HomeLatest NewsSHOCKING: ಪತ್ನಿ ಹತ್ಯೆಗೈದು ಶವಕ್ಕೆ ಬೆಂಕಿ ಇಡುವಾಗ ಸುಟ್ಟು ಗಾಯಗೊಂಡ ಪತಿ!

SHOCKING: ಪತ್ನಿ ಹತ್ಯೆಗೈದು ಶವಕ್ಕೆ ಬೆಂಕಿ ಇಡುವಾಗ ಸುಟ್ಟು ಗಾಯಗೊಂಡ ಪತಿ!

ಬೆಂಗಳೂರು: ಪತ್ನಿ ಶೋಲಶಂಕಿಸಿ ಪತಿ ಮಹಾಶಯನೊಬ್ಬ ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದು ಬಳಿಕ ಆಕೆಯ ಶವವನ್ನು ಸುಟ್ಟು ಹಾಕುವಾಗ ಬೆಂಕಿ ತಗುಲಿ ಆತನೂ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಅಬ್ಬಿನಹೊಳೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪತಿ ಲಿಂಗರಾಜ್, ಪತ್ನಿ ಸುನಿತಾಳ ಬಗ್ಗೆ ಅನುಮಾನಗೊಂಡು ಆಕೆಯ ಕತ್ತುಹಿಸುಕಿ ಕೊಲೆಗೈದಿದ್ದಾನೆ. ಬಳಿಕ ಶವಕ್ಕೆ ಬೆಂಕಿಯಿಡುವ ವೇಳೆ ಲಿಂಗರಾಜುಗೂ ಗಂಭೀರವಾದ ಸುಟ್ಟಗಾಯಗಳಾಗಿವೆ.

ಗಾಯಾಳು ಲಿಂಗರಾಜುನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular