HomeLifestyleಇಲ್ಲಿದೆ ರುಚಿಕರ ಅವಲಕ್ಕಿ ಉತ್ತಪ್ಪ ಮಾಡುವ ವಿಧಾನ

ಇಲ್ಲಿದೆ ರುಚಿಕರ ಅವಲಕ್ಕಿ ಉತ್ತಪ್ಪ ಮಾಡುವ ವಿಧಾನ

ಅವಲಕ್ಕಿ ಬೆಳಗಿನ ತಿಂಡಿಗೆ ಹೇಳಿ ಮಾಡಿಸಿದಂತಿರುತ್ತದೆ. ವಗ್ಗರಣೆ ಅವಲಕ್ಕಿ ಕಾಮನ್ ಆಯ್ತು. ನೀವು ಸ್ಪೆಷಲ್ ಆಗಿರೋ ಅವಲಕ್ಕಿ ಉತ್ತಪ್ಪ ಟ್ರೈ ಮಾಡಿ ನೋಡಿ. ಇದನ್ನು ಮಾಡೋದು ಸುಲಭ, ತಿನ್ನೋಕೆ ರುಚಿಯಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು :

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅವಲಕ್ಕಿ ಅರ್ಧ ಕಪ್, ಅರ್ಧ ಕಪ್ ಮೊಸರು, ಅರ್ಧ ಕಪ್ ರವೆ, ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ಕ್ಯಾರೆಟ್, ಹಸಿಮೆಣಸು, ಬೀನ್ಸ್, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಎಣ್ಣೆ.

ಮಾಡುವ ವಿಧಾನ :

ಅವಲಕ್ಕಿಯನ್ನು ಚೆನ್ನಾಗಿ ನೆನೆಸಿ. ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಅದಕ್ಕೆ ಅರ್ಧ ಕಪ್ ರವೆ, ಅರ್ಧ ಕಪ್ ಮೊಸರು ಸೇರಿಸಿ. ಬೇಕೆನಿಸಿದರೆ ಸ್ವಲ್ಪ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ತಯಾರಿಸಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿ 20 ನಿಮಿಷ ಹಾಗೇ ಬಿಡಿ.

ಇನ್ನೊಂದು ಬೌಲ್ ನಲ್ಲಿ ಹೆಚ್ಚಿದ ತರಕಾರಿಗಳನ್ನೆಲ್ಲ ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಹಾಕಿಟ್ಟುಕೊಳ್ಳಿ. ನಂತರ ಕಾದ ಕಾವಲಿ ಮೇಲೆ ಮಿಶ್ರಣ ಮಾಡಿರುವ ಹಿಟ್ಟನ್ನು ಹಾಕಿ. ಹುಯ್ದ ದೋಸೆ ಮೇಲೆ ತರಕಾರಿಯನ್ನು ಉದುರಿಸಿ. ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಿದ್ರೆ ರುಚಿಯಾದ ಅವಲಕ್ಕಿ ಉತ್ತಪ್ಪ ಅಥವಾ ಪ್ಯಾನ್ ಕೇಕ್ ರೆಡಿ.

For Latest News Updates, Join Our Whatsapp Community🚩
RELATED ARTICLES

Most Popular