HomeKarnatakaಕೋಲಾರದಲ್ಲಿ ಭೀಕರ ಬೈಕ್ ಅಪಘಾತ : ಸ್ಥಳದಲ್ಲೇ ಇಬ್ಬರು ಯುವಕರು ದುರ್ಮರಣ

ಕೋಲಾರದಲ್ಲಿ ಭೀಕರ ಬೈಕ್ ಅಪಘಾತ : ಸ್ಥಳದಲ್ಲೇ ಇಬ್ಬರು ಯುವಕರು ದುರ್ಮರಣ

ಕೋಲಾರ :  ಭೀಕರ ಬೈಕ್ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಯುವಕರು ದುರ್ಮರಣಕ್ಕೀಡಾದ ಘಟನೆ ಕೋಲಾದಲ್ಲಿ ನಡೆದಿದೆ.

ಕೋಲಾರ ತಾಲೂಕಿನ ರಾಮಸಂದ್ರ ಗಡಿಯಲ್ಲಿ ಗುರುವಾರ ಈ ಘಟನೆ ನಡೆದಿದೆ. ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರು ಬೆಂಗಳೂರಿಗೆ ಹೋಗಿ ವಾಪಸ್ ಆಗುವ ವೇಳೆ ಈ ದುರ್ಘಟನೆ ಸಂಭವಿಸಿದೆ, ಮೃತರನ್ನು ವೇಮಗಲ್ ಮೂಲದ ಪುನೀತ್ (23) ಕೋಲಾರದ ಜಗನ್ (22) ಎಂದು ಗುರುತಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ವೇಮಗಲ್ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಯಾವ ವಾಹನ ಡಿಕ್ಕಿ ಹೊಡೆಯಿತು, ಘಟನೆ ಹೇಗೆ ನಡೆಯಿತು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular