HomeIndiaಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಹಿಂದೂ ಅಂಗಡಿ ಮಾಲೀಕ ; ಬಲಪಂಥೀಯರ ವಿರೋಧ !

ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಹಿಂದೂ ಅಂಗಡಿ ಮಾಲೀಕ ; ಬಲಪಂಥೀಯರ ವಿರೋಧ !

ಉತ್ತರ ಪ್ರದೇಶದ ಅಲಿಗಢದಲ್ಲಿ ಹಿಂದೂ ಅಂಗಡಿ ಮಾಲೀಕರೊಬ್ಬರು ಸ್ಥಳೀಯ ಮಸೀದಿಯಲ್ಲಿ ಮುಸ್ಲಿಂರೊಂದಿಗೆ ಪ್ರಾರ್ಥನೆ ಸಲ್ಲಿಸಿದ ಘಟನೆ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಬಲಪಂಥೀಯ ಸಂಘಟನೆಗಳು ವಿರೋಧಿಸಿವೆ.

ಮಾಮು ಭಾಂಜಾ ಪ್ರದೇಶದ ಅಂಗಡಿ ಮಾಲೀಕ ಸುನಿಲ್ ರಜನಿ ಗುರುವಾರ ಸಂಜೆ ಮುಸ್ಲಿಂ ನೆರೆಹೊರೆಯವರೊಂದಿಗೆ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಸ್ಥಳೀಯ ಮುಖಂಡ ಮೋನು ಅಗರ್ವಾಲ್, ರಜನಿಯವರ ಈ ಕೃತ್ಯವನ್ನು “ಧರ್ಮದ್ರೋಹ” ಎಂದು ಪರಿಗಣಿಸಿದ್ದಾರೆ. ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದಲ್ಲದೆ, ರಜನಿ ದೇವಾಲಯದಲ್ಲಿ “ಶುದ್ಧಿಕರಣ” (ಶುದ್ಧೀಕರಣ ಸಮಾರಂಭ) ಮಾಡಿಸಿಕೊಳ್ಳಬೇಕು ಎಂದು ಅಗರ್ವಾಲ್ ಒತ್ತಾಯಿಸಿದ್ದಾರೆ.

ಮಸೀದಿಯಿಂದ ಹೊರಬಂದ ನಂತರ ಕೆಲವು ಹಿಂದೂ ಬಲಪಂಥೀಯ ಸದಸ್ಯರು ರಜನಿಯವರನ್ನು ಪ್ರಶ್ನಿಸಿದಾಗ, ಅವರು “ಪ್ರಚೋದನೆ” ಯಿಂದ ಈ ರೀತಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ತಕ್ಷಣವೇ ಗಂಗಾಜಲವನ್ನು ಸಿಂಪಡಿಸುವ ಮೂಲಕ “ಸ್ವಯಂ ಶುದ್ಧೀಕರಣ” ಮಾಡಲು ಪ್ರಯತ್ನಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular