HomeCrimeಶಾರುಖ್ ಮತ್ತವರ ಪುತ್ರನನ್ನು ಹೀಯಾಳಿಸಿದ್ದ ಬಿಜೆಪಿ ಕಾರ್ಯಕರ್ತ ಡ್ರಗ್ಸ್ ಕೇಸ್ ನಲ್ಲಿ 'ಅಂದರ್'

ಶಾರುಖ್ ಮತ್ತವರ ಪುತ್ರನನ್ನು ಹೀಯಾಳಿಸಿದ್ದ ಬಿಜೆಪಿ ಕಾರ್ಯಕರ್ತ ಡ್ರಗ್ಸ್ ಕೇಸ್ ನಲ್ಲಿ ‘ಅಂದರ್’

ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್‌ ಅವರನ್ನು ಮಾದಕವಸ್ತು ಪ್ರಕರಣದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಹಿಂದೂ ಕಾರ್ಯಕರ್ತ ಮತ್ತು ಬಿಜೆಪಿ ಕಾರ್ಯಕರ್ತ ವಿಕಾಸ್ ಅಹಿರ್‌ ಬಂಧನವಾಗಿದೆ. ಡ್ರಗ್ಸ್‌ ಮಾರಾಟ ಪ್ರಕಟಣದಲ್ಲಿ ವಿಕಾಸ್‌ ಅಹಿರ್‌ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸೂರತ್ ನಗರ ಪೊಲೀಸರು, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬಿಜೆಪಿಯ ಮೋರ್ಚಾದೊಂದಿಗೆ ಸಂಪರ್ಕ ಹೊಂದಿದ್ದ ಹಿಂದೂ ಯುವ ವಾಹಿನಿ ಗುಜರಾತ್‌ನ ಮಾಜಿ ಅಧ್ಯಕ್ಷ ವಿಕಾಸ್ ಅಹಿರ್ ನಿಂದ 354 ಗ್ರಾಂ ಎಂಡಿ ಫಾರ್ಮಾಸ್ಯುಟಿಕಲ್ಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಐಸ್ ಕ್ರೀಮ್ ಅಂಗಡಿಯ ಮೂಲಕ ಕೊಕೇನ್ ಸಾಗಿಸುತ್ತಿದ್ದ ಆರೋಪದ ಮೇಲೆ ಸೂರತ್ ಪೊಲೀಸರು ವಿಕಾಸ್ ಅಹಿರ್ ನನ್ನು ಬಂಧಿಸಿದ್ದಾರೆ.

ಆರ್ಯನ್ ಖಾನ್ ಅವರನ್ನು 2021 ರಲ್ಲಿ ಕಾರ್ಡೆಲಿಯಾ ಕ್ರೂಸ್ ಪ್ರಕರಣ ವಿಕಾಸ್‌ ಅಹಿರ್‌ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಶಾರುಖ್ ಖಾನ್ ಅವರ ಪಠಾಣ್ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ವಿಕಾಸ್ ಕುಖ್ಯಾತಿ ಗಳಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular