HomeKarnatakaಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯಾ ಅಂತ ಈ ರೀತಿ ಚೆಕ್ ಮಾಡಿ!

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯಾ ಅಂತ ಈ ರೀತಿ ಚೆಕ್ ಮಾಡಿ!

ಬೆಂಗಳೂರು : ಸರ್ಕಾರದ ಎಲ್ಲಾ ಸೌಲಭ್ಯ ಪಡೆಯಲು , ನೇರವಾಗಿ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗಲು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆಧಾರ್ ಲಿಂಕ್ ಆದ ಖಾತೆಗೆ ಸರ್ಕಾರ ಹಣ ಜಮಾ ಮಾಡುವುದರಿಂದ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಹಾಗಾದರೆ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಹೇಗೆ..ಇಲ್ಲಿದೆ ಮಾಹಿತಿ.

1) ಆಧಾರ್ ಅಧಿಕೃತ ವೆಬ್ ಸೈಟ್ https://resident.uidai.gov.in/bank-mapper ಭೇಟಿ ನೀಡಿ.
2) ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ನೋಂದಣಿ ಮಾಡಿ ಕ್ಯಾಪ್ಚಾ ಎಂಟ್ರಿ ಮಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

3) ಆಧಾರ್ ನಂಬರ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ OTP ಬರುತ್ತೆ ಅದನ್ನು ಎಂಟ್ರಿ ಮಾಡಿ ನಂತರ Submit ಮೇಲೆ ಕ್ಲಿಕ್ ಮಾಡಿ

4) ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ತೋರಿಸುತ್ತದೆ, ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿ NPCI ಮ್ಯಾಪಿಂಗ್ ಆಗಿದ್ದರೆ Congratulations your aadhar bank maping has been done ಎಂದು ಬರುತ್ತದೆ.

ಫೋನ್ ಕರೆ ಮೂಲಕ
ಹಂತ 1: ಆಧಾರ್ ನೋಂದಾಯಿತ ಫೋನ್ ಸಂಖ್ಯೆಯೊಂದಿಗೆ *99*99*1# ಡಯಲ್ ಮಾಡಿ
ಹಂತ 2: 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ
ಹಂತ 3: ಈಗ, ಸಂಖ್ಯೆಯನ್ನು ಮತ್ತೆ ನಮೂದಿಸಿ
ಹಂತ 4: ಸಲ್ಲಿಸಿದ ನಂತರ, ಲಿಂಕ್ ಆಗಿರುವ ಸ್ಥಿತಿಯನ್ನು ಪ್ರದರ್ಶಿಸಲಾಗುತ್ತದೆ
ಅಧಿಕೃತ ವೆಬ್ ಸೈಟ್ ಮೂಲಕ
ಹಂತ 1: ಯುಐಡಿಎಐ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
ಹಂತ 2: ‘ಮೈ ಆಧಾರ್’ ಅಡಿಯಲ್ಲಿ, ‘ಆಧಾರ್ ಸೇವೆಗಳು’ ಕ್ಲಿಕ್ ಮಾಡಿ
ಹಂತ 3: ನಂತರ, ‘ಆಧಾರ್ ಲಿಂಕ್ ಸ್ಥಿತಿ’ ಆಯ್ಕೆ ಮಾಡಿ
ಹಂತ 4: 12 ಅಂಕಿಯ ಆಧಾರ್ ಸಂಖ್ಯೆ ಮತ್ತು ಭದ್ರತಾ ಕೋಡ್ ನಮೂದಿಸಿ
ಹಂತ 5: ‘ಸೆಂಡ್ ಒಟಿಪಿ’ ಕ್ಲಿಕ್ ಮಾಡಿ
ಹಂತ 6: ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಿದ ಒಟಿಪಿಯನ್ನು ನಮೂದಿಸಿ ಮತ್ತು ಸಲ್ಲಿಸಿ
ಈ ರೀತಿ ಸಬ್ಮಿಟ್ ಕೊಟ್ಟ ತಕ್ಷಣ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದಲ್ಲಿ Your aadhar not linked to a bank ಎನ್ನುವ ಸಂದೇಶ ಬರುತ್ತದೆ.

ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿ NPCI ಮ್ಯಾಪಿಂಗ್ ಆಗಿದ್ದರೆ Congratulations your aadhar bank maping has been done ಎಂದು ಬರುತ್ತದೆ.ಒಂದು ವೇಳೆ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದಿದ್ದರೆ ನೀವು ATM ಗಳ ಮೂಲಕ ಕೂಡ ಮಾಡಿಸಬಹುದು, ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಇರುವ ಬ್ಯಾಂಕ್ ಗಳಲ್ಲಿ ಆಯಾ ಬ್ಯಾಂಕ್ ಆಪ್ ಗಳನ್ನು ಬಳಸಿ ಮಾಡಬಹುದು. ಅಥವಾ ಬ್ಯಾಂಕ್ ಶಾಖೆಗೆ ಹೋಗಿ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸುವ ಮೂಲಕ ಕೂಡ ಮಾಡಿಸಬಹುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular