ಧಾರವಾಡ: ಆಯುಧ ಪೂಜೆಯ ದಿನದಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹಿಂಗಾರು ಮಳೆ ಬಗ್ಗೆ ಭವಿಷ್ಯ ನುಡಿದ್ದು, ರೈತರು ನಿಟ್ಟಿಸಿರು ಬಿಡುವಂತಹ ಸುದ್ದಿ ಹೇಳಿದ್ದಾರೆ.
ಸದ್ಯಕ್ಕೆ ಹಿಂಗಾರು ಮಳೆ ಆಗುತ್ತೆ. ಜನರಿಗೆ ಸುಭೀಕ್ಷೆ ಆಗುತ್ತೆ. ನೆಮ್ಮದಿ ಸಿಗುತ್ತೆ. ಜಲಚರಗಳಿಗೆ ಒಳ್ಳೆಯದಾಗಲಿದೆ ಎಂದಿ ಕೋಡಿ ಶ್ರೀ ಭವಿಷ್ಯ ನುಡಿದಿದ್ದು, ಇದರಿಂದ ಬರಗಾಅಲದಿಂದ ತತ್ತರಿಸಿ ಕಂಗೆಟ್ಟಿದ್ದ ರೈತರಿಗೆ ಕೊಂಚ ನೆಮ್ಮದಿಯ ಆಶಾಭಾವನೆ ಮೂಡಿದಂತಾಗಿದೆ.
ಈ ಹಿಂದೆ ಮುಂಗಾರು ಮಳೆ ಬಗ್ಗೆ ಭವಿಷ್ಯ ನುಡಿದಿದ್ದ ಶ್ರೀಗಳು, ಈ ಬಾರಿ ಮುಂಗಾರು ಮಳೆ ಆಗುವುದಿಲ್ಲ. ಅನ್ನಕ್ಕೆ ಕೊರತೆ ಆಗುತ್ತೆ ಎಂದು ಹೇಳಿದ್ದರು. ಅದರಂತೆ ಮಂಗಾರು ಮಳೆ ಕೈಕೊಟ್ಟಿದ್ದು, ಎಲ್ಲೆಡೆ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಅಂದು ಕೋಡಿಶ್ರೀ ನುಡಿದಿದ್ದ ಭವಿಷ್ಯ ನಿಜವಾಗಿತ್ತು. ಈಗ ಹಿಂಗಾರಿನಲ್ಲಿ ಉತ್ತಮ ಮಳೆಯಾಗಲಿದೆ. ಜನರಿಗೆ ಸುಭಿಕ್ಷೆ ಮತ್ತು ನೆಮ್ಮದಿ ಸಿಗಲಿದೆ ಎಂದು ಶ್ರೀಗಳು ಹೇಳಿರುವುದು ಸಂತಸ ತಂದಿದೆ.
ಅಖಂಡ ಕರ್ನಾಟಕ ಒಂದಾಗಿ ಹೋಗಬೇಕು. ಇದು ಆಗಬೇಕಾದರೆ ಸಾಹಿತ್ಯಿಕ, ಸಾಂಸ್ಕೃತಿಕ ನೆಲೆಗಟ್ಟು, ಜನ ಜೀವನ, ಮಳೆ, ಬೆಳೆ ಚೆನ್ನಾಗಿ ಆಗಬೇಕು. ಆ ದೃಷ್ಟಿಯಿಂದ ಇಂದು ಧಾರವಾಡ ಜಂಬೂ ಸವಾರಿ ನಡೆಯುತ್ತಿದೆ. ಇದು ಅಖಂಡ ರಾಜ್ಯದ ಸಂಸ್ಕೃತಿಯ ಪ್ರತೀಕ. ಮೈಸೂರಿನಲ್ಲಿ ಒಂದು ಹಾಗೂ ಉತ್ತರ ಕರ್ನಾಟಕದಲ್ಲಿ ಈ ಜಂಬೂ ಸವಾರಿಗಳು ಏಕತಾ ಮನೋಭಾವದ ಸಂದೇಶ ನೀಡುತ್ತಿವೆ. ವರ್ಷದಿಂದ ವರ್ಷಕ್ಕೆ ಮನುಷ್ಯನ ಜೀವನ ಉಚ್ಛವಾಗಿದೆ. ಮನುಷ್ಯ ಮನುಷ್ಯನಾಗಿ ಬಾಳಬೇಕಾದರೆ ನಮ್ಮ ಹಿರಿಯರ ಆದರ್ಶ ಮುಖ್ಯವಾದದ್ದು. ಆ ಆದರ್ಶದ ಸಂಕೇತವೇ ಈ ದಸರಾ ಕಾರ್ಯಕ್ರಮ ಎಂದು ಹೇಳಿದರು.
ಇದೇ ವೇಳೆ ರಾಜ್ಯ ರಾಜಕಾರಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಅದರ ಬಗ್ಗೆ ನನಗಿಂತ ಮಾಧ್ಯಮದವರಿಗೆ ಚೆನ್ನಾಗಿ ಗೊತ್ತಿದೆ. ಎಲ್ಲರಿಗೂ ಒಳ್ಳೆಯದಾಗಲಿ. ದೈವ ಕೃಪೆ ಎಲ್ಲರಿಗೂ ಆಗಲಿ. ನಮಗೆ ಬೇಕಾಗಿದ್ದು ಮಳೆ ಬೆಳೆ. ರೋಗ ರುಜಿನಗಳು ದೂರಾಗಿ ಮನುಷ್ಯನಿಗೆ ನೆಮ್ಮದಿ ಬರಬೇಕು, ಶಾಂತಿ ಬರಬೇಕು ಎಂದು ನುಡಿದರು.
ಸ್ಥಳೀಯ ಸಂಸ್ಥೆ ಚುನಾವಣೆ ಸಿದ್ಧತೆ ನಡೆಸುವಂತೆ ಸಚಿವರಿಗೆ ಸಿಎಂ ಡಿ.ಕೆ.ಶಿವಕುಮಾರ್ ಸೂಚನೆ
ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಎಲ್ಲರೂ ಒಟ್ಟಾಗಿ ಸೇರಿ ಬಗೆಹರಿಸಬೇಕು. ಇದು ಯಾರದೋ ಒಬ್ಬರ ಜವಾಬ್ದಾರಿಯಲ್ಲ. ಇದು ಎಲ್ಲರ ಜವಾಬ್ದಾರಿ. ನಾನು ಒಬ್ಬರ ಮೇಲೆಯೆ ಹೊರೆ ಹಾಕಲು ಇಷ್ಟಪಡುವುದಿಲ್ಲ ಎಂದು ಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ರೈತರು ಕಬ್ಬು ಬೆಳೆದರೆ ಕಾರ್ಖಾನೆ ಇರಲಿದೆ. ಕಾರ್ಖಾನೆಗಳು ಸಹ ನಷ್ಟವಾಗದಂತೆ ಕಬ್ಬನ್ನು ಅರೆಯಬೇಕಿದೆ. ಆಗ ಇಬ್ಬರೂ ಉಳಿಯುತ್ತಾರೆ. ಇದು ಎಲ್ಲರ ಬದುಕಿನ ಪ್ರಶ್ನೆ. ರೈತರ, ಸಕ್ಕರೆ ಕಾರ್ಖಾನೆಗಳ, ಸರ್ಕಾರದ ಸಮಸ್ಯೆಗಳು ಏನಿವೆ ಎಂದು ನಾವು ಒಟ್ಟಾಗಿ ಚರ್ಚಿಸಬೇಕಿದೆ ಎಂದರು.
ಬರ ಪರಿಹಾರ ವಿಚಾರವಾಗಿ ಚರ್ಚಿಸಲು ಕೇಂದ್ರ ಸರ್ಕಾರದ ಬಳಿ ಸಮಯ ಕೇಳಿದ್ದೇನೆ. ಆದರೆ ಇನ್ನೂ ಸಮಯ ನಿಗದಿಯಾಗಿಲ್ಲ. ಜನಪ್ರತಿನಿಧಿಗಳಿಗೆ ಕಬ್ಬು ಬೆಳಗಾರರ ಸಮಸ್ಯೆಗಳ ಚರ್ಚೆಯ ವಿಚಾರ ತಿಳಿಸಿದ್ದೇನೆ. ಸಕ್ಕರೆ ಕಾರ್ಖಾನೆಗಳ ಮಾಲೀಕರು, ರೈತರ ಬಳಿಯು ಪ್ರತ್ಯೇಕವಾಗಿ ಮಾತಾಡಬೇಕಿದೆ. ಕೇಂದ್ರ ಮಂತ್ರಿಗಳ ಬಳಿಯೂ ಮಾತನಾಡುತ್ತೇನೆ. ಅವರೂ ಸಹ ತಮ್ಮ ಕೈಲಾದಷದ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಸಮಸ್ಯೆಯನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಬಗೆಹರಿಸಬೇಕಿದೆ ಎಂದು ಹೇಳಿದರು.
ಸಭೆ ನಡೆಸಲು ಎಲ್ಲರ ಅನುಕೂಲಗಳಿಗೆ ಹೊಂದಿಕೆಯಾಗುವ ದಿನಾಂಕವನ್ನು ನಿಗದಿ ಮಾಡಲಾಗುವುದು. ಬೆಳಗಾವಿಯಲ್ಲಿ ರೈತರಿಗೆ ಮಾತು ಕೊಟ್ಟು ಬಂದಿದ್ದೇನೆ. ಕೇಂದ್ರ ಸಚಿವರು, ಸಂಸದರು ಆ ಭಾಗದ ಮಂತ್ರಿಗಳಿಗೆ ಆಹ್ವಾನಿಸಲಾಗುವುದು ಎಂದು ಹೇಳಿದರು.
ಸ್ಥಳೀಯ ಸಂಸ್ಥೆ ಚುನಾವಣೆ ಸಿದ್ಧತೆಗೆ ಸಚಿವರಿಗೆ ಸೂಚನೆ
ಸಚಿವರೊಂದಿಗೆ ಸೋಮವಾರ ಸಭೆ ನಡೆಸಿದ ವಿಚಾರದ ಬಗ್ಗೆ ಕೇಳಿದಾಗ, “ಸ್ಥಳೀಯ ಸಂಸ್ಥೆ ಚುನಾವಣೆ ಇದೆ. ಚುನಾವಣಾ ಆಯೋಗದವರು 27 ರಂದು ಸಹ ಹೊಸ ಮತದಾರರ ಪಟ್ಟಿ ನೀಡುತ್ತಾರೆ. ಡಿ. 31ರೊಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಸುಪ್ರೀಂಕೋರ್ಟ್ನ ಸುಪ್ರೀಂ ಕೋರ್ಟ್ ನಿರ್ದೇಶನವಿದೆ. ಬೆಂಗಳೂರು ನಗರದಲ್ಲಿ ಸಿದ್ದತೆ ಮಾಡಿಕೊಳ್ಳಬೇಕಲ್ಲವೇ? ಚುನಾವಣಾ ಆಯೋಗ ಯಾವಾಗ ಬೇಕಾದರೂ ಚುನಾವಣೆ ಘೋಷಣೆ ಮಾಡಬಹುದು. ಹೀಗಾಗಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸಚಿವರಿಗೆ ಹೇಳಿದ್ದೇನೆ” ಎಂದರು.
ಪಂಚಾಯತ್ ಮಟ್ಟದಲ್ಲಿ ರಸ್ತೆ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹಣ ಕೊಡಬೇಕೆಂದು ಮಂಗಳೂರಿನಲ್ಲಿ ನಡೆದ ಕ್ಯಾಬಿನೆಟ್ ವೇಳೆ ತಿರ್ಮಾನವಾಗಿತ್ತು. ಹೀಗಾಗಿ ಶಾಸಕರಿಗೆ ಅನುದಾನಕ್ಕೆ ವರದಿ ಸಲ್ಲಿಸಲು ಹೇಳಿದ್ದೇನೆ ಹಾಗೂ ಕರೆ ಮಾಡಿ ಹಬ್ಬಕ್ಕೆ ಶುಭಕೋರಿದ್ದೇನೆ. ಅನುದಾನ ವಿಚಾರ ಬೆಂಗಳೂರು ಶಾಸಕರನ್ನ ಕರೆದು ಮಾತಾಡಿದ್ದೇನೆ ಎಂದರು.
ಇದೇ ವೇಳೆ ರಾಜ್ಯದ ಸಮಸ್ತ ಜನತೆಗೂ ಆಯುಧ ಪೂಜೆಯ ಶುಭಾಶಯಗಳು. ನಾಡಿನ ಜನರಿಗೆ ಒಳಿತಾಗಲಿ. ರೈತ, ಕಾರ್ಮಿಕ, ಶ್ರಮಿಕ ವರ್ಗಗಳ ಪರಿಕರಗಳಿಗೆ ಪೂಜೆ ಸಲ್ಲಿಸಲಾಗಿದೆ. ಸರ್ಕಾರಿ, ಖಾಸಗಿ ವಾಹನಗಳಿಗೆ ಪೂಜೆ ಸಲ್ಲಿಸಲಾಗಿದೆ. ಎಲ್ಲರ ಪ್ರಯಾಣ ಸುಖಕರವಾಗಿ, ಸುರಕ್ಷಿತವಾಗಿರಲಿ ಎಂದು ಚಾಮುಂಡಿಯ ಆಶೀರ್ವಾದ ಅನುಗ್ರಹ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

