HomeLatest Newsಪ್ರೀತಿಸಿ ಮದುವೆಯಾಗಿದ್ದ ಹೆಂಡತಿಗೆ ಮೋಸ: ಮತ್ತೋರ್ವಳೊಂದಿಗೆ ವಿವಾಹ: ಪ್ರಿಯಕರನ ಕರ್ಮಕಾಂಡ ಗೊತ್ತಾಗುತ್ತಿದ್ದಂತೆ ಪೊಲೀಸರ ಎದುರೇ ತಾಳಿ...

ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಗೆ ಮೋಸ: ಮತ್ತೋರ್ವಳೊಂದಿಗೆ ವಿವಾಹ: ಪ್ರಿಯಕರನ ಕರ್ಮಕಾಂಡ ಗೊತ್ತಾಗುತ್ತಿದ್ದಂತೆ ಪೊಲೀಸರ ಎದುರೇ ತಾಳಿ ಕಿತ್ತೆಸೆದು ತೆರಳಿದ ಯುವತಿ

ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾಗಿದ್ದವಳಿಗೆ ಕೈಕೊಟ್ಟು ಹಲವು ಯುವತಿಯರಿಗೆ ಮೋಸ ಮಾಡಿ, ಪೋಕ್ಸೋ ಪ್ರಕರಣದಲ್ಲಿಯೂ ಭಾಗಿಯಾಗಿದ್ದ ಯುವಕ ಯುವತಿಯೊಬ್ಬಳ ಹಿಂದೆ ಬಿದ್ದು, ಆಕೆಯನ್ನು ಮದುವೆಯಾಗುತ್ತಿದ್ದಂತೆ ದೊಡ್ಡ ಶಾಕ್ ಎದುರಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಗಂಗನಮಿದ್ದೆ ಬಡಾವಣೆಯ ನಿವಾಸಿ ಪೇಂಟಿಂಗ್ ಕೆಲಸಗಾರ ಸಂದೀಪ್ ಎಂಬಾತ ಶ್ರೀಮಂತರ ಮನೆಯ 18 ವರ್ಷದ ಯುವತಿಗೆ ಗಾಳ ಹಾಕಿ, ಆಕೆಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಎರಡು ದಿನಗಳ ಹಿಂದೆ ಆಕೆಯೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಾನೆ. ಚಿಂತಾಮಣಿಯ ದೇವಸ್ಥಾನವೊಂದರಲ್ಲಿ ಯುವತಿಗೆ ತಾಳಿ ಕಟ್ಟಿ ಬಳಿಕ ಜೋಡಿ ಕಾರಿನಲ್ಲಿ ತೆರಳುತ್ತಿದ್ದರು.

ಹೀಗೆ ಕಾರಿನಲ್ಲಿ ತೆರಳುತ್ತಿದ್ದ ಜೋಡಿಯನ್ನು ಯುವತಿಯ ಪೋಷಕರು ಶಿಡ್ಲಘಟ್ಟ ನಗರದಲ್ಲಿ ಕಾರು ಸಮೇತ ಅಡ್ಡಗಟ್ಟಿದ್ದಾರೆ. ಅಲ್ಲಿಂದ ಮಹಿಳಾ ಠಾಣೆಗೆ ಮಗಳು ಹಾಗೂ ಆಕೆಯ ಪ್ರಿಯಕರನನ್ನು ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಜೋಡಿ ತಾವು ಮದುವೆಯಾಗಿದ್ದು, ತಮ್ಮನ್ನು ಬಾಳಲು ಬಿಡಿ ಎಂದು ಪೊಲೀಸರ ಮುಂದೆ ಕೇಳಿಕೊಂಡಿದೆ. ಈ ವೇಳೆ ಪೋಷಕರು ಹಾಗೂ ಯುವತಿಯ ಮುಂದೆಯೇ ಪೊಲೀಸರು ಸಂದೀಪನ ಸಾಲು ಸಾಲು ಪ್ರೇಮ ಪ್ರಕರಣ, ಮೋಸದಾಟವನ್ನು ಬಿಚ್ಚಿಟ್ಟಿದ್ದಾರೆ. ಯುವತಿಯರನ್ನು ನಂಬಿಸಿ ಮೋಸ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಲ್ಲದೇ ಆತನ ವಿರುದ್ಧ ಪೋಕ್ಸೋ ಕೇಸ್ ಕೂಡ ದಾಖಲಾಗಿರುವುದಾಗಿ ವಿವರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2024ರಲ್ಲಿ ಸಂದೀಪ್ ಚಿಕ್ಕಬಳ್ಳಾಪುರದಲ್ಲಿ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಆಕೆಯನ್ನು ಮದುವೆಯಾಗಿದ್ದ. ಬಳಿಕ ಪ್ರಶಾಂತ್ ನಗರದಲ್ಲಿ ಮಹಿಳೆಯೋರ್ವಳಿಗೆ ವಂಚಿಸಿದ್ದ. ಬೆಂಗಳೂರಿನ ರಾಮಮೂರ್ತಿ ನಗರ ಠಾಣೆಯಲ್ಲಿಯೂ ಸಂದೀಪ್ ವಿರುದ್ಧ ಪೊಕ್ಸೋ ಕೇಸ್ ಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ ಇದೇ ವೇಳೆ ಸಂದೀಪ್ ನಿಂದ ಮೋಸ ಹೋದ ಯುವತಿಯೊಬ್ಬಳು ಠಾಣೆಗೆ ಬಂದು ಸಂದೀಪ್ ಮಾಡಿರುವ ಮೋಸದ ಬಗ್ಗೆ ಬಿಚ್ಚಿಟ್ಟಿದ್ದಾಳೆ. ಪ್ರಿಯಕರನ ಕರ್ಮಕಾಂಡ ಬಯಲಾಗುತ್ತಿದ್ದಂತೆ ಬುದ್ಧಿ ಕಲಿತ ಯುವತಿ ಕಟ್ಟಿದ ತಾಳಿಯನ್ನು ಕಿತ್ತೆಸೆದು ಪೋಷಕರೊಂದಿಗೆ ತೆರಳಿದ್ದಾಳೆ. ಮಾಡಬಾರದ ಕೆಲಸ ಮಾಡಿ, ಮೋಸದ ಮೇಲೆ ಮೋಸ ಮಾಡುತ್ತಿದ್ದ ಸಂದೀಪನನ್ನು ಪೊಲೀಸರು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular