ಆಫ್ರಿಕನ್ ಮೂಲದ ಮಹಿಳೆಯೊಬ್ಬರು ಮದ್ಯದ ಅಮಲಿನಲ್ಲಿ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಘಟನೆ ನಡೆದಿದ್ದು, ಅದ್ರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ಗ್ರೇಟರ್ ನೋಯ್ಡಾದ ಸೂರಜ್‌ಪುರ ಪ್ರದೇಶದ ಜೈತ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆ ಪೊಲೀಸರ ಮೇಲೆ ಕೂಗಾಡುತ್ತಿರುವುದು ಕಂಡು ಬಂದಿದೆ.
ವರದಿಗಳ ಪ್ರಕಾರ, ಮಹಿಳೆ ಕುಡಿದ ಅಮಲಿನಲ್ಲಿ ದಾರಿ ಮಧ್ಯೆ ದಾರಿಹೋಕರೊಂದಿಗೆ ಜಗಳವಾಡುತ್ತಿದ್ದಳು. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಪೊಲೀಸರು ಬಂದ ನಂತರವೂ ಮಹಿಳೆ ನಡುರಸ್ತೆಯಲ್ಲೇ ಗಲಾಟೆ ಮುಂದುವರೆಸಿದ್ದಳು. ಮಹಿಳೆ ನಿರಂತರವಾಗಿ ಪೊಲೀಸ್ ಸಿಬ್ಬಂದಿಯ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
UP: गौतमबुद्ध नगर में अंग्रेजी मैम को देखिए!
अफ्रीकी मूल की महिला ने नशे की हालत में बीच सड़क पर जमकर मचाया उत्पात।
सड़क पर आने जाने वालों उलझती रही नशे की हालत में अफ्रीकी मूल की महिला।
मौके पर पँहुची पुलिस भी अंग्रेजी मैम के नशे आगे हुई नाकाम।
नशेड़ी महिला ने पुलिसकर्मियों… pic.twitter.com/JPvAevtQAy
— Rajesh pandit (@rajeshpanditnew) August 2, 2024

