HomeBeautyಹೀಗೆ ಬಳಸಿ ಸೌಂದರ್ಯವರ್ಧಕ ಆಲೂಗಡ್ಡೆ

ಹೀಗೆ ಬಳಸಿ ಸೌಂದರ್ಯವರ್ಧಕ ಆಲೂಗಡ್ಡೆ

ಆಲೂಗಡ್ಡೆಯನ್ನು ಸೌಂದರ್ಯ ಪ್ರಸಾಧನವಾಗಿ ನಿತ್ಯ ಬಳಸಬಹುದು. ಯಾಕಂದ್ರೆ ಆಲೂಗಡ್ಡೆಯ ರಸ ನೈಸರ್ಗಿಕವಾಗಿ ಬಿಳಿ ಬಣ್ಣವನ್ನು ಉಂಟು ಮಾಡುವಂತಹ ಗುಣವನ್ನು ಹೊಂದಿದೆ. ಇದು ಚರ್ಮಕ್ಕೆ ಉತ್ತಮ ಬಣ್ಣವನ್ನು ಕೊಡುತ್ತದೆ.

ತ್ವಚೆ ಕಪ್ಪಾಗಿದ್ದರೆ : ಒಂದು ಆಲೂಗಡ್ಡೆಯನ್ನು ಚಿಕ್ಕದಾಗಿ ತುರಿದು, ಇದಕ್ಕೆ ಒಂದು ಚಮಚ ಮೊಸರು ಸೇರಿಸಿ ನುಣ್ಣಗೆ ಅರೆಯಬೇಕು. ಈ ಪೇಸ್ಟ್‌ ಅನ್ನು ಕಪ್ಪಾಗಿದ್ದ ಚರ್ಮದ ಮೇಲೆ ತೆಳುವಾಗಿ ಹಚ್ಚಿ ನಯವಾಗಿ ಮಸಾಜ್‌ ಮಾಡಬೇಕು. ಸುಮಾರು ಇಪ್ಪತ್ತು ನಿಮಿಷ ಹಾಗೆಯೇ ಬಿಡಬೇಕು. ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆಯಬೇಕು.

ಒಣ ಚರ್ಮವಾಗಿದ್ದರೆ : ನಿತ್ಯ ಆಲೂಗಡ್ಡೆ ರಸವನ್ನು ಹಚ್ಚಿಕೊಳ್ಳುತ್ತಿದ್ದರೆ, ಚರ್ಮಕ್ಕೆ ಕಾಂತಿ ಬರುತ್ತದೆ. ಒಂದು ಆಲೂಗಡ್ಡೆಯನ್ನು ಚಿಕ್ಕದಾಗಿ ತುರಿದುಕೊಳ್ಳಬೇಕು. ಇದಕ್ಕೆ ಸ್ವಲ್ಪ ಲೋಳೆಸರದ ರಸವನ್ನು ಸೇರಿಸಿ ಚೆನ್ನಾಗಿ ಕಲೆಸಿಕೊಳ್ಳಬೇಕು. ಇದನ್ನು ನುಣ್ಣಗೆ ಅರೆದು ಮುಖಕ್ಕೆ ಹಚ್ಚಿಕೊಂಡು ನಲವತ್ತು ನಿಮಿಷ ಒಣಗಲು ಬಿಡಬೇಕು. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತ್ವಚೆ ಸುಟ್ಟಂತಾಗಿದ್ದರೆ : ಮಿಕ್ಸಿಗೆ ಆಲೂಗಡ್ಡೆ ಹಾಕಿ ಅದರ ರಸ ತೆಗೆಯಬೇಕು. ಈ ರಸವನ್ನು ಫ್ರಿಜ್ ನಲ್ಲಿ ಇರಿಸಬೇಕು. ಬಿಸಿಲಿನಿಂದ ಚರ್ಮ ಸುಟ್ಟಂತಾದಾಗ ಈ ರಸವನ್ನು ಚರ್ಮದ ಮೇಲೆ ಹಚ್ಚಿಕೊಂಡು ನಯವಾಗಿ ಮಸಾಜ್‌ ಮಾಡಬೇಕು. 15 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಬೇಕು.

For Latest News Updates, Join Our Whatsapp Community🚩
RELATED ARTICLES

Most Popular