಹಾಗೂ ಪತ್ನಿ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಇನ್ ಸ್ಟಾಗ್ರಾಂ ಲೈವ್ ಗೆ ಬಂದು ಪತಿ ಮಹಾಶಯ ಪತ್ನಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ.

ತಬರೇಜ್ ಪತ್ನಿಯನ್ನೇ ಕೊಂದ ಪತಿ. ಫಾಜಿಲಾ ಕೊಲೆಯಾದ ಮಹಿಳೆ. 9 ವರ್ಷಗಳ ಹಿಂದೆ ಫಾಜಿಲಾ ಹಾಗೂ ತಬರೇಜ್ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಪತಿ-ಪತ್ನಿ ನಡುವೆ ವೈಮನಸ್ಸು ಹೆಚ್ಚಾದ ಹಿನ್ನೆಲೆಯಲ್ಲಿ ಫಾಜಿಲಾ ಮಕ್ಕಳೊಂದಿಗೆ ತವರಿಗೆ ಬಂದಿದ್ದಳು.

ಇಂದು ಬೆಳಿಗ್ಗೆ ಎಂದಿನಂತೆ ಮಕ್ಕಳು ಶಾಲೆಗೆ ಹೋಗಿದ್ದ ವೇಳೆ ಮನೆಗೆ ನುಗ್ಗಿದ ತಬರೇಜ್, ಪತ್ನಿ ಜೊತೆ ಜಗಳವಾಡಿದ್ದಾನೆ. ಇದೇ ವೇಳೆ ಇನ್ ಸ್ಟಾಗ್ರಾಂ ಲೈವ್ ಮಾಡುತ್ತಲೇ ಚಾಕುವನ್ನು ತೆಗೆದು ಪತ್ನಿಗೆ ಮನಬಂದಂತೆ ಇರಿದು ಹತ್ಯೆ ಮಾಡಿದ್ದಾನೆ. ಕೃತ್ಯದ ಬಳಿಕ ತನಗೆ ಏನು ಗೊತ್ತಿಲ್ಲದವನಂತೆ ಮನೆಯಿಂದ ಹೊರಗೆ ತೆರಳಿ ಪರಾರಿಯಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular