HomeIndiaBIG NEWS: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು; ಓರ್ವ ದುರ್ಮರಣ, ಮಾಜಿ ಮೇಯರ್ ಪುತ್ರ...

BIG NEWS: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು; ಓರ್ವ ದುರ್ಮರಣ, ಮಾಜಿ ಮೇಯರ್ ಪುತ್ರ ನಾಪತ್ತೆ

ಚೆನ್ನೈನ ಮಾಜಿ ಮೇಯರ್ ಓರ್ವರ ಪುತ್ರ ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ನಿದಿಗೆ ಬಿದ್ದಿರುವ ಘಟನೆ ಹಿಮಾಚಲಪ್ರದೇಶದಲ್ಲಿ ನಡೆದಿದೆ.

ಚೆನ್ನೈ ಮಾಜಿ ಮೇಯರ್ ಸೈದೈ ದುರೈಸ್ವಾಮಿ ಪುತ್ರ ವೆಟ್ರಿ ದುರೈಸ್ವಾಮಿ ಹಾಗೂ ಗೋಪಿನಾಥ್ ಇತರರು ಪ್ರಯಾಣಿಸುತ್ತಿದ್ದ ಕಾರು ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ನದಿಗೆ ಬಿದ್ದಿದೆ. ಕಾರನ್ನು ಹಿಮಾಚಲ ಪ್ರದೇಶದ ಟಬೋ ನಿವಾಸಿ ತೆಂಜಿನ್ ಎಂಬಾತ ಚಲಾಯಿಸುತ್ತಿದ್ದರು. ಸ್ಪಿತಿ ಕಣಿವೆಯಿಂದ ವಾಪಾಸ್ ಆಗುತ್ತಿದ್ದಾಗ ಸೆಟ್ಲೇಜ್ ನದಿಗೆ ಕಾರು ಬಿದ್ದು ದುರಂತ ಸಂಭವಿಸಿದೆ.

ಅಧಿಕಾರಿಗಳು ಕಾರಿನಲ್ಲಿದ್ದ ಗೋಪಿನಾಥ್ ಎಂಬುವವರನ್ನು ರಕ್ಷಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಗೋಪಿನಾಥ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ತೆಂಜಿನ್ ಎಂಬುವವರು ಸಾವನ್ನಪ್ಪಿದ್ದಾರೆ. ಆದರೆ ವೆಟ್ರಿ ದುರೈಸ್ವಾಮಿ ಸುಳಿವು ಸಿಕ್ಕಿಲ್ಲ. ಅವರಿಗಾಗಿ ಹುಡುಕಾಟ ನಡೆಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಜಿ ಮೇಯರ್ ಪುತ್ರ ವೆಟ್ರಿ ದುರೈಸ್ವಾಮಿ ಚಿತ್ರನಿರ್ದೇಶಕ ಹಾಗೂ ಛಾಯಾಚಿತ್ರಗ್ರಾಹಕರು. ಕುಟುಂಬದೊಂದಿಗೆ ಹಿಮಾಚಲ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಕಾರು ಅಪಘಾತಕ್ಕೀಡಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular