ಪುಣೆಯ ಹಡಪ್ಸರ್ನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೇ ಎಂಬ ಅನುಮಾನ ಮೂಡುತ್ತಿದೆ. ಕ್ರೆಡಿಟ್ ಕಾರ್ಡ್ ಬಾಕಿ ವಸೂಲಾತಿ ಹೆಸರಿನಲ್ಲಿ ಖಾಸಗಿ ಏಜೆಂಟ್ಗಳು ಗ್ರಾಹಕರ ಮೇಲೆ ಬೀದಿಬದಿಯಲ್ಲಿ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಪತಿಯನ್ನು ರಕ್ಷಿಸಲು ಹೆಂಡತಿ ಅಂಗಲಾಚುತ್ತಿದ್ದರೂ ಕರುಣೆ ತೋರದ ಈ ಗೂಂಡಾಗಳ ವರ್ತನೆ ಈಗ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.
ಪುಣೆಯ ಹಡಪ್ಸರ್ನ 15 ನಂಬರ್ ಚೌಕ್ನಲ್ಲಿ, ನಡುಹಗಲೇ ಕ್ರೆಡಿಟ್ ಕಾರ್ಡ್ ಬಾಕಿ ಇದೆ ಎಂಬ ಕಾರಣಕ್ಕೆ ಖಾಸಗಿ ವಸೂಲಾತಿ ಏಜೆಂಟ್ಗಳು (Recovery Agents) ಗ್ರಾಹಕರೊಬ್ಬರನ್ನು ನಡುರಸ್ತೆಯಲ್ಲಿ ಅಮಾನವೀಯವಾಗಿ ಥಳಿಸುತ್ತಿದ್ದಾರೆ. ತನ್ನ ಪತಿಯನ್ನು ಉಳಿಸಿಕೊಳ್ಳಲು ಆತನ ಪತ್ನಿ ಅಡ್ಡಬಂದು ರಕ್ಷಿಸಲು ಪ್ರಯತ್ನಿಸುತ್ತಿದ್ದರೂ, ಈ ಗೂಂಡಾಗಳು ಮಾತ್ರ ಹೊಡೆಯುವುದನ್ನು ನಿಲ್ಲಿಸುತ್ತಿಲ್ಲ.
ಬ್ಯಾಂಕುಗಳು ಮತ್ತು ಅವುಗಳ ವಸೂಲಾತಿ ಏಜೆನ್ಸಿಗಳು ಈಗ ಬಹಿರಂಗವಾಗಿ ಗೂಂಡಾಗಿರಿಯಲ್ಲಿ ತೊಡಗುತ್ತಿವೆ! ಆರ್ಬಿಐ (RBI) ನಿಯಮಗಳನ್ನು ಗಾಳಿಗೆ ತೂರಿ, ಸಂಜೆ 7 ಗಂಟೆಯ ನಂತರವೂ ಬಲವಂತ, ಬೆದರಿಕೆ ಮತ್ತು ಹಲ್ಲೆಯ ಮೂಲಕ ಸುಲಿಗೆ ಮಾಡುತ್ತಿವೆ.@PuneCityPolice ತಕ್ಷಣವೇ ಈ ಗೂಂಡಾಗಳ ವಿರುದ್ಧ ಎಫ್ಐಆರ್ ದಾಖಲಿಸಿ ಅವರನ್ನು ಬಂಧಿಸಬೇಕು. ಸಂಬಂಧಪಟ್ಟ ಬ್ಯಾಂಕ್ ಮತ್ತು ವಸೂಲಾತಿ ಏಜೆನ್ಸಿಗೆ ಆರ್ಬಿಐ ಭಾರಿ ದಂಡ ವಿಧಿಸಬೇಕು ಮತ್ತು ಅವುಗಳ ಪರವಾನಗಿಯನ್ನು ರದ್ದುಗೊಳಿಸಬೇಕು. ಈ ಮಾಫಿಯಾ ಗ್ಯಾಂಗ್ ವಿರುದ್ಧ ಗೃಹ ಸಚಿವಾಲಯ ಮತ್ತು ಹಣಕಾಸು ಸಚಿವಾಲಯ ಕಠಿಣ ಕ್ರಮ ಕೈಗೊಳ್ಳಬೇಕು. ಸಾಮಾನ್ಯ ಮನುಷ್ಯನ ರಕ್ತ ಹೀರುವ ಈ ಸಂಸ್ಕೃತಿ ನಿಲ್ಲಲೇಬೇಕು! ಇಂದು ನಾವು ಸುಮ್ಮನಿದ್ದರೆ, ನಾಳೆ ಯಾವುದೇ ಬ್ಯಾಂಕ್ ನಿಮ್ಮ ಮನೆಗೆ ನುಗ್ಗಿ ನಿಮ್ಮ ಮೇಲೆ ಹಲ್ಲೆ ಮಾಡಲು ತನ್ನ ಗೂಂಡಾಗಳನ್ನು ಕಳುಹಿಸಬಹುದು ಎಂದು ನೆಟ್ಟಿಗರೊಬ್ಬರು ವಿಡಿಯೋ ಸಮೇತ ಆಕ್ರೋಶ ಹೊರ ಹಾಕಿದ್ದಾರೆ.

