ಶಿವಮೊಗ್ಗ: ಜಿಲ್ಲೆಯ ವಿದ್ಯಾವಂತ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಫೆಬ್ರವರಿ 27 ರಂದು ಬೆಳಿಗ್ಗೆ 10.30ಕ್ಕೆ ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಆವರಣದಲ್ಲಿ (ಕುವೆಂಪು ರಂಗಮಂದಿರದ ಪಕ್ಕ) ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎನ್. ಹೇಮಂತ್ ತಿಳಿಸಿದ್ದಾರೆ.
ಯಾರೆಲ್ಲಾ ಭಾಗವಹಿಸಬಹುದು?
- ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ (Pass/Fail), ಪಿ.ಯು.ಸಿ, ಯಾವುದೇ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್ ಹಾಗೂ ಹೆಚ್ಚಿನ ವಿದ್ಯಾಭ್ಯಾಸ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಬಹುದು.
- ವಿಶೇಷತೆ: ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಯುವತಿಯರಿಗೆ ವಿಶೇಷ ಪ್ರಾಧಾನ್ಯತೆ ನೀಡಲಾಗಿದೆ. ಇಂಟರ್ನ್ಶಿಪ್ ತರಬೇತಿ ಬಯಸುವ ವಿದ್ಯಾರ್ಥಿಗಳಿಗೂ ಅವಕಾಶವಿದೆ.
ಉದ್ಯೋಗಾವಕಾಶವಿರುವ ಕ್ಷೇತ್ರಗಳು: ಈ ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳ 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ. ಐಟಿ, ಕಂಪ್ಯೂಟರ್, ಆಟೋಮೊಬೈಲ್, ಮ್ಯಾನುಫ್ಯಾಕ್ಚರಿಂಗ್, ನರ್ಸಿಂಗ್, ಬ್ಯಾಂಕಿಂಗ್ ಹಾಗೂ ಇನ್ಶೂರೆನ್ಸ್ ಕ್ಷೇತ್ರಗಳಲ್ಲಿ ಸಾವಿರಾರು ಉದ್ಯೋಗಾವಕಾಶಗಳು ಲಭ್ಯವಿವೆ.
ಅಭ್ಯರ್ಥಿಗಳು ತರಬೇಕಾದ ದಾಖಲೆಗಳು: ಭಾಗವಹಿಸಲು ಇಚ್ಛಿಸುವವರು ಈ ಕೆಳಗಿನ ದಾಖಲೆಗಳ ಕನಿಷ್ಠ 5 ಸೆಟ್ ಝೆರಾಕ್ಸ್ ಪ್ರತಿಗಳನ್ನು ತರಬೇಕಾಗಿ ವಿನಂತಿಸಲಾಗಿದೆ:
- ಸ್ವವಿವರ (Resume/CV)
- ಭಾವಚಿತ್ರ (Photo)
- ಆಧಾರ್ ಕಾರ್ಡ್
- ಶೈಕ್ಷಣಿಕ ಪ್ರಮಾಣಪತ್ರಗಳು
ನೋಂದಣಿ ಹೇಗೆ? ಆಸಕ್ತರು ಆನ್ಲೈನ್ ಮೂಲಕ ಅಥವಾ ಮೇಳ ನಡೆಯುವ ಸ್ಥಳದಲ್ಲಿಯೇ ನೇರವಾಗಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತ್ ಅಥವಾ ತಾಲೂಕು ಪಂಚಾಯತ್ನ NRLM ವಿಭಾಗವನ್ನು ಸಂಪರ್ಕಿಸಬಹುದು.

