HomeKarnatakaಹಣ ವಸೂಲಿ ಆರೋಪ: 'ಕಳ್ಳ ಕಳ್ಳ ಪೊಲೀಸ್ ಕಳ್ಳ' ಎಂದು ಅಟ್ಟಿಸಿಕೊಂಡು ಹೋದ ಸಾರ್ವಜನಿಕರು; ಹೊಯ್ಸಳ...

ಹಣ ವಸೂಲಿ ಆರೋಪ: ‘ಕಳ್ಳ ಕಳ್ಳ ಪೊಲೀಸ್ ಕಳ್ಳ’ ಎಂದು ಅಟ್ಟಿಸಿಕೊಂಡು ಹೋದ ಸಾರ್ವಜನಿಕರು; ಹೊಯ್ಸಳ ವಾಹನದೊಂದಿಗೆ ಪರಾರಿಯಾದ ಪೊಲೀಸ್

ಬೆಂಗಳೂರು: ಜನರಿಂದ ಹಣ ವಸೂಲಿಗೆ ಮುಂದಾಗಿದ್ದ ಪೊಲೀಸರನ್ನು ‘ಕಳ್ಳ ಕಳ್ಳ ಪೊಲೀಸ್ ಕಳ್ಳ’ ಎಂದು ಸಾರ್ವಜನಿಕರೇ ಪೊಲೀಸರನ್ನು ಅಟ್ಟಾಡಿಸಿಕೊಂಡು ಹೋದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೊಯ್ಸಳ ವಾಹನ ಪೊಲೀಸರು ಹಣ ವಸೂಲಿ ಮಾಡುತ್ತಿದ್ದಾರೆ. ಇವರು ಅಸಲಿ ಅಲ್ಲ ನಕಲಿ ಪೊಲೀಸರು ಎಂದು ಸಾರ್ವಜನಿಕರು ಮೊಬೈಲ್ ವಿಡಿಯೋ ಮಾಡುತ್ತಾ ಅಟ್ಟಿಸಿಕೊಂಡು ಹೋಗಿದ್ದಾರೆ.

ಕಳ್ಳ ಕಳ್ಳ ಪೊಲೀಸ್ ಕಳ್ಳ ಎಂದು ಕೋಗುತ್ತಾ ಬರುವುದನ್ನು ಕಂಡ ಪೊಲೀಸರು ಹೊಯ್ಸಳ ವಾಹನದೊಂದಿಗೆ ಪರಾರಿಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular