HomeEntertainment'ಮನದ ಕಡಲು' ಚಿತ್ರದ ''ಹೂದುಂಬಿ'' ಹಾಡು ರಿಲೀಸ್

‘ಮನದ ಕಡಲು’ ಚಿತ್ರದ ”ಹೂದುಂಬಿ” ಹಾಡು ರಿಲೀಸ್

ಯೋಗರಾಜ್ ಭಟ್ ನಿರ್ದೇಶನದ ಸುಮುಖ್ ಅಭಿನಯದ ‌ʼಮನದ ಕಡಲುʼ ಚಿತ್ರದ ಮೊದಲ ಹಾಡು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಸಂಜಿತ್‌ ಹೆಗಡೆ ಧ್ವನಿಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ವಿ. ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ ಹಾಗೂ ಯೋಗರಾಜ್ ಭಟ್ ಅವರ ಸಾಹಿತ್ಯ ಇದೆ.

‘ಮುಂಗಾರು ಮಳೆ’ ತೆರೆ ಮೇಲೆ ಬಂದು ಇಂದಿಗೆ 18 ವರ್ಷಗಳಾಗಿದ್ದು, ಇದನ್ನು ಸೆಲೆಬ್ರೇಟ್ ಮಾಡಲು ಈ ಹಾಡನ್ನು ರಿಲೀಸ್ ಮಾಡಿರುವುದಾಗಿ ನಿರ್ದೇಶಕ ಯೋಗರಾಜ್ ಭಟ್ ತಿಳಿಸಿದ್ದಾರೆ.

ಈ ಚಿತ್ರವನ್ನುಇಕೆ ಎಂಟರ್ಟೈನರ್ಸ್ ಬ್ಯಾನರ್ ನಲ್ಲಿ ಇ. ಕೃಷ್ಣಪ್ಪ ನಿರ್ಮಾಣ ಮಾಡಿದ್ದು, ಸುಮುಖ್ ಹಾಗೂ ರಶಿಕಾ‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆ.ಎಂ. ಪ್ರಕಾಶ್ ಸಂಕಲನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ವಿ. ಮುರಳಿ ನೃತ್ಯ ನಿರ್ದೇಶನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular