HomeCrime'ಪಾರಿವಾಳ' ಬಳಸಿ 50ಕ್ಕೂ ಅಧಿಕ ಮನೆಗಳಲ್ಲಿ ಕಳ್ಳತನ; ದಂಗಾಗಿಸುವಂತಿದೆ ಈತನ ಕಾರ್ಯವಿಧಾನ...!

‘ಪಾರಿವಾಳ’ ಬಳಸಿ 50ಕ್ಕೂ ಅಧಿಕ ಮನೆಗಳಲ್ಲಿ ಕಳ್ಳತನ; ದಂಗಾಗಿಸುವಂತಿದೆ ಈತನ ಕಾರ್ಯವಿಧಾನ…!

ಪಾರಿವಾಳಗಳನ್ನು ಬಳಸಿ 50ಕ್ಕೂ ಅಧಿಕ ಮನೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಯೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಈತ ಕಳ್ಳತನ ಮಾಡಲು ಪಾರಿವಾಳಗಳನ್ನು ಬಳಸಿಕೊಂಡಿರುವ ವಿಧಾನ ದಂಗಾಗಿಸುವಂತಿದೆ.

ಹೊಸೂರಿನ 38 ವರ್ಷದ ‘ಪಾರಿವಾಳ ಮಂಜ’ಬಂಧಿತ ಆರೋಪಿಯಾಗಿದ್ದು, ಮೂಲತಃ ಬೆಂಗಳೂರಿನ ನಗರ್ತಪೇಟೆಯ ನಿವಾಸಿಯಾದ ಈತ ಹೊಸೂರಿನಲ್ಲಿ ವಾಸವಾಗಿದ್ದ. ಕಳ್ಳತನ ಮಾಡಲು ಸೆಕ್ಯೂರಿಟಿಗಳಿಲ್ಲದ ಬಹು ಮಹಡಿ ಕಟ್ಟಡಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಈತ ಆ ಕಟ್ಟಡಗಳ ಬಳಿ ಪಾರಿವಾಳಗಳನ್ನು ಹಾರಿಬಿಡುತ್ತಿದ್ದ.

ಬಳಿಕ ತಾನು ಸಾಕಿದ್ದ ಪಾರಿವಾಳಗಳನ್ನು ಹಿಡಿದುಕೊಳ್ಳುವವನಂತೆ ನಟಿಸಿ ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ಬಳಿಕ ಅವುಗಳ ಮುಂಭಾಗದ ಬಾಗಿಲ ಬೀಗ ಮುರಿದು ಒಳ ನುಗ್ಗಿ ಚಿನ್ನ, ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ. ತಾನು ಕದ್ದ ವಸ್ತುಗಳನ್ನು ಹೊಸೂರಿನಲ್ಲಿ ಮಾರಾಟ ಮಾರುತ್ತಿದ್ದ ಪಾರಿವಾಳ ಮಂಜ ಐಶಾರಾಮಿ ಜೀವನ ನಡೆಸುತ್ತಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೀಗ ಪೊಲೀಸರು ಆತನನ್ನು ಬಂಧಿಸಿದ್ದು ಸಿಟಿ ಮಾರ್ಕೆಟ್ ಹಾಗೂ ಹಲಸೂರು ಗೇಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ನಾಲ್ಕು ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿಂದೆಯೂ ಹಲವು ಬಾರಿ ಬಂಧಿತನಾಗಿದ್ದ ಮಂಜ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಮತ್ತದೇ ಕೃತ್ಯ ಎಸಗುತ್ತಿದ್ದ. ಪೊಲೀಸರು ಈಗ ಆತನ ಇತರೆ ಕಳವು ಕೃತ್ಯಗಳ ಕುರಿತು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular