ಬೆಂಗಳೂರು: ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿದೆ. ಬೆಂಗಳೂರಿನ ತಾವರೆಕೆರೆ ಠಾಣಾ ವ್ಯಾಪ್ತಿಯ ಮೋಟಗಾನಹಳ್ಳಿಯ ಮನೆಯಲ್ಲಿ ಘಟನೆ ನಡೆದಿದೆ.
ಜೀವಿತಾ(35) ಮೃತಪಟ್ಟವರು ಎಂದು ಹೇಳಲಾಗಿದೆ. 6 ವರ್ಷದ ಹಿಂದೆ ವಿನಯಕುಮಾರ್ ಜೊತೆ ಜೀವಿತಾ ಮದುವೆಯಾಗಿತ್ತು. ಜೀವಿತಾರನ್ನು ವಿನಯಕುಮಾರ್ ಎರಡನೇ ಮದುವೆಯಾಗಿದ್ದ. ಆತನೇ ಕಿರುಕುಳ ನೀಡಿ ಜೀವಿತಾ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಪತಿ ವಿನಯಕುಮಾರ್ ವಿರುದ್ಧ ಜೀವಿತಾ ಕುಟುಂಬದವರು ಆರೋಪ ಮಾಡಿದ್ದಾರೆ. ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

