HomeBeautyಕೂದಲಿನ ಆರೋಗ್ಯ ಕಾಪಾಡಲು ʼಭೃಂಗರಾಜ್ʼ ಸಹಕಾರಿ ಹೇಗೆ ಗೊತ್ತಾ....?

ಕೂದಲಿನ ಆರೋಗ್ಯ ಕಾಪಾಡಲು ʼಭೃಂಗರಾಜ್ʼ ಸಹಕಾರಿ ಹೇಗೆ ಗೊತ್ತಾ….?

ಭೃಂಗರಾಜ್ ಕೂದಲಿಗೆ ತುಂಬಾ ಒಳ್ಳೆಯದು. ಹಾಗಾಗಿ ಆಯುರ್ವೇದದಲ್ಲಿ ಭೃಂಗರಾಜ್ ಗೆ ಕೇಶರಾಜ್ ಎಂದು ಕರೆಯುತ್ತಾರೆ. ಇದರಿಂದ ಕೂದಲಿನ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. ಇದನ್ನು ಹೇರ್ ಆಯಿಲ್ ಗೆ ಬಳಸುವುದು ಅಥವಾ ಹೇರ್ ಪ್ಯಾಕ್ ರೀತಿ ಕೂಡ ಉಪಯೋಗಿಸಿ ಕೂದಲಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

* ಭೃಂಗರಾಜ್ ನೆತ್ತಿಯನ್ನು ಆಳವಾಗಿ ತಂಪಾಗಿಸುತ್ತದೆ. ಇದರಿಂದ ಕೂದಲುದುರುವ ಸಮಸ್ಯೆ ನಿವಾರಣೆಯಾಗುತ್ತದೆ.

*ಅಕಾಲಿಕ ಕೂದಲು ಬಿಳಿಯಾಗುವ ಸಮಸ್ಯೆ ಈಗ ಹೆಚ್ಚಾಗಿ ಕಂಡುಬರುತ್ತದೆ. ಹಾಗಾಗಿ ಭೃಂಗರಾಜ್ ಬಳಸುವುದರಿಂದ ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಗಾಳಿಯ ತೇವಾಂಶದಿಂದ ಮತ್ತು ನೈರ್ಮಲ್ಯದ ಕೊರತೆಯಿಂದ ನೆತ್ತಿಯಲ್ಲಿ ತುರಿಕೆ ಕಂಡುಬರುತ್ತದೆ. ಇದರಿಂದ ತಲೆಹೊಟ್ಟು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಭೃಂಗರಾಜ್ ತುರಿಕೆ, ತಲೆಹೊಟ್ಟನ್ನು ನಿವಾರಿಸುತ್ತದೆ.

* ಭೃಂಗರಾಜ್ ರಕ್ತಪರಿಚಲನೆಗೆ ಸಹಕಾರಿಯಾಗಿದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಬೊಕ್ಕ ತಲೆ ಸಮಸ್ಯೆಯನ್ನು ನಿವಾರಿಸುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular