HomeLatest NewsHome Insurance : 'ಗೃಹ ವಿಮೆ' ಮಾಡಿಸುವುದು ಉತ್ತಮವೇ ? ಇದರಿಂದ ನಿಮಗೆ ಸಿಗುವ ಲಾಭಗಳೇನು...

Home Insurance : ‘ಗೃಹ ವಿಮೆ’ ಮಾಡಿಸುವುದು ಉತ್ತಮವೇ ? ಇದರಿಂದ ನಿಮಗೆ ಸಿಗುವ ಲಾಭಗಳೇನು ತಿಳಿಯಿರಿ

ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಸ್ವಂತ ಮನೆ ಹೊಂದುವ ಕನಸಿಗಾಗಿ ಅನೇಕರು ಗೃಹ ಸಾಲ (Home Loan) ಪಡೆಯುತ್ತಿದ್ದಾರೆ. ಬ್ಯಾಂಕುಗಳು ಸಹ ಕರೆ ಮಾಡಿ ಹೋಮ್ ಲೋನ್ ಆಫರ್ ಮಾಡುತ್ತಿವೆ. ಆದರೆ, ಗೃಹ ಸಾಲ ಪಡೆಯುವಾಗ ‘ಗೃಹ ವಿಮೆ’ ಪಡೆಯುವುದು ಉತ್ತಮವೇ? ಅದರ ಲಾಭಗಳೇನು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರತಿಯೊಬ್ಬರ ಜೀವನದ ಅತಿದೊಡ್ಡ ಕನಸೆಂದರೆ ಅದು ‘ಸ್ವಂತ ಮನೆ’. ಇಂದಿನ ದುಬಾರಿ ಕಾಲದಲ್ಲಿ ಕಷ್ಟಪಟ್ಟು ಉಳಿಸಿದ ಹಣದ ಜೊತೆಗೆ ಬ್ಯಾಂಕುಗಳಿಂದ ಗೃಹ ಸಾಲ (Home Loan) ಪಡೆದು ಅನೇಕರು ಸುಂದರ ಗೂಡು ನಿರ್ಮಿಸಿಕೊಳ್ಳುತ್ತಿದ್ದಾರೆ. ಆದರೆ, ಸಾಲ ಪಡೆದು ಮನೆ ಕಟ್ಟುವ ಉತ್ಸಾಹದಲ್ಲಿ ನಾವು ಹೆಚ್ಚಾಗಿ ಮರೆಯುವುದು ‘ಗೃಹ ವಿಮೆ’ಯನ್ನು.

ಬ್ಯಾಂಕುಗಳು ಹೋಮ್ ಲೋನ್ ಆಫರ್ ಮಾಡುವಾಗ ಗೃಹ ವಿಮೆ ಮಾಡಿಸಿಕೊಳ್ಳುವಂತೆ ಸಲಹೆ ನೀಡುತ್ತವೆ. ಅಸಲಿಗೆ ಈ ವಿಮೆ ಕೇವಲ ಬ್ಯಾಂಕಿನ ನಿಯಮವಷ್ಟೇ ಅಲ್ಲ, ಅನಿರೀಕ್ಷಿತ ಸಂಕಷ್ಟಗಳ ಸಮಯದಲ್ಲಿ ನಿಮ್ಮ ಕುಟುಂಬವನ್ನು ಬೀದಿಗೆ ಬರದಂತೆ ರಕ್ಷಿಸುವ ಸುರಕ್ಷಾ ಕವಚವಾಗಿದೆ. ಸಾಲ ಪಡೆದ ವ್ಯಕ್ತಿಗೆ ಏನಾದರೂ ಅನಾಹುತ ಸಂಭವಿಸಿದರೆ ಅಥವಾ ನೈಸರ್ಗಿಕ ವಿಕೋಪಗಳಿಂದ ಮನೆಗೆ ಹಾನಿಯಾದರೆ ಈ ವಿಮೆ ಹೇಗೆ ನೆರವಾಗುತ್ತದೆ? ಪ್ರೀಮಿಯಂ ಪಾವತಿ ಹೇಗೆ? ನಿಮ್ಮ ಹೆಸರಲ್ಲಿ ಈಗಾಗಲೇ ಜೀವ ವಿಮೆ ಇದ್ದರೆ ಗೃಹ ವಿಮೆ ಅಗತ್ಯವೇ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೋಮ್ ಇನ್ಶೂರೆನ್ಸ್ ಹೇಗೆ ಕೆಲಸ ಮಾಡುತ್ತದೆ?

ಗೃಹ ವಿಮೆಯು ಅತ್ಯಂತ ಉಪಯುಕ್ತವಾದದ್ದು. ಸಾಲ ಪಡೆದ ವ್ಯಕ್ತಿಗೆ ಅನಿರೀಕ್ಷಿತವಾಗಿ ಏನಾದರೂ ತೊಂದರೆಯಾದರೆ, ಆ ಸಾಲದ ಹೊರೆ ಕುಟುಂಬದ ಮೇಲೆ ಬೀಳದಂತೆ ಇದು ರಕ್ಷಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಬಾಕಿ ಇರುವ ಸಾಲದ ಮೊತ್ತವನ್ನು ವಿಮಾ ಕಂಪನಿಯೇ ಬ್ಯಾಂಕುಗಳಿಗೆ ಪಾವತಿಸುತ್ತದೆ. ಇದರಿಂದಾಗಿ ಕುಟುಂಬಸ್ಥರಿಗೆ ಇಎಂಐ (EMI) ಪಾವತಿಸುವ ಚಿಂತೆ ಇರುವುದಿಲ್ಲ. ಒಂದು ವೇಳೆ ಸಾಲ ಪಡೆದ ವ್ಯಕ್ತಿ ಮರಣ ಹೊಂದಿದರೆ, ವಿಮಾ ಕಂಪನಿಯು ಉಳಿದ ಹಣವನ್ನು ಚುಕ್ತಾ ಮಾಡುತ್ತದೆ. ಇದರ ಜೊತೆಗೆ ಅಗ್ನಿ ಅವಘಡ, ಭೂಕಂಪದಂತಹ ನೈಸರ್ಗಿಕ ವಿಕೋಪಗಳಿಂದ ಮನೆಗೆ ಹಾನಿಯಾದರೆ ವಿಮೆಯ ರಕ್ಷಣೆ ಸಿಗುತ್ತದೆ.

ಯಾವಾಗ ಪಡೆಯಬೇಕು?

  • ಜೀವ ವಿಮೆ ಇಲ್ಲದಿದ್ದಾಗ: ಸಾಲ ಪಡೆದ ವ್ಯಕ್ತಿಯ ಹೆಸರಿನಲ್ಲಿ ಯಾವುದೇ ಜೀವ ವಿಮೆ (Life Insurance) ಇಲ್ಲದಿದ್ದರೆ, ಗೃಹ ವಿಮೆ ಮಾಡಿಸುವುದು ಕಡ್ಡಾಯ ಮತ್ತು ಅತಿ ಮುಖ್ಯ. ಒಂದು ವೇಳೆ ಈಗಾಗಲೇ ಸಾಕಷ್ಟು ಮೊತ್ತದ ಜೀವ ವಿಮೆ ಇದ್ದರೆ, ಆಗ ಗೃಹ ವಿಮೆ ಅಷ್ಟೊಂದು ಅನಿವಾರ್ಯವಲ್ಲ.
  • ಕುಟುಂಬದ ಆಧಾರಸ್ತಂಭ: ಕುಟುಂಬವನ್ನು ಪೋಷಿಸುವ ವ್ಯಕ್ತಿ ಒಬ್ಬರೇ ಆಗಿದ್ದರೆ, ಅಂತಹವರು ಖಂಡಿತವಾಗಿಯೂ ಗೃಹ ವಿಮೆಯನ್ನು ಪಡೆಯಬೇಕು.

ಪ್ರೀಮಿಯಂ ಪಾವತಿ ಹೇಗೆ?

ಗೃಹ ವಿಮೆಯ ಪ್ರೀಮಿಯಂ ಅನ್ನು ಸಾಮಾನ್ಯವಾಗಿ ಒಂದೇ ಬಾರಿ (Lump sum) ಪಾವತಿಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ವಾರ್ಷಿಕವಾಗಿಯೂ ಪಾವತಿಸಬಹುದು. ಇನ್ನು ಕೆಲವು ಬ್ಯಾಂಕುಗಳು ಈ ವಿಮಾ ಕಂತನ್ನು ನಿಮ್ಮ ಗೃಹ ಸಾಲದ ಮೊತ್ತಕ್ಕೇ ಸೇರಿಸಿ, ಪ್ರತಿ ತಿಂಗಳ ಇಎಂಐ ಜೊತೆಗೆ ಪಾವತಿಸುವಂತೆ ಸುಲಭ ವ್ಯವಸ್ಥೆಯನ್ನು ಮಾಡಿಕೊಡುತ್ತವೆ. ಕಷ್ಟಪಟ್ಟು ಕಟ್ಟಿದ ಮನೆ ಮತ್ತು ಕುಟುಂಬದ ಭವಿಷ್ಯದ ದೃಷ್ಟಿಯಿಂದ ಗೃಹ ವಿಮೆ ಒಂದು ಉತ್ತಮ ಸುರಕ್ಷಾ ಕವಚವಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular