HomeCrimeಗೋವಾ ಥಾರ್ ಅಪಘಾತ: ಕಾರು ಓಡಿಸುತ್ತಿದ್ದದ್ದು ಯುವತಿ, ಮದ್ಯಪಾನ ಆರೋಪ

ಗೋವಾ ಥಾರ್ ಅಪಘಾತ: ಕಾರು ಓಡಿಸುತ್ತಿದ್ದದ್ದು ಯುವತಿ, ಮದ್ಯಪಾನ ಆರೋಪ

ಗೋವಾದಲ್ಲಿ ನಡೆದ ಥಾರ್ ಕಾರು ಅಪಘಾತ ಭಾರೀ ಚರ್ಚೆಗೆ ಕಾರಣವಾಗಿದೆ. ಅಪಘಾತದ ಸಮಯದಲ್ಲಿ ಮಹೀಂದ್ರಾ ಥಾರ್ ಕಾರನ್ನು ದೆಹಲಿ ಮೂಲದ ಓಡಿಸುತ್ತಿದ್ದ ಎಂಬುದು ಖಚಿತವಾಗಿದೆ. ಆದರೆ ಆತ ಕುಡಿದು ವಾಹನ ಓಡುಸುತ್ತಿದ್ದ ಎಂಬುದು ಈಗ ಚರ್ಚೆಯ ವಿಚಾರ.

ಗೋವಾ ಪೊಲೀಸ ಪ್ರಕಾರ ಈ ಭೀಕರ ಅಪಘಾತದಲ್ಲಿ ಓರ್ವ ವೃದ್ಧ ಮೃತಪಟ್ಟಿದ್ದಾರೆ. ಮಹೀಂದ್ರಾ ಥಾರ್ ಓಡಿಸುತ್ತಿದ್ದ ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ. ಬಂಧಿತನಾಗಿರುವ ದೆಹಲಿ ಮೂಲದ ಯುವಕ ವಾಹನ ಚಾಲನೆ ಮಾಡುವಾಗ ಮದ್ಯದ ಅಮಲಿನಲ್ಲಿ ಇರಲಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ ಅಪಘಾತ ನಡೆದ ಸಮಯದಲ್ಲಿ ಮಹೀಂದ್ರಾ ಥಾರ್ ಕಾರನ್ನು ಮಹಿಳೆ ಓಡಿಸುತ್ತಿದ್ದಳು. ಆದರೆ ಪೊಲೀಸರ ಮಾಹಿತಿ ಪ್ರಕಾರ ಆರೋಪಿ ಶೌರ್ಯ ಗೋಯಲ್ ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾರು ಅತೀ ವೇಗವಾಗಿ ಚಲಿಸುತ್ತಿದ್ದಾಗ ಆತನ ಜೊತೆ ಸ್ನೇಹಿತೆ ಸಹ ಕಾರಿನಲ್ಲಿದ್ದಳು. ಆಕೆ ಸಹ ದೆಹಲಿ ಮೂಲದವಳು. ಈಗಾಗಲೇ ಗೋಯಲ್‌ನನ್ನು ಬಂಧಿಸಿದ್ದು, ಘಟನೆಯ ಸಮಯದಲ್ಲಿ ಆತ ಯಾವುದೇ ಅಮಲು ಪದಾರ್ಥಗಳನ್ನು ಸೇವಿಸಿರಲಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಈ ಅಪಘಾತ ಗೋವಾದ ಅಸಗಾವೊದ ಹ್ಯಾಪಿ ಬಾರ್ ಜಂಕ್ಷನ್ ಸಮೀಪ ಸೋಮವಾರ ನಡೆದಿದೆ. ಘಟನೆಯಲ್ಲಿ ಭೋಪಾಲ್ ಮೂಲದ ಭಗತ್ ಶರ್ಮಾ (65) ಎಂಬುವವರು ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯು ರಜೆ ಹಿನ್ನಲೆಯಲ್ಲಿ ಗೋವಾಕ್ಕೆ ಪ್ರವಾಸ ಬಂದಿದ್ದರು. ಅವರು ಹ್ಯುಂಡೈ i20 ಕಾರಿನಲ್ಲಿ ಒಬ್ಬ ಮಹಿಳೆ ಮತ್ತು 5 ವರ್ಷದ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದಾಗ, ಥಾರ್ ಕಾರು ಬಂದು ಬಲವಾಗಿ ಡಿಕ್ಕಿ ಹೊಡೆದಿದೆ.

ಪೊಲೀಸರು ಈಗಾಗಲೇ ಎಫ್‌ಐಆರ್‌ ದಾಖಲು ಮಾಡಿದ್ದು, ಶೌರ್ಯ ಗೋಯಲ್ ಪ್ರಮುಖ ಆರೋಪಿ. ಆತ ಮಾಪುಸಾದಿಂದ ಅಂಜುನಾ ಕಡೆಗೆ ಬಾಡಿಗೆಗೆ ಎಸ್‌ಯುವಿ ಕಾರಿನಲ್ಲಿ ಸಂಚಾರವನ್ನು ಮಾಡುತ್ತಿದ್ದ.

ಎರಡು ಕಾರುಗಳ ಅಪಘಾತದ ತೀವ್ರತೆಗೆ ಎರಡೂ ವಾಹನ ಜಖಂಗೊಂಡಿವೆ. ಅಪಘಾತ ಸಂಭವಿಸಿದ ತಕ್ಷಣವೇ ಭಗತ್ ಶರ್ಮಾ ಅವರನ್ನು ಮಾಪುಸಾದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಶರ್ಮಾ ಅವರೊಂದಿಗೆ ಪ್ರಯಾಣಿಸುತ್ತಿದ್ದ ಇತರ ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಆರಂಭದಲ್ಲಿ ಮಹಿಳೆಯೊಬ್ಬರು ಥಾರ್ ಕಾರನ್ನು ಚಲಾಯಿಸುತ್ತಿದ್ದರು. ಆದರೆ, ಅಪಘಾತ ಸಂಭವಿಸಿದ ಕೂಡಲೇ ಆಕೆ ಪ್ರಯಾಣಿಕರ ಸೀಟಿಗೆ ಬದಲಾದಳು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದು, ಅಪಘಾತದ ಕುರಿತು ಗೊಂದಲಕ್ಕೆ ಕಾರಣವಾಗಿತ್ತು.

ಪೊಲೀಸರು ಬಾಡಿಗೆಗೆ ಪಡೆದಿದ್ದ ಥಾರ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಸಾವು ಉಂಟುಮಾಡಿದ ಆರೋಪದಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular