ಕಳೆದು ಹೋಗಿದ್ದ ವ್ಯಾಲೆಟ್‌ ಗ್ರಾಹಕನಿಗೆ ಹಿಂದಿರುಗಿಸಿದ ಬೆಂಗಳೂರಿನ ಕೆಫೆ

ನಾವು ಹೊರಗೆ ಹೋದ ಸಂದರ್ಭದಲ್ಲಿ ನಮ್ಮ ವಸ್ತುಗಳನ್ನು ಮರೆತು ಬರುವುದು ಸಾಮಾನ್ಯವಾದ ಸಂಗತಿ. ಅದರಲ್ಲೂ ನಮ್ಮ ವ್ಯಾಲೆಟ್‌ಗಳನ್ನು ಹಾಗೆ ಮರೆತು ಕಳೆದುಕೊಂಡ ನಿದರ್ಶನಗಳು ನಮ್ಮಲ್ಲಿ ಅನೇಕರಿಗೆ ಆಗಿಯೇ ಇರುತ್ತದೆ.

ಬೆಂಗಳೂರಿನ ರೆಸ್ಟೋರೆಂಟ್ ಒಂದಕ್ಕೆ ಭೇಟಿ ಕೊಟ್ಟಿದ್ದ ನೆಟ್ಟಿಗ ರೋಹಿತ್‌ ಘೂಮ್ರೇ ಅಲ್ಲಿ ತಮ್ಮ ವ್ಯಾಲೆಟ್ ಮರೆತು ಹೊರಟಿದ್ದಾರೆ. ಈ ವ್ಯಾಲೆಟ್‌ ಕಂಡ ರೆಸ್ಟೋರೆಂಟ್ ಸಿಬ್ಬಂದಿಗೆ ಅವರನ್ನು ಸಂಪರ್ಕಿಸಿ ವ್ಯಾಲೆಟ್ ಹಿಂದಿರುಗಿಸಬೇಕೆಂದರೆ, ಅಲ್ಲಿ ಅವರ ಸಂಪರ್ಕದ ವಿವರಗಳೂ ಸಿಕ್ಕಿಲ್ಲ! ಆದರೂ ಸಹ ರೆಸ್ಟೋರೆಂಟ್ ಸಿಬ್ಬಂದಿ ಹೇಗೋ ಮಾಡಿ ವ್ಯಾಲೆಟ್‌ ಅನ್ನು ಅದರ ಮಾಲೀಕರಿಗೆ ಹಿಂದಿರುಗಿಸಿದ್ದಾರೆ.

ಡೆವಾಪ್ಸ್‌ ತಂತ್ರಜ್ಞ ರೋಹಿತ್‌ರ ಹೆಸರನ್ನು ಗೂಗಲ್‌ನಲ್ಲಿ ಟೈಪ್ ಮಾಡಿ, ಅವರ ವಿವರಗಳನ್ನು ಸಂಗ್ರಹಿಸಿದ ಕೆಫೆ ಸಿಬ್ಬಂದಿ, ಅವರಿಗೆ ತಮ್ಮ ವ್ಯಾಲೆಟ್ ಹಿಂದಿರುಗಿಸಿದ್ದಾರೆ.

“ಬೆಂಗಳೂರು ಎಂದರೆ ಅದೇ ಬೇರೆ. ನನ್ನ ಮುಖ್ಯವಾದ ದಾಖಲೆಗಳು ಹಾಗು ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳಿದ್ದ ವ್ಯಾಲೆಟ್ ಕಳೆದುಕೊಂಡಿದ್ದೆ. ಗಾಬರಿಗೊಂಡಿದ್ದೆ. ಅಚ್ಚರಿ ಪಡುವ ಬೆಳವಣಿಗೆಯಲ್ಲಿ, ನೆನ್ನೆ ನನಗೆ ಕೆಫೆಯಿಂದ ಕರೆಯೊಂದು ಬಂದಿತ್ತು. ಅವರು ನನ್ನ ನಂಬರ್‌ ಹೇಗೆ ಪತ್ತೆ ಮಾಡಿದರು? ಅವರು ನನ್ನ ಹೆಸರನ್ನು ಗೂಗಲ್ ಮಾಡಿದ್ದಾರೆ. ಇದು ನನ್ನ ಪೀಕ್ ಬೆಂಗಳೂರು ಸಂದರ್ಭ ಎಂದು ಭಾವಿಸುತ್ತೇನೆ,” ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ ರೋಹಿತ್‌ ಘುಮ್ರೇ.

ಇದೇ ವೇಳೆ, ಆ ಕೆಫೆಯ ಹೆಸರು ಏನೆಂದು ಈ ಟ್ವೀಟ್ ಹಾಗೂ ಅದರ ಕಾಮೆಂಟ್‌ಗಳಿಂದ ತಿಳಿದು ಬಂದಿಲ್ಲ.

https://twitter.com/ghumare64/status/1651112745625088000?ref_src=twsrc%5Etfw%7Ctwcamp%5Etweetembed%7Ctwterm%5E1651112745625088000%7Ctwgr%5E3e35c513c2d1a14411fc0d76ed3674ad12c548b0%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fheres-how-a-bengaluru-cafe-returned-a-mans-lost-wallet-see-post-2366168-2023-04-29

https://twitter.com/ksprashu/status/1651275992688885760?ref_src=twsrc%5Etfw%7Ctwcamp%5Etweetembed%7Ctwterm%5E1651275992688885760%7Ctwgr%5E3e35c513c2d1a14411fc0d76ed3674ad12c548b0%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fheres-how-a-bengaluru-cafe-returned-a-mans-lost-wallet-see-post-2366168-2023-04-29

https://twitter.com/BenedictSheela/status/1652113055898279936?ref_src=twsrc%5Etfw%7Ctwcamp%5Etweetembed%7Ctwterm%5E1652113055898279936%7Ctwgr%5E3e35c513c2d1a14411fc0d76ed3674ad12c548b0%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fheres-how-a-bengaluru-cafe-returned-a-mans-lost-wallet-see-post-2366168-2023-04-29

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read