HomeHealthಆರೋಗ್ಯಕರವಾದ ‘ಮೆಂತ್ಯ ಲಡ್ಡು’ಮಾಡುವ ವಿಧಾನ

ಆರೋಗ್ಯಕರವಾದ ‘ಮೆಂತ್ಯ ಲಡ್ಡು’ಮಾಡುವ ವಿಧಾನ

ಚಳಿಗಾಲದಲ್ಲಿ ದೇಹದಲ್ಲಿನ ನೋವು ಹೆಚ್ಚಾಗುತ್ತದೆ. ಮೊಣಕಾಲು, ಮೊಣಕೈ ಹೀಗೆ ಮೂಳೆಗೆ ಸಂಬಂಧಿಸಿದ ನೋವುಗಳೇ ಹೆಚ್ಚು. ಮೆಂತ್ಯದಿಂದ ಈ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಇಲ್ಲಿ ಸುಲಭವಾಗಿ ಮಾಡಬಹುದಾದ ಮೆಂತ್ಯ ಲಡ್ಡು ಇದೆ. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಬೇಕಾಗುವ ಸಾಮಗ್ರಿಗಳು: 

ಮೆಂತ್ಯ ಕಾಳು-100 ಗ್ರಾಂ, ಹಾಲು-1/2 ಲೀಟರ್, ಗೋಧಿ ಹಿಟ್ಟು-300 ಗ್ರಾಂ, ತುಪ್ಪ-250 ಗ್ರಾಂ, ಅಂಟು-100 ಗ್ರಾಂ, ಬಾದಾಮಿ-20, ಕಾಳುಮೆಣಸು-8, ಜೀರಿಗೆ ಪುಡಿ-2 ಟೀ ಸ್ಪೂನ್, ಏಲಕ್ಕಿ-10, ದಾಲ್ಚಿನ್ನಿ-4 ತುಂಡು, ಜಾಯಿ ಪತ್ರೆ-2, ಬೆಲ್ಲ-300 ಗ್ರಾಂ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ:

ಮೊದಲಿಗೆ ಮೆಂತ್ಯಕಾಳುಗಳನ್ನು ಚೆನ್ನಾಗಿ ತೊಳೆದು ಒಂದು ಬಟ್ಟೆಯ ಮೇಲೆ ಹರವಿ ಒಣಗಿಸಿಕೊಳ್ಳಿ. ನಂತರ ಇದನ್ನು ಪುಡಿ ಮಾಡಿಕೊಳ್ಳಿ. ಕುದಿಸಿದ ಹಾಲಿಗೆ ಮೆಂತ್ಯ ಪುಡಿ ಹಾಕಿ 8 ಗಂಟೆಗಳ ಕಾಲ ಹಾಗೆಯೇ ನೆನೆಯಲು ಬಿಡಿ. ನಂತರ ಒಂದು ಪ್ಯಾನ್ ಗೆ ತುಪ್ಪ ಹಾಕಿ ಅದು ಬಿಸಿಯಾಗುತ್ತಲೆ ಅದಕ್ಕೆ ನೆನೆಸಿಟ್ಟುಕೊಂಡ ಮೆಂತ್ಯ ಹಾಕಿ ಅದನ್ನು ಚೆನ್ನಾಗಿ ಫ್ರೈ ಮಾಡಿ.

ಮೆಂತ್ಯದಿಂದ ಚೆನ್ನಾಗಿ ಪರಿಮಳ ಬಂದ ನಂತರ ಇದನ್ನು ಒಂದು ಪ್ಲೇಟ್ ಗೆ ತೆಗೆದುಕೊಳ್ಳಿ. ನಂತರ ಪ್ಯಾನ್ ಗೆ ಅಂಟನ್ನು ಹಾಕಿ ಸಣ್ಣ ಉರಿಯಲ್ಲಿ ಹುರಿದು ಮೆಂತ್ಯದ ಮಿಶ್ರಣಕ್ಕೆ ಹಾಕಿ.ಅದೇ ಪ್ಯಾನ್ ಗೆ ಸ್ವಲ್ಪ ತುಪ್ಪ ಹಾಕಿ ಅದಕ್ಕೆ ಬೆಲ್ಲ ಹಾಕಿ ಕರಗಿಸಿಕೊಳ್ಳಿ ನಂತರ ಇದಕ್ಕೆ ಬಾದಾಮಿಯನ್ನು ಕತ್ತರಿಸಿ ಹಾಕಿ ಹಾಗೇ ಕಾಳುಮೆಣಸು, ಜೀರಿಗೆ ಪುಡಿ, ಏಲಕ್ಕಿ, ಜಾಯಿ ಕಾಯಿ, ಜಾಯಿ ಪತ್ರೆಯನ್ನು ಜಜ್ಜಿ ಹಾಕಿ ತುಸು ಫ್ರೈ ಮಾಡಿ ಇದನ್ನು ಮೆಂತ್ಯದ ಮಿಶ್ರಣಕ್ಕೆ ಹಾಕಿ ಉಂಡೆ ಕಟ್ಟಿ.

For Latest News Updates, Join Our Whatsapp Community🚩
RELATED ARTICLES

Most Popular