HomeLifestyleರುಚಿ ರುಚಿಯಾಗಿರುವ ಸಬ್ಬಕ್ಕಿ ಹಲ್ವಾ ಮಾಡುವ ವಿಧಾನ

ರುಚಿ ರುಚಿಯಾಗಿರುವ ಸಬ್ಬಕ್ಕಿ ಹಲ್ವಾ ಮಾಡುವ ವಿಧಾನ

ನವರಾತ್ರಿ ಹಬ್ಬದ ಸಂಭ್ರಮ ಎಲ್ಲೆಲ್ಲೂ ಮನೆ ಮಾಡಿದೆ. ಹಬ್ಬದ ನಿಮಿತ್ತ ನೀವೂ ರುಚಿ ರುಚಿಯಾಗಿರುವ ಸಬ್ಬಕ್ಕಿ ಹಲ್ವಾ ಮಾಡಿ ಸವಿಯಿರಿ.

ಸಬ್ಬಕ್ಕಿ ಹಲ್ವಾ ಮಾಡಲು ಬೇಕಾಗುವ ಪದಾರ್ಥ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1 ಕಪ್ ಸಬ್ಬಕ್ಕಿ

3 ಕಪ್ ಹಾಲು

¼ ಕಪ್ ತುಪ್ಪ

¼ ಕಪ್ ಸಕ್ಕರೆ

ರುಚಿಗೆ ತಕ್ಕಷ್ಟು ದ್ರಾಕ್ಷಿ, ಗೋಡಂಬಿ, ಏಲಕ್ಕಿ

ಚಿಟಕಿ ಕೇಸರಿ ಬಣ್ಣ

ಸಬ್ಬಕ್ಕಿ ಹಲ್ವಾ ಮಾಡುವ ವಿಧಾನ :

ಒಂದು ಬಾಣಲೆಗೆ ಸಬ್ಬಕ್ಕಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತ್ರ ಕುಕ್ಕರಿಗೆ ಹಾಲು, ಸಬ್ಬಕ್ಕಿ ಹಾಕಿ ಒಂದು ವಿಷಲ್ ಕೂಗಿಸಿಕೊಳ್ಳಿ.

ನಂತ್ರ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ, ಗೋಡಂಬಿ, ದ್ರಾಕ್ಷಿಯನ್ನು ಹುರಿದು ಪಕ್ಕಕ್ಕಿಡಿ. ಅದೇ ಬಾಣಲೆಗೆ ಸಬ್ಬಕ್ಕಿ ಮತ್ತು ಸಕ್ಕರೆ ಹಾಕಿ. ಸಕ್ಕರೆ ಕರಗಿದ ನಂತ್ರ ಉಳಿದ ತುಪ್ಪವನ್ನು ಹಾಕಿ ಕೈಯಾಡಿಸುತ್ತಿರಿ. ಬಣ್ಣವನ್ನು ಸೇರಿಸಿ.

 ತುಪ್ಪ ಬಿಡುತ್ತ ಬರ್ತಾ ಇದ್ದಂತೆ ಹುರಿದಿಟ್ಟ ದ್ರಾಕ್ಷಿ, ಗೋಡಂಬಿ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ ಗ್ಯಾಸ್ ಆರಿಸಿ. ನಂತ್ರ ತುಪ್ಪ ಸವರಿದ ತಟ್ಟೆಗೆ ಇದನ್ನು ಹಾಕಿ ಆರಲು ಬಿಡಿ.

For Latest News Updates, Join Our Whatsapp Community🚩
RELATED ARTICLES

Most Popular