HomeKarnatakaಗೃಹಿಣಿ ಮಾಸಿಕ ಕಾಲ್ಪನಿಕ ಆದಾಯ 30 ಸಾವಿರ ರೂ. ಆಧರಿಸಿ 59.69 ಲಕ್ಷ ಪರಿಹಾರ ನೀಡಲು...

ಗೃಹಿಣಿ ಮಾಸಿಕ ಕಾಲ್ಪನಿಕ ಆದಾಯ 30 ಸಾವಿರ ರೂ. ಆಧರಿಸಿ 59.69 ಲಕ್ಷ ಪರಿಹಾರ ನೀಡಲು ಹೈಕೋರ್ಟ್ ಆದೇಶ

ಬೆಂಗಳೂರು: ಗೃಹಿಣಿ ಮಾಸಿಕ ಕಾಲ್ಪನಿಕ ಆದಾಯ 30 ಸಾವಿರ ರೂ. ಆಧರಿಸಿ 59.69 ಲಕ್ಷ ರೂ. ಪರಿಹಾರ ನೀಡಲು ಹೈಕೋರ್ಟ್ ಆದೇಶಿಸಿದೆ.

ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದ ಗೃಹಿಣಿಗೆ ಕಾಲ್ಪನಿಕ ಆದಾಯ ಆಧರಿಸಿ ಹೆಚ್ಚು ಪರಿಹಾರಕ್ಕೆ ನ್ಯಾಯಪೀಠ ಸೂಚನೆ ನೀಡಲಾಗಿದೆ. ಮನೆ ಕೆಲಸಗಳನ್ನು ನಿರ್ವಹಿಸುವ ಗೃಹಿಣಿಯ ಮಾಸಿಕ ಕಾಲ್ಪನಿಕ ಆದಾಯ 30 ಸಾವಿರ ಎಂದು ಹೈಕೋರ್ಟ್‌ ಪರಿಗಣಿಸಿದ್ದು, ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರ ಸಾವಿಗೆ ₹59.69 ಲಕ್ಷ ಪರಿಹಾರ ನೀಡುವಂತೆ ಆದೇಶ ನೀಡಿದೆ.

ವಾಹನ ಅಪಘಾತ ಪರಿಹಾರ ನ್ಯಾಯಾಧೀಕರಣ ನೀಡಿರುವ ಪರಿಹಾರ ಆದೇಶ ರದ್ದು ಮಾಡಬೇಕು ಎಂದು ಕೋರಿ ವಿಮಾ ಕಂಪನಿ ಹಾಗೂ ಪರಿಹಾರ ಹೆಚ್ಚಳ ಮಾಡುವಂತೆ ಕೋರಿ ಮೃತರ ಸಂಬಂಧಿಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಹಾಗೂ ನ್ಯಾಯಮೂರ್ತಿ ತಾರಾ ವಿತಾಸ್ತ ಗಂಜು ಅವರಿದ್ದ ವಿಭಾಗೀಯ ಪೀಠದಿಂದ ಈ ಆದೇಶ ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

11.18 ಲಕ್ಷ ರೂ. ಪರಿಹಾರ ನೀಡಬೇಕು ಎಂದು ನ್ಯಾಯಾಧಿಕರಣ ಮಾಡಿದ್ದ ಆದೇಶ ರದ್ದುಗೊಳಿಸಿರುವ ಹೈಕೋರ್ಟ್ ಮೃತರ 59,69 ಲಕ್ಷ ರೂ.(ಶೇ.9 ಬಡ್ಡಿ ಸಹಿತ) ನೀಡುವಂತೆ ವಿಮಾ ಕಂಪನಿಗೆ ಸೂಚನೆ ನೀಡಿದೆ.

ಮೃತರು ಗೃಹಿಣಿಯಾಗಿದ್ದರು. ಗೃಹಿಣಿಯರ ಶ್ರಮ ಮತ್ತು ಕುಟುಂಬಕ್ಕೆ ನೀಡುವ ಕೊಡುಗೆಯನ್ನು ಕೇವಲ ಕನಿಷ್ಠ ಆದಾಯದ ಆಧಾರದಲ್ಲಿ ಅಳೆಯಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್‌ನ ‘ಶಿಶು ಪಾಲ್ ವಿರುದ್ಧ ಸುರ್ಜೀತ್’ ಪ್ರಕರಣದ ತೀರ್ಪನ್ನು ಹೈಕೋರ್ಟ್ ಉಲ್ಲೇಖಿಸಿದೆ. ಗೃಹಿಣಿಯ ಮಾಸಿಕ ಕಾಲ್ಪನಿಕ ಆದಾಯ 30 ಸಾವಿರ ರೂ. ಎಂದು ಪರಿಗಣಿಸಿ, ಭವಿಷ್ಯದ ಗಳಿಕೆಯ ಶೇ.40 ಭಾಗ ಸೇರಿಸಿ ಒಟ್ಟು ಪರಿಹಾರವನ್ನು 59.69 ಲಕ್ಷ ರೂ.ಗೆ ಹೆಚ್ಚಿಸಿ ಹೈಕೋರ್ಟ್ ಆದೇಶಿಸಿದೆ.

ಬೈಕ್‌ ಗೆ ಹಸು ಡಿಕ್ಕಿ ಹೊಡೆದಿದ್ದರಿಂದ ಅಪಘಾತ ಸಂಭವಿಸಿದೆ. ಕ್ರಿಮಿನಲ್ ನ್ಯಾಯಾಲಯದಲ್ಲಿ ಬೈಕ್‌ ಚಲಾಯಿಸುತ್ತಿದ್ದವರನ್ನು ಖುಲಾಸೆಗೊಳಿಸಲಾಗಿದೆ. ಹೀಗಾಗಿ, ಇದರಲ್ಲಿ ವಿಮಾ ಕಂಪನಿಯ ಹೊಣೆಗಾರಿಕೆ ಇಲ್ಲ ಎಂಬ ವಿಮಾ ಕಂಪನಿ ಪರ ವಕೀಲರ ವಾದವನ್ನು ಹೈಕೋರ್ಟ್ ತಳ್ಳಿ ಹಾಕಿದ್ದು, ಗೃಹಿಣಿ ಮಾಸಿಕ ಕಾಲ್ಪನಿಕ ಆದಾಯ ಆಧರಿಸಿ ಪರಿಹಾರ ನೀಡುವಂತೆ ಆದೇಶಿಸಿದೆ.

KUDA  ಹಣ ದುರುಪಯೋಗ ಪ್ರಕರಣ: ಆರೋಪಿತರ ಜಾಮೀನು ಅರ್ಜಿ ವಜಾ

ಕೊಪ್ಪಳ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ದಿನಗೂಲಿ ಆಗಿ ಕೆಲಸಕ್ಕೆ ಸೇರಿ ಪ್ರಾಧಿಕಾರದ ಆಯುಕ್ತರ ಹೆಸರಿನಲ್ಲಿ ಹಣ ದುರ್ಬಳಕೆ ಮಾಡಿಕೊಂಡ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿ ರವೀಂದ್ರ ಕುಮಾರ ಅವರ ಸಹೋದರ ಹಾಗೂ ಪತ್ನಿಯ ಜಾಮೀನು ಅರ್ಜಿ ವಜಾಗೊಳಿಸಿ ಕೊಪ್ಪಳದ ಪ್ರಧಾನ ಸಿಜೆ ಮತ್ತು ಜೆಎಂ ಎಫ್‌ಸಿ ನ್ಯಾಯಾಲಯವು ಆದೇಶ ಪ್ರಕಟಿಸಿದೆ.

ಪ್ರಕರಣದ ಸಾರಾಂಶ:

ಈ ಹಿಂದೆ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿಯಲ್ಲಿ ದಿನಗೂಲಿ ಆಧಾರದ ಮೇಲೆ ಅಕೌಂಟ್ ಹಾಗೂ ಇ.ಎಸ್.ಟಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರವೀಂದ್ರಕುಮಾರ ಎಂಬ ವ್ಯಕ್ತಿಯು ಕರ್ತವ್ಯದಿಂದ ಕಾರ್ಯಮುಕ್ತಗೊಳಿಸಿದ ನಂತರ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಹೆಸರಿನಲ್ಲಿ ಕೊಪ್ಪಳ ಹೆಚ್.ಡಿ.ಎಫ್.ಸಿ ಬ್ಯಾಂಕ್‌ ನಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿಯ ಕಡತದಲ್ಲಿ ಇಲ್ಲದ ಖಾತೆಗೆ ಸಾರ್ವಜನಿಕರಿಗೆ ನಿವೇಶನ ಕೊಡುವುದಾಗಿ ತಿಳಿಸಿ, ಅವರಿಂದ ಸದರಿ ಖಾತೆಗೆ ಹಣವನ್ನು ಹಾಕಿಸಿಕೊಂಡು ನಂತರ ಸದರಿ ಖಾತೆಯ ಮೇಲೆ ಬ್ಯಾಂಕ್‌ನಿAದ ಪಡೆದುಕೊಂಡ ಕಮಿಷನರ್ ಕೊಪ್ಪಳ ಹೆಸರಿನ ಚೆಕ್‌ ನಲ್ಲಿ ಮೊಹರು ಸೀಲ್ ಹಾಕಿ, ಬ್ಯಾಂಕ್‌ ನಲ್ಲಿ ತಾನೇ ಆಯುಕ್ತನೆಂದು ಚೆಕ್ ಸಹಿ ಮಾಡಿ ಹಣ ನಗದೀಕರಣ ಮಾಡಿಕೊಂಡು ಅಪ್ರಮಾಣಿಕವಾಗಿ ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡಿಕೊಂಡಿದ್ದ.

ತಾನು ಪ್ರಾಧಿಕಾರಕ್ಕೆ ಹಾಗೂ ಸಾರ್ವಜನಿಕರಿಗೆ ಅಕ್ರಮ ನಷ್ಟ ಉಂಟು ಮಾಡುವ ಬಗ್ಗೆ ಅರಿವಿದ್ದರೂ ಸಹ ಮತ್ತೊಬ್ಬರಂತೆ ನಟಿಸಿ, ವಂಚನೆ ಮಾಡಿದ್ದರು. ಈ ವಿಷಯವನ್ನು ಪ್ರಾಧಿಕಾರದ ಮೇಲಧಿಕಾರಿಗಳಿಗೆ ತಿಳಿಸಿ, ಬ್ಯಾಂಕ್ ನಿಂದ ದಾಖಲೆಗಳನ್ನು ಪಡೆದುಕೊಂಡು ರವೀಂದ್ರಕುಮಾರ ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಆರೋಪಿ ನಂ 03 ಅನಿಲ್ ಕುಮಾರ ತಂದೆ ರಮಾಚರ್ ಇವರ ಖಾತೆಗೆ ಈತನ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ಅನಧಿಕೃತ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರ ಖಾತೆಯಿಂದ ಒಟ್ಟು: 1,49,50,000/-ರೂಪಾಯಿಗಳು ವರ್ಗಾವಣೆಯಾಗಿರುವುದು ಮತ್ತು ಆರೋಪಿ ನಂ 04 ಇವರ ಶ್ರೀಮತಿ  ರಮಾ ಗಂಡ ರವೀಂದ್ರರವರ ಕೊಪ್ಪಳದ ಹೆಚ್‌ಡಿಎಫ್ ಬ್ಯಾಂಕ್‌ನಲ್ಲಿರುವ ಖಾತೆ ಸಂಖ್ಯೆ: 50100793355011 ಗೆ ಪ್ರಾಧಿಕಾರದ  ಹಣ ವರ್ಗಾವಣೆ ಆಗಿರುತ್ತದೆ. ಒಟ್ಟು 15 ಲಕ್ಷ ಹಣವನ್ನು ಎ2 ಆರೋಪಿ ರವಿಂದ್ರ ತನ್ನ ಹೆಂಡತಿ ಆರೋಪಿ ನಂ 04 ರಮಾರವರ ಹೆಸರಿಗೆ ಎಫ್.ಡಿ.ಗೆ  ಮಾಡಿಸಿದ್ದರು. ಉಳಿದ ಹಣವನ್ನು ಎ2 ಆರೋಪಿ ಮತ್ತು ಎ4 ಆರೋಪಿ ಇಬ್ಬರೂ ಸೇರಿ ಸ್ವಂತಕ್ಕೆ ಖರ್ಚು ಮಾಡಿಕೊಂಡಿದ್ದರು. ಪ್ರಾಧಿಕಾರದ 8,81,500/- ರೂಪಾಯಿಗಳಿಂದ ಬೆಂಗಳೂರು ಜೂವೆಲರಿ ಶಾಪ್‌ನಲ್ಲಿ ಎ2 ರವೀಂದ್ರ ಮತ್ತು  ಹೆಂಡತಿ ಎ4 ರಮಾ ಇಬ್ಬರೂ ಸೇರಿ ಚಿನ್ನಾಭರಣಗಳನ್ನು ಖರೀದಿಸಿದ್ದರು. ಈ ಹಿನ್ನೆಲೆಯಲ್ಲಿ ಡಿ ಸುರೇಶ, ಪಿಐ ಕೊಪ್ಪಳ ನಗರ ಪೋಲಿಸ್ ಠಾಣೆ ಇವರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಪ್ರಕರಣದಲ್ಲಿ ಆರೋಪಿತರಾದ ಅನಿಲ್ ಕುಮಾರ ಹಾಗೂ ಶ್ರೀಮತಿ ರಮಾ(ಆರೋಪಿ ನಂ 03 ಮತ್ತು 04)ಇವರುಗಳು ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದು, ಅರ್ಜಿಗೆ ಅಭಿಯೋಗ ಪರವಾಗಿ ತಕರಾರುಗಳನ್ನು ಸಲ್ಲಿಸಲಾಗಿತ್ತು.

ಪ್ರಕರಣದ ಪ್ರಮುಖ ಆರೋಪಿ ರವೀಂದ್ರ ಈತನು ಅನಿಲ್ ಕುಮಾರ ಈತನ ಸಹೋದರ ಹಾಗೂ ರಮಾ ಇವರ ಗಂಡನಾಗಿದ್ದು, ಕೊಪ್ಪಳ ನಗರಾಭಿವೃಧ್ದಿ ಪ್ರಾಧಿಕಾರದ ಖಾತೆಗೆ ವರ್ಗಾವಣೆ ಮಾಡುವ ಮೂಲಕ ಪ್ರಾಧಿಕಾರದ ಹಣವನ್ನು ದುರಪಯೋಗ ಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬAದಿದ್ದರಿಂದ ಆರೋಪಿತರ ಜಾಮೀನು ಅರ್ಜಿಯನ್ನು ನ್ಯಾಯಾಲಯವು ಕುಲಂಕುಷವಾಗಿ ಪರಿಶೀಲಿಸಿ ಜಾಮೀನಿಗೆ ಅರ್ಹರಾಗಿಲ್ಲವೆಂದು ಗೌರವನ್ವಿತ ನ್ಯಾಯಾಧೀಶರಾದ ತ್ರಿವೇಣಿ ಈರಗಾರ ಪ್ರಧಾನ ಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರು, ಕೊಪ್ಪಳರವರು ಆರೋಪಿ ನಂ 03 ಮತ್ತು 04 ರವರ ಜಾಮೀನು ಅರ್ಜಿಯನ್ನು ದಿ: 07-09-2026  ರಂದು ತಿರಸ್ಕರಿಸಿದ್ದಾರೆ. ಇರುತ್ತದೆಅಭಿಯೋಗ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ವೆಂಕಟೇಶ್ ವಿ.ಎ ಸರಕಾರದ ಪರವಾಗಿ ತಕರಾರುಗಳನ್ನು ಸಲ್ಲಿಸಿ ವಾದ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular