HomeCrimeಗೆಳೆಯನೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದಾಗಲೇ ಪತಿ ಕೈಗೆ ಸಿಕ್ಕಿಬಿದ್ದ ಪತ್ನಿ....!

ಗೆಳೆಯನೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದಾಗಲೇ ಪತಿ ಕೈಗೆ ಸಿಕ್ಕಿಬಿದ್ದ ಪತ್ನಿ….!

ಲಕ್ನೋದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ರೆಸ್ಟೋರೆಂಟ್‌ನ ಹೊರಗೆ ಕಾರಿನಲ್ಲಿಯೇ ತನ್ನ ಪ್ರಿಯಕರನೊಂದಿಗೆ ಅನೈತಿಕ ಸಂಬಂಧದಲ್ಲಿ ತೊಡಗಿದ್ದ ಮಹಿಳೆಯೊಬ್ಬಳು ಪತಿ ಕೈಗೆ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ. ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಮಹಿಳೆಯ ಗೆಳೆಯ ಪತಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

ಲಕ್ನೋದ ಆಶಿಯಾನಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸ್ಪೈಸಿ ಹಬ್ ರೆಸ್ಟೋರೆಂಟ್ ಬಳಿ ನಿಲ್ಲಿಸಿದ್ದ ಕಾರಿನೊಳಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಕುಳಿತಿದ್ದ ಪತ್ನಿ ಮತ್ತು ಆಕೆಯ ಗೆಳೆಯ ಆದಿತ್ಯ ಉಪಾಧ್ಯಾಯ ಮಹಿಳೆ ಪತಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದ ಪತಿಗೆ ಪತ್ನಿಯ ವಾಹನ ಕಂಡು ಅನುಮಾನ ಬಂದಿತ್ತು. ಕಾರನ್ನು ಸಮೀಪಿಸಿದಾಗ, ಪತ್ನಿ ತನ್ನ ಗೆಳೆಯನೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾನೆ.

ಇದರಿಂದ ಆಕ್ರೋಶಗೊಂಡ ಪತಿ ತನ್ನ ಪತ್ನಿ ಮತ್ತು ಅವಳ ಗೆಳೆಯನನ್ನು ನಿಂದಿಸಲು ಆರಂಭಿಸಿದಾಗ ಪರಿಸ್ಥಿತಿ ಹಿಂಸಾತ್ಮಕ ತಿರುವು ಪಡೆದಿದೆ. ಪ್ರಿಯಕರ ಆದಿತ್ಯ ಉಪಾಧ್ಯ ಪರಾರಿಯಾಗಲು ಯತ್ನಿಸಿದ್ದು, ಆದರೆ, ಪತಿ ತಡೆಯಲು ಮುಂದಾದಾಗ ಆದಿತ್ಯ ಆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ನೆಲಕ್ಕೆ ತಳ್ಳಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸುಶಾಂತ್ ಗಾಲ್ಫ್ ಸಿಟಿಯ ನಿವಾಸಿ ಸಂತ್ರಸ್ತ ಮಂಗಳವಾರ ಆಶಿಯಾನಾ ಪೊಲೀಸ್ ಠಾಣೆಗೆ ಘಟನೆಯನ್ನು ವರದಿ ಮಾಡಿದ್ದಾರೆ. ದೂರಿನ ಪ್ರಕಾರ, ಘರ್ಷಣೆಯು ಆಗಸ್ಟ್ 20 ರಂದು ನಡೆದಿದ್ದು, ಪತಿಯ ದೂರಿನ ಆಧಾರದ ಮೇಲೆ ಆದಿತ್ಯ ಉಪಾಧ್ಯಾಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಆಶಿಯಾನಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಛತ್ರಪಾಲ್ ಸಿಂಗ್ ಖಚಿತಪಡಿಸಿದ್ದಾರೆ. ಇದೀಗ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular