HomeLive Newsಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಎರಡು ಹಡಗುಗಳ ಮೇಲೆ ದಾಳಿ ಪ್ರಕರಣ: ಇರಾನ್ ರಾಯಭಾರಿ ಬಳಿ ವಿವರಣೆ...

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಎರಡು ಹಡಗುಗಳ ಮೇಲೆ ದಾಳಿ ಪ್ರಕರಣ: ಇರಾನ್ ರಾಯಭಾರಿ ಬಳಿ ವಿವರಣೆ ಕೇಳಿದ ಭಾರತ

ನವದೆಹಲಿ: ಕದನವಿರಾಮ ಘೋಷಿಸಿದ್ದರೂ ಇರಾನ್ ದಾಳಿ ಮುಂದುವರೆದಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಎರಡು ಹಡಗುಗಳ ಮೇಲೆ ಇರಾನ್ ಮಿಲಿಟರಿ ದಾಳಿ ನಡೆಸಿದೆ. ಇರಾನ್ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭಾರತ ಇರಾನ್‌ನ ರಾಯಭಾರಿಯನ್ನು ಕರೆಸಿ ವಿವರಣೆ ಕೇಳಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳ ಮೇಲೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ದಾಳಿ ನಡೆಸಿದ್ದು, ಭಾರತದ ಎರಡು ಹಡಗುಗಳು ಗುಂಡಿನ ದಾಳಿಗೆ ಒಳಗಾಗಿದ್ದು, ಒಂದು ಹಡಗು ಭಾರತದ ಕರಾವಳಿ ಕಡೆಗೆ ತಪ್ಪಿಸಿಕೊಂಡಿದೆ.

ಈ ಘಟನೆಯಿಂದ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.ಇರಾನ್, ಇಸ್ರೇಲ್ ಮತ್ತು ಅಮೆರಿಕಾ ನಡುವೆ ಕದನ ವಿರಾಮ ಘೋಷಣೆಯಾಗಿದ್ದರೂ, ಹರ್ಮುಜ್ ಜಲಸಂಧಿಯಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿದೆ ಎಂದು ಘೋಷಿಸಿದ್ದರೂ, ಇಪ್ಪತ್ತನಾಲ್ಕು ಗಂಟೆಗಳೊಳಗಾಗಿ ಮತ್ತೆ ಬಂದ್ ಮಾಡಿದೆ. ಅಮೆರಿಕದ ಯುದ್ಧ ನೌಕೆಗಳು ಇನ್ನೂ ಹಾರ್ಮುಜ್ ಜಲಸಂಧಿಯಲ್ಲಿ ಇರುವುದರಿಂದ ಮತ್ತು ಇರಾನ್ ಬಂದರುಗಳಿಗೆ ಅಮೆರಿಕ ನಿರ್ಬಂಧ ಹೇರಿರುವ ಕಾರಣ ಹಡಗುಗಳ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ.

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಇರಾನಿನ ರಾಯಭಾರಿ ಮೊಹಮ್ಮದ್ ಫಥಾಲಿ ಅವರಿಗೆ ಆಯಕಟ್ಟಿನ ಜಲಮಾರ್ಗದಲ್ಲಿ ಎರಡು ಹಡಗುಗಳನ್ನು ಒಳಗೊಂಡ ಗುಂಡಿನ ದಾಳಿ ಘಟನೆಯ ಬಗ್ಗೆ ಭಾರತದ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.

ಸಭೆಯಲ್ಲಿ ವ್ಯಾಪಾರಿ ಹಡಗುಗಳ ಮೇಲೆ ಗುಂಡು ಹಾರಿಸಿದ ಈ ಗಂಭೀರ ಘಟನೆಯ ಬಗ್ಗೆ ತಮ್ಮ ಕಳವಳವನ್ನು ಪುನರುಚ್ಚರಿಸಿದ ವಿದೇಶಾಂಗ ಕಾರ್ಯದರ್ಶಿ, ಭಾರತದ ಅಭಿಪ್ರಾಯಗಳನ್ನು ಇರಾನ್‌ನ ಅಧಿಕಾರಿಗಳಿಗೆ ತಿಳಿಸುವಂತೆ ಮತ್ತು ಜಲಸಂಧಿಯ ಮೂಲಕ ಭಾರತಕ್ಕೆ ಹೋಗುವ ಹಡಗುಗಳಿಗೆ ಅನುಕೂಲ ಮಾಡಿಕೊಡುವ ಪ್ರಕ್ರಿಯೆಯನ್ನು ಆದಷ್ಟು ಬೇಗ ಪುನಾರಂಭಿಸುವಂತೆ ರಾಯಭಾರಿಯನ್ನು ಒತ್ತಾಯಿಸಿದರು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular