HomeLifestyleಇಲ್ಲಿದೆ ಬಿಸಿ ಬಿಸಿ ಪಾಸ್ತಾ ಬಟರ್ ಮಸಾಲಾ ಮಾಡುವ ವಿಧಾನ

ಇಲ್ಲಿದೆ ಬಿಸಿ ಬಿಸಿ ಪಾಸ್ತಾ ಬಟರ್ ಮಸಾಲಾ ಮಾಡುವ ವಿಧಾನ

ಬಾಯಿ ಹೊಸ ಹೊಸ ತಿಂಡಿಗಳನ್ನು ಬಯಸುತ್ತದೆ. ಬಿಸಿ ಬಿಸಿ ಆಹಾರ ತಿನ್ನಲು ಎಲ್ಲರೂ ಇಷ್ಟಪಡ್ತಾರೆ. ಅದ್ರಲ್ಲಿ ಪಾಸ್ತಾ ಕೂಡ ಒಂದು. ಸಾಮಾನ್ಯವಾಗಿ ಪಾಸ್ತಾ ಎಲ್ಲರಿಗೂ ಇಷ್ಟವಾಗುತ್ತದೆ.

ಮಕ್ಕಳು ಬಾಯಿ ಚಪ್ಪರಿಸ್ತಾ ಪಾಸ್ತಾ ತಿನ್ನುತ್ತಾರೆ. ಹಾಗಾಗಿ ಇಂದು ಕಡಿಮೆ ಸಮಯದಲ್ಲಿ ಪಾಸ್ತಾ ಬಟರ್ ಮಸಾಲಾ ಮಾಡೋದನ್ನು ನಾವು ಹೇಳ್ತೇವೆ ಓದಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಾಸ್ತಾ ಬಟರ್ ಮಸಾಲಾ ಮಾಡಲು ಬೇಕಾಗುವ ಪದಾರ್ಥಗಳು:

1 ಕಪ್ ಪಾಸ್ತಾ

1 ಚಮಚ ಬೆಳ್ಳುಳ್ಳಿ

1/2 ಟೀ ಚಮಚ ಶುಂಠಿ

1 ಟೊಮ್ಯಾಟೋ

2 ಈರುಳ್ಳಿ

1 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ

1 ಟೀ ಸ್ಪೂನ್ ಜೀರಿಗೆ ಪುಡಿ

1/2 ಟೀ ಸ್ಪೂನ್ ಕಸೂರಿ ಮೇಥಿ

2 ಕಪ್ ಹಾಲು

2 ಚಮಚ ಎಣ್ಣೆ

ಸ್ವಲ್ಪ ಕೊತ್ತಂಬರಿ ಸೊಪ್ಪು

ರುಚಿಗೆ ತಕ್ಕಷ್ಟು ಉಪ್ಪು

ಪಾಸ್ತಾ ಬಟರ್ ಮಸಾಲಾ ಮಾಡುವ ವಿಧಾನ:

ಒಂದು ಪ್ಯಾನ್ ಗೆ ಸ್ವಲ್ಪ ಉಪ್ಪು, 4-5 ಹನಿ ಎಣ್ಣೆ, ಪಾಸ್ತಾ ಮತ್ತು ನೀರನ್ನು ಹಾಕಿ ಬೇಯಿಸಿ. ಪಾಸ್ತಾ ಬೆಂದ ನಂತ್ರ ಅದರಲ್ಲಿರುವ ನೀರನ್ನು ಬಸಿದು ಪಕ್ಕಕ್ಕಿಡಿ.

ಇನ್ನೊಂದು ಪ್ಯಾನ್ ನಲ್ಲಿ ಎಣ್ಣೆಯನ್ನು ಹಾಕಿ ಬಿಸಿಯಾಗಲು ಬಿಡಿ. ನಂತ್ರ ಈರುಳ್ಳಿ, ಟೊಮೆಟೊ, ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ. ಅದು ತಣ್ಣಗಾದ ನಂತ್ರ ಮಿಶ್ರಣವನ್ನು ರುಬ್ಬಿಕೊಳ್ಳಿ.

ನಂತ್ರ ಅದೇ ಪ್ಯಾನ್ ಗೆ ಎಣ್ಣೆ, ರುಬ್ಬಿದ ಮಿಶ್ರಣ ಹಾಗೂ ಉಪ್ಪನ್ನು ಹಾಕಿ ಬೇಯಿಸಿ. ನಂತರ ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ ಪುಡಿ, ಜೀರಿಗೆ ಹಾಕಿ ಫ್ರೈ ಮಾಡಿ.

ಇದಕ್ಕೆ ಹಾಲನ್ನು ಹಾಕಿ ಮಿಶ್ರಣ ದಪ್ಪಗಾಗುವವರೆಗೆ ಬೇಯಿಸಿ. ಹಾಲಿನ ಜೊತೆ ಮಸಾಲೆ ಸರಿಯಾಗಿ ಬೆಂದ ನಂತ್ರ ಅದಕ್ಕೆ ಕಸೂರಿ ಮೇಥಿ ಹಾಗೂ ಪಾಸ್ತಾ ಹಾಕಿ ಮಿಕ್ಸ್ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular