HomeIndiaಕೇಂದ್ರ ಸರ್ಕಾರದಿಂದ ವಾಟ್ಸಾಪ್‌ನಲ್ಲಿ ಉಚಿತ ಕಾನೂನು ನೆರವು: ‘ನ್ಯಾಯ ಸೇತು’ ಬಳಕೆ ಹೇಗೆ?

ಕೇಂದ್ರ ಸರ್ಕಾರದಿಂದ ವಾಟ್ಸಾಪ್‌ನಲ್ಲಿ ಉಚಿತ ಕಾನೂನು ನೆರವು: ‘ನ್ಯಾಯ ಸೇತು’ ಬಳಕೆ ಹೇಗೆ?

ಕೇಂದ್ರ ಸರ್ಕಾರ ಜನರಿಗೆ ವಾಟ್ಸಾಪ್‌ನಲ್ಲಿ ಉಚಿತ ಕಾನೂನು ನೆರವು ಸೇವೆಯನ್ನು ‘ನ್ಯಾಯ ಸೇತು’ ಮೂಲಕ ನೀಡಲಿದೆ. ಬೆರಳ ತುದಿಯಲ್ಲಿಯೇ ನೀವು ಎಲ್ಲಿಂದ ಬೇಕಾದರೂ ಕಾನೂನು ನೆರವು ಪಡೆಯಬಹುದಾಗಿದೆ. ಇದನ್ನು ಬಳಕೆ ಮಾಡುವುದು ಹೇಗೆ?, ಸೇವೆ ಕಾರ್ಯ ನಿರ್ವವಹಣೆ ಹೇಗೆ? ಮುಂತಾದ ವಿವರಗಳು ಇಲ್ಲಿದೆ.

ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವಾಲಯ ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ನೀಡಿದೆ. ಮೆಟ ಒಡೆತನದ ವಾಟ್ಸಾಪ್‌ನಲ್ಲಿ ಈ ಚಾಟ್‌ಬಾಟ್ ಮೂಲಕ ಜನರು ಹೇಗೆ ಉಚಿತ ಕಾನೂನು ಸಹಾಯ ಪಡೆಯಬಹುದು ಎಂಬುದನ್ನು ವಿವರಿಸಿದೆ.

ಸಿವಿಲ್/ ಕ್ರಿಮಿನಲ್ ಕಾನೂನು, ರಕ್ಷಣೆ, ಕಾರ್ಪೊರೇಟ್ ಮತ್ತು ಕೌಟುಂಬಿಕ ವಿವಾದಗಳಂತಹ ವಿವಿಧ ಕ್ಷೇತ್ರಗಳಲ್ಲಿ ಕಾನೂನು ನೆರವು ಪಡೆಯಲು ಜನರು ನ್ಯಾಯ ಸೇತು (Nyaya Setu) ಚಾಟ್‌ಬಾಟ್ ಅನ್ನು ಬಳಕೆ ಮಾಡಬಹುದು, ಈ ಬಳಕೆ ಸಂಪೂರ್ಣ ಉಚಿತವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾನೂನು ಮತ್ತು ನ್ಯಾಯ ಸಚಿವಾಲಯ ತನ್ನ ಪೋಸ್ಟ್‌ನಲ್ಲಿ, “ಕಾನೂನು ಸಹಾಯವು ಈಗ ಕೇವಲ ಒಂದು ಸಂದೇಶದ ದೂರದಲ್ಲಿದೆ. ನ್ಯಾಯ ಸೇತು ನಿಮ್ಮ ವಾಟ್ಸಾಪ್‌ಗೆ ನೇರವಾಗಿ ಸುಲಭವಾಗಿ ನ್ಯಾಯವನ್ನು ತಂದಿದೆ. ಕಾನೂನು ಸಲಹೆ ಮತ್ತು ಮಾಹಿತಿಯನ್ನು ಪಡೆಯಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಧೃಢೀಕರಿಸಿ. ಈ ಸ್ಮಾರ್ಟ್ ನ್ಯಾವಿಗೇಷನ್ ಮೂಲಕ ವೃತ್ತಿಪರ ಕಾನೂನು ನೆರವು ಪ್ರತಿ ನಾಗರಿಕರಿಗೂ ಯಾವಾಗಲೂ ವೇಗವಾಗಿ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ ಎಂದು ಹೇಳಿದೆ.

ನ್ಯಾಯ ಸೇತು ಬಳಸುವುದು ಹೇಗೆ?: ಜನರು ಮೊದಲು ತಮ್ಮ ವಾಟ್ಸಾಪ್‌ನಲ್ಲಿ 7217711814 ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಿ. ಬಳಿಕ ಈ ಚಾಟ್‌ಬಾಟ್ ಬಳಸಲು ಪ್ರಾರಂಭಿಸಬಹುದು. Tele-Law ಎಂಬ ಆಯ್ಕೆ ನಿಮಗೆ ಕಾಣಿಸಿಕೊಳ್ಳುತ್ತದೆ. ಮೊಬೈಲ್ ಸಂಖ್ಯೆಯ ಧೃಢೀಕರಣದ ನಂತರ ಎಐ ತಂತ್ರಜ್ಞಾನ ಆಧಾರಿತ ನ್ಯಾಯ ಸೇತು ಚಾಟ್‌ಬಾಟ್ ಮೂಲಕ ಕಾನೂನು ಸಲಹೆ ಮತ್ತು ಮಾಹಿತಿ ಪಡೆಯಬಹುದು.

ಸೇವೆಯು ಬಳಕ ಹಿಂದೆ ಪ್ರಾರಂಭವಾಗಿದೆ ಪ್ರಸ್ತುತ ಕೆಲವೇ ಬಳಕೆದಾರರು ಇದನ್ನು ಬಳಸಿದ್ದಾರೆ. ಸೇವೆಯನ್ನು ಬಳಸುವಾಗ ತಾಂತ್ರಿಕ ದೋಷಗಳು  ಕಂಡುಬರುತ್ತಿವೆ ಎಂದು ಹಲವರು ಹೇಳಿದ್ದಾರೆ. ಅಲ್ಲದೆ, ನ್ಯಾಯ ಸೇತುವನ್ನು ವಾಟ್ಸಾಪ್‌ಗೆ ಲಿಂಕ್ ಮಾಡುವ ಬದಲು ಭಾರತದಲ್ಲೇ ಅಭಿವೃದ್ಧಿಪಡಿಸಲಾದ ಅರಟ್ಟೈ ಪ್ಲಾಟ್‌ಫಾರ್ಮ್‌ಗೆ ಏಕೆ ಲಿಂಕ್ ಮಾಡಿಲ್ಲ? ಎಂದು ಕೆಲವು ಬಳಕೆದಾರರು ಪ್ರಶ್ನಿಸಿದ್ದಾರೆ.

ಕೇತನ್ ಪಟೇಲ್ ಎಂಬುವವರು ಎಕ್ಸ್‌ ಖಾತೆಯಲ್ಲಿ, “ಈ ಸೇವೆ ಸರಿಯಾಗಿ ಕೆಲಸ ಮಾಡುತ್ತಿದೆಯೇ ಅಥವಾ ಇಲ್ಲವೇ ಎಂದು ಕಾನೂನು ಸಚಿವಾಲಯದ ಯಾರಾದರೂ ಪರಿಶೀಲಿಸಿದ್ದೀರಾ? ಅಥವಾ ಕೇವಲ ಪ್ರಚಾರಕ್ಕಾಗಿ ಇದನ್ನು ಆರಂಭಿಸಿದಿರಾ? ಇದರಲ್ಲಿ ಎರರ್ ಇದ್ದು, ಡೆವಲಪರ್ ಅನ್ನು ಸಂಪರ್ಕಿಸಿ ಎಂಬ ಸಂದೇಶ ಬರುತ್ತಿದೆ” ಎಂದು ಕಮೆಂಟ್ ಮಾಡಿದ್ದಾರೆ.

ಕೌಟುಂಬಿಕ ವಿವಾದಗಳು, ವೈವಾಹಿಕ ಸಮಸ್ಯೆಗಳು ಮತ್ತು ಕೌಟುಂಬಿಕ ಹಿಂಸಾಚಾರ ಪ್ರಕರಣಗಳಿಗೆ ನ್ಯಾಯ ಸೇತು ಬೆಂಬಲ ನೀಡುತ್ತದೆ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯ ತಿಳಿಸಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular