HomeLatest Newsಬಿಳಿ ಈರುಳ್ಳಿ ಬಳಕೆ ಹೇಗೆ....? ಪ್ರಯೋಜನಗಳೇನು...? ನಿಮಗೆ ತಿಳಿದಿರಲಿ ಈ ವಿಷಯ

ಬಿಳಿ ಈರುಳ್ಳಿ ಬಳಕೆ ಹೇಗೆ….? ಪ್ರಯೋಜನಗಳೇನು…? ನಿಮಗೆ ತಿಳಿದಿರಲಿ ಈ ವಿಷಯ

ಸಾಮಾನ್ಯವಾಗಿ ಸೀಸನಲ್ ಆಗಿ ದೊರೆಯುವ ಬಿಳಿ ಈರುಳ್ಳಿ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಬೇಸಿಗೆಯಲ್ಲಿ ಇದನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.

ಬಿಳಿ ಈರುಳ್ಳಿಯನ್ನು ಹಲವು ಬಗೆಯ ಔಷಧಗಳ ತಯಾರಿಗೆ ಬಳಸುತ್ತಾರೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಔಷಧೀಯ ಗುಣ ಇರುವುದೇ ಇದಕ್ಕೆ ಮುಖ್ಯ ಕಾರಣ. ಬಿಳಿ ಈರುಳ್ಳಿಯಲ್ಲಿರುವ ಬ್ಯಾಕ್ಟೀರಿಯಾಗಳು ಆರೋಗ್ಯ ಸ್ನೇಹಿಯಾಗಿವೆ ಎಂಬುದು ವಿಶೇಷ.

ಇದೇ ಕಾರಣಕ್ಕೆ ಜೀರ್ಣ ಸಂಬಂಧಿ ಸಮಸ್ಯೆಗಳನ್ನು ದೂರಮಾಡುತ್ತದೆ ಎನ್ನಲಾಗಿದೆ. ಬಿಳಿ ಈರುಳ್ಳಿಯನ್ನು ಸಲಾಡ್ ರೂಪದಲ್ಲಿ ಹಸಿಯಾಗಿಯೇ ಸೇವಿಸಿದರೆ ಆಹಾರದ ರುಚಿ ಹೆಚ್ಚುತ್ತದೆ. ಜೊತೆಗೆ ದೇಹವೂ ತಂಪಾಗಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾತ್ರಿ ವೇಳೆ ಕೋಸಂಬರಿ ಸೇವಿಸುವವರಾದರೆ ಇದನ್ನು ಕಡ್ಡಾಯವಾಗಿ ಬೆರೆಸಿ. ಏಕೆಂದರೆ ಇದು ರಾತ್ರಿ ವೇಳೆ ವಿಪರೀತ ಬೆವರುವ ಸಮಸ್ಯೆಯನ್ನು ದೂರ ಮಾಡುತ್ತದೆ. ಹೊಟ್ಟೆಯುಬ್ಬರವನ್ನು ತಡೆಯುತ್ತದೆ. ಮಕ್ಕಳಿಗೆ ಇದರ ರಸಕ್ಕೆ ಜೇನುತುಪ್ಪ ಬೆರೆಸಿ ಕೊಟ್ಟರೆ ಶೀತ, ಕೆಮ್ಮು, ದಮ್ಮು ಸಮಸ್ಯೆ ಹತ್ತಿರವೂ ಸುಳಿಯುವುದಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular