ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಬಂಡಿಗುಡ್ಡ ಅರಣ್ಯ ಪ್ರದೇಶದಲ್ಲಿ ಗುರುವಾರ ಅರಣ್ಯ ಇಲಾಖೆಯ ಮೂವರು ದಿನಗೂಲಿ ನೌಕರರ ಮೇಲೆ ಹೆಜ್ಜೇನು ದಾಳಿ ನಡೆದಿದೆ. ಮೂವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಮತ್ತಿಬ್ಬರು ಅಪಾಯದಿಂದ ಪಾರಾಗಿದ್ದಾರೆ.
ಅರಣ್ಯ ಇಲಾಖೆಯ ದಿನಗೂಲಿ ಕೆಲಸಗಾರರಾದ ಉದಯನಗರದ ಕುಮಾರಪ್ಪ(57), ಬಾಪೂಜಿನಗರದ ಬಾಬು(34), ಬಂಡಿಗುಡ್ಡದ ಪ್ರದೀಪ್(28) ಗುರುವಾರ ಬೆಳಿಗ್ಗೆ ಬಂಡಿಗುಡ್ಡ ಅರಣ್ಯ ವಲಯದಲ್ಲಿ ಕೆಲಸಕ್ಕೆ ಹೋಗಿ ಮಧ್ಯಾಹ್ನ ವಾಪಸ್ ಬರುವಾಗ ಏಕಾಏಕಿ ಹೆಜ್ಜೇನು ದಾಳಿ ಮಾಡಿವೆ.
ಹೆಜ್ಜೇನು ಹುಳಗಳು ಹೆಚ್ಚಾಗಿ ಕಚ್ಚಿದ್ದರಿಂದ ಕುಮಾರಪ್ಪ ಸ್ಥಿತಿ ಗಂಭೀರವಾಗಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತಿಬ್ಬರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

