HomeKarnatakaದಂತ ವೈದ್ಯಕೀಯ ಕೋರ್ಸ್‌ಗಳಿಗೆ ಫುಲ್ ಡಿಮಾಂಡ್, ಎಲ್ಲಾ ಸೀಟು ಭರ್ತಿ

ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಫುಲ್ ಡಿಮಾಂಡ್, ಎಲ್ಲಾ ಸೀಟು ಭರ್ತಿ

ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಕರ್ನಾಟಕದಲ್ಲಿ ಭಾರೀ ಬೇಡಿಕೆ ಬಂದಿದೆ. ಕಳೆದ ಎರಡು ವರ್ಷಗಳಿಂದ ಕೋರ್ಸ್‌ನ ಎಲ್ಲಾ ಸೀಟುಗಳು ಭರ್ತಿಯಾಗುತ್ತಿವೆ. ಹಿಂದಿನ ವರ್ಷಗಳಲ್ಲಿ ಈ ಕೋರ್ಸ್‌ನ ಸೀಟುಗಳು ಕಾಲೇಜುಗಳಲ್ಲಿ ಖಾಲಿ ಉಳಯುತ್ತಿದ್ದವು. ಆದರೆ ಈಗ ಯಾವುದೇ ಸೀಟುಗಳು ರಾಜ್ಯದಲ್ಲಿ ಖಾಲಿ ಇಲ್ಲ.

ಯುವ ಜನರು ಇಂಜಿನಿಯರಿಂಗ್ ಕಡೆ ಹೆಚ್ಚು ಆಕರ್ಷಿತರಾಗುತ್ತಿದ್ದ ಕಾರಣ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ ಸೀಟುಗಳುಗಳು ಖಾಲಿ ಉಳಿಯುತ್ತಿದ್ದವು. ಆದರೆ ಈಗ ರಾಜ್ಯದಲ್ಲಿ ಲಭ್ಯವಿರುವ 2709 ದಂತ ವೈದ್ಯಕೀಯ ಕೋರ್ಸ್‌ ಸೀಟುಗಳು ಭರ್ತಿಯಾಗಿವೆ. ಎರಡು ವರ್ಷದ ಅಂಕಿ ಅಂಶಗಳನ್ನು ನೋಡಿದರೆ ನಿಜಕ್ಕೂ ಅಚ್ಚರಿ ಎನಿಸುತ್ತಿದೆ.

ಕಳೆದ ಕೆಲವು ವರ್ಷಗಳಿಗೆ ಹೋಲಿಕೆ ಮಾಡಿದರೆ ಎರಡು ವರ್ಷದಿಂದ ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚಿದೆ. ರಾಜ್ಯದ ಯಾವುದೇ ಕಾಲೇಜುಗಳಲ್ಲಿ ಎರಡು ವರ್ಷದಿಂದ ದಂತ ವೈದ್ಯಕೀಯ ಕೋರ್ಸ್‌ನ ಯಾವುದೇ ಸೀಟುಗಳು ಖಾಲಿ ಉಳಿದಿಲ್ಲ. 2024 ಮತ್ತು 2025ರಲ್ಲಿ ಎಲ್ಲಾ ಸೀಟುಗಳು ಭರ್ತಿಯಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಷ್ಟು ಸೀಟುಗಳು ಖಾಲಿ ಇದ್ದವು?; ಈ ಹಿಂದಿನ ವರ್ಷಗಳ ಚಿತ್ರಣವನ್ನು ನೋಡಿದರೆ ಈಗ ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಬೇಡಿಕೆ ಹೇಗೆ ಹೆಚ್ಚಿದೆ? ಎಂಬುದನ್ನು ತಿಳಿಯಬಹುದು. 2022ರಲ್ಲಿ ರಾಜ್ಯದಲ್ಲಿ 2,810 ದಂತ ವೈದ್ಯಕೀಯ ಸೀಟುಗಳು ಇದ್ದವು. ಇವುಗಳಲ್ಲಿ 1,398 ಸೀಟುಗಳು ಖಾಲಿ ಉಳಿದಿದ್ದವು.

2023ರಲ್ಲಿ 2,709 ಸೀಟುಗಳ ಪೈಕಿ 199 ಸೀಟುಗಳು ಖಾಲಿ ಇದ್ದವು. ಆದರೆ 2024ರಲ್ಲಿ ರಾಜ್ಯದ 2650 ಸೀಟುಗಳ ಪೈಕಿ ಎಲ್ಲವೂ ಭರ್ತಿಯಾಗಿವೆ. ಅಲ್ಲದೇ 2025ರಲ್ಲಿಯೂ 2709 ಸೀಟುಗಳು ಭರ್ತಿಯಾಗಿವೆ. ಆ ಮೂಲಕ ರಾಜ್ಯದ ಯಾವುದೇ ಕಾಲೇಜುಗಳಲ್ಲಿ ದಂತ ವೈದ್ಯಕೀಯ ಕೋರ್ಸ್‌ ಸೀಟುಗಳು ಖಾಲಿ ಇಲ್ಲ.

ಕಾಲೇಜುಗಳ ಮಾಹಿತಿ ಪ್ರಕಾರ ಎರಡು ವರ್ಷಗಳ ಹಿಂದೆ ಕಂಪ್ಯೂಟರ್ ಸೈನ್ಸ್, ಕಂಪ್ಯೂಟರ್ ಸಂಬಂಧಿತ ಕೋರ್ಸ್‌ಗಳಿಗೆ ಭಾರೀ ಬೇಡಿಕೆ ಇತ್ತು. ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಹೆಚ್ಚಿನ ವಿದ್ಯಾರ್ಥಿಗಳು ಬರುತ್ತಿರಲಿಲ್ಲ. ಆದರೆ ಈಗ ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಭಾರೀ ಬೇಡಿಕೆ ಬಂದಿದೆ.

ಮೊದಲ, ಎರಡನೇ ಸುತ್ತಿನ ಸೀಟು ಹಂಚಿಕೆ ಬಳಿಕವೂ ಕಾಲೇಜುಗಳಲ್ಲಿ ದಂತ ವೈದ್ಯಕೀಯ ಕೋರ್ಸ್‌ ಸೀಟುಗಳು ಖಾಲಿ ಉಳಿತಿದ್ದವು. ಆದರೆ ಈಗ ಬೇಡಿಕೆ ಹೆಚ್ಚಾಗಿದೆ. ವಿದ್ಯಾರ್ಥಿಗಳು ಕೋರ್ಸ್‌ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದು, ಸೀಟುಗಳು ಭರ್ತಿಯಾಗುತ್ತಿವೆ ಎಂದು ಪ್ರಾಧ್ಯಾಪಕರು ಹೇಳಿದ್ದಾರೆ.

ಕರ್ನಾಟಕದಲ್ಲಿ ದಂತ ವೈದ್ಯಕೀಯ ಕೋರ್ಸ್‌ಗಳ ಸೀಟುಗಳು ಖಾಲಿ ಇರುವ ಕಾರಣ ಬೇರೆ ರಾಜ್ಯದ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸತೊಡಗಿದರು. ಆದರೆ ಈಗ ರಾಜ್ಯದ ವಿದ್ಯಾರ್ಥಿಗಳಿಂದಲೇ ಸೀಟುಗಳು ಭರ್ತಿಯಾಗುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಡಿಮಾಂಡ್ ಇದೆ. ಆದರೆ ಫಾರ್ಮಸಿ, ಆಯುಷ್ ಮತ್ತು ನರ್ಸಿಂಗ್ ಕೋರ್ಸ್‌ಗಳಿಗೆ ಬೇಡಿಕೆ ಕಡಿಮೆ ಇದೆ. ಫಾರ್ಮಸಿಯಲ್ಲಿ 791, ಫಾರ್ಮಾಸೈನ್ಸ್‌ನಲ್ಲಿ 36, ಯೋಗ ಮತ್ತು ನ್ಯಾಚುರೋಪತಿಯಲ್ಲಿ 174 ಮತ್ತು ಆಯುಷ್ ಕೋರ್ಸ್‌ಗಳಲ್ಲಿ ಈ ವರ್ಷ ರಾಜ್ಯದಲ್ಲಿ 995 ಸೀಟುಗಳು ಖಾಲಿ ಇದೆ.

ಅಲ್ಲದೇ ಈ ವರ್ಷ ರಾಜ್ಯದಲ್ಲಿ ಲಭ್ಯವಿದ್ದ ನರ್ಸಿಂಗ್ ಸೀಟುಗಳು 34,050 ಮತ್ತು ಭರ್ತಿಯಾದ ಸೀಟು ಕೇವಲ 12,386 ಆಗಿದೆ. ಕೆಇಎ ಮೂಲಕ 2023ರಿಂದ ನರ್ಸಿಂಗ್ ಸೀಟುಗಳನ್ನು ಭರ್ತಿ ಮಾಡಲಾಗುತ್ತಿದೆ. ಸರ್ಕಾರಿ ಸೀಟಿಗೆ 10,000 ಮತ್ತು ಖಾಸಗಿ ಸೀಟಿಗೆ 1 ಲಕ್ಷ ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular